ಮಂಗಳೂರು: ಮಂಗಳೂರು ಮಹಾನಗರದ ಜೆಪ್ಪು ಕಡೆಕಾರು, ಜೆಪ್ಪಿನಮೊಗರು ನೇತ್ರಾವತಿ ನದಿ ತೀರದ ಪ್ರದೇಶದಲ್ಲಿನ ನೇತ್ರಾವತಿ ಸಭಾಂಗಣದಲ್ಲಿ ಕೃಷ್ಣ ಜೆ. ಪಾಲೆಮಾರ್ ನೇತೃತ್ವದ ನಾಲ್ಕು ಸಭಾಭವನಗಳ ಲೋಕಾರ್ಪಣೆಗೆ ಚಾಲನೆ ಚಾಲನೆ ನೀಡುವ ಸಮಾರಂಭ ಜರುಗಿತು.
ಮಾಜಿ ಸಚಿವ ಶ್ರೀ ಕೃಷ್ಣ ಜೆ. ಪಾಲೆಮಾರ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಸಭೆ ಹಾಗೂ ಸಮಾರಂಭಗಳಿಗಾಗಿ ನಿರ್ಮಿಸಲಾದ ನೇತ್ರಾವತಿ ಸಭಾಭವನ, ಪಾಲೆಮಾರ್ ಕನ್ವೆನ್ಶನ್ ಸೆಂಟರ್, ಪಾಲೆಮಾರ್ ಫಾರ್ಮ್ಸ್ ಮತ್ತು ಪಾಲೆಮಾರ್ ಗಾರ್ಡನ್ ಸೇರಿ ನಾಲ್ಕು ಸೌಲಭ್ಯಗಳ ಲೋಕಾರ್ಪಣೆಗೆ ಸಿದ್ಧತೆ ನಡೆದಿದ್ದು, ಅಧಿಕೃತ ಲೋಕಾರ್ಪಣೆಯು ಶನಿವಾರ, ಮೇ ೨೩, ೨೦೨೬ರಂದು ನಡೆಯಲಿದೆ. ಅದಕ್ಕೂ ಮುನ್ನ ಶುಕ್ರವಾರ ಬೆಳಿಗ್ಗೆ ೧೦.೩೦ಕ್ಕೆ ಲೋಕಾರ್ಪಣೆಗೆ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಚಾಲನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣವನ್ನು ಯೋಗಿಶ್ ಅವರು ನೆರವೇರಿಸಿದರು. ಬಳಿಕ ವೇದಿಕೆಯಲ್ಲಿ ಗಣ್ಯರನ್ನು ಫಲಪುಷ್ಪ ನೀಡಿ ಗೌರವಿಸಲಾಯಿತು. ದೀಪ ಪ್ರಜ್ವಲನೆಯ ಮೂಲಕ ಲೋಕಾರ್ಪಣೆಗೆ ಚಾಲನೆ ನೀಡಲಾಯಿತು. ವೇದಿಕೆಯಲ್ಲಿ ಪಾಲೆಮಾರ್ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಕದ್ರಿ ನವನೀತ ಶೆಟ್ಟಿಯವರು ನೆರವೇರಿಸಿದರು.
ಮಾತೆ ಶಕುಂತಲಾ ನರೇಂದ್ರನಾಥ ಕೋಟೆಕಾರ್ ಮಾತನಾಡಿ, ಚಾಲನೆ ಒಂದು ದೈವಿಕ ಶಕ್ತಿಯೊಂದಿಗೆ ಸಂಬಂಧ ಹೊಂದಿದೆ ಎಂದು ಅಭಿಪ್ರಾಯಪಟ್ಟರು. ಸುಮಾರು 40 ವರ್ಷಗಳ ಬಳಿಕ ಮತ್ತೆ ನೇಮೋತ್ಸವ ನಡೆದಿರುವುದು ಕಾರ್ಣಿಕ ಎಂದು ಅವರು ಹೇಳಿದರು. ಈ ಸ್ಥಳದ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ದೈವಿಕ ಶಕ್ತಿ ಅಡಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಶ್ರೀ ಶ್ರೀ ನಿತಿನ್ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿ ಆಶೀರ್ವಚನ ನೀಡುತ್ತಾ, ಈ ಕ್ಷೇತ್ರದ ಮಹಿಮೆ ಅಧ್ಯಾತ್ಮಿಕ ಚಿಂತನೆಯಿAದ ಬಂದಿರುವುದು ಎಂದು ಹೇಳಿದರು. ಸಭಾಂಗಣಗಳು ಕೇವಲ ಸಮಾರಂಭಗಳ ಸ್ಥಳವಲ್ಲ, ಅವು ಆತ್ಮೀಯತೆ ಮತ್ತು ಸಮಾಜದ ಅಭಿವೃದ್ಧಿಗೆ ಕೇಂದ್ರವಾಗಬೇಕು ಎಂದು ಹೇಳಿದರು. ಲೋಕ ಸಮೃದ್ಧಿಯತ್ತ ಸಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು.
ಶ್ರೀ ಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಈ ಕ್ಷೇತ್ರದ ಪವಿತ್ರತೆಯನ್ನು ಅನುಭವಿಸಬೇಕು ಎಂದು ಹೇಳಿದರು. ಧರ್ಮ ಮತ್ತು ಪ್ರೀತಿಯ ಅಡಿಪಾಯದಲ್ಲಿ ಸಮಾಜ ಬೆಳೆಯಬೇಕು ಎಂದು ಹೇಳಿದರು. ಕೃಷ್ಣ ಜೆ. ಪಾಲೆಮಾರ್ ಅವರ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.
ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, ನೇತ್ರಾವತಿ ತಟದಲ್ಲಿರುವ ಈ ಸಭಾಭವನಗಳು ಸಾರ್ವಜನಿಕ ಉಪಯೋಗಕ್ಕೆ ಸಮರ್ಪಿತವಾಗಿವೆ ಎಂದು ಹೇಳಿದರು. ತಮ್ಮ ಕುಟುಂಬದ ಹಿನ್ನೆಲೆ ಹಾಗೂ ಈ ಸ್ಥಳದೊಂದಿಗೆ ಇರುವ ಸಂಬAಧವನ್ನು ಹಂಚಿಕೊAಡರು. ಸಾಂಸ್ಕೃತಿಕ ಮತ್ತು ಸಾಮಾಜಿಕ ಬೆಳವಣಿಗೆಯ ಮೂಲಕ ಸಮುದಾಯ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಈ ಯೋಜನೆಗಳು ಒಂದು ಮಹತ್ವದ ಸಾಧನೆ ಎಂದು ಹೇಳಿದರು. ಪಾಲೆಮಾರ್ ಅವರನ್ನು ತಮ್ಮ ರಾಜಕೀಯ ಗುರುಗಳಾಗಿ ಗುರುತಿಸಿ, ಸಮಾಜಮುಖಿ ಕಾರ್ಯಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. ಈ ರೀತಿಯ ಯೋಜನೆಗಳು ಮುಂದಿನ ಪೀಳಿಗೆಗೆ ಉಪಯುಕ್ತವಾಗಲಿದೆ ಎಂದು ಹೇಳಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









