ಮಂಗಳೂರು ಸಮೀಪದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಇಬ್ಬರು ಖದೀಮರನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ ಕಳವು ಮಾಡಲಾಗಿದ್ದ ಬೈಕ್ ಹಾಗೂ ಎರಡು ಮೊಬೈಲ್ ಫೋನ್ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಸುರತ್ಕಲ್ ಮೂಲದ ಮೊಹಮ್ಮದ್ ರಾಝಿಕ್ (36) ಮತ್ತು ಬೈಕಂಪಾಡಿಯ ಉಬೈದತ್ ಹೈದರ್ (31) ಎಂದು ಗುರುತಿಸಲಾಗಿದೆ. ಮೇ 18ರ ಸೋಮವಾರದಂದು ಮುಲ್ಕಿ ಜಂಕ್ಷನ್ ಹತ್ತಿರದ ಅಪೋಲೊ ಫಾರ್ಮ್ ಬಳಿ ಸಾರ್ವಜನಿಕರೊಬ್ಬರು ನಿಲ್ಲಿಸಿದ್ದ ಹೋಂಡಾ ಯುನಿಕಾರ್ನ್ ಮೋಟಾರ್ ಸೈಕಲ್ ಅನ್ನು ಈ ಆರೋಪಿಗಳು ಕದ್ದುಕೊಂಡು ಪರಾರಿಯಾಗಿದ್ದರು.
ಕಾರ್ಯಾಚರಣೆ ಕೈಗೊಂಡ ಮುಲ್ಕಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಹಾಗೂ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಂದ ವಶಪಡಿಸಿಕೊಳ್ಳಲಾದ ಬೈಕ್ನ ಅಂದಾಜು ಮೌಲ್ಯ 20 ಸಾವಿರ ರೂಪಾಯಿ ಹಾಗೂ ಮೊಬೈಲ್ಗಳ ಮೌಲ್ಯ ಸುಮಾರು 18 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಸದ್ಯ ಬಂಧಿತರಿಬ್ಬರನ್ನೂ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು









