ಮಂಗಳೂರು : ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ದಕ್ಷಿಣ ಪೊಲೀಸ್ ಠಾಣೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದೀರ್ಘಕಾಲದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಳೇ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಅಜಿಲಮೊಗರು ಮಾವಿನಕಟ್ಟೆಯ ನಿವಾಸಿಯಾದ ಮಹಮದ್ ಅಶ್ರಫ್ (ಅಲಿಯಾಸ್ ಅಜ್ಜು / ಸಮೀರ್) ಎಂಬಾತನೇ ಪೊಲೀಸರ ಅತಿಥಿಯಾದ ಖದೀಮ.
ಬಂಧಿತ ಆರೋಪಿಯ ವಿರುದ್ಧ ಕರಾವಳಿಯ ವಿವಿಧೆಡೆ ಸರಣಿ ಅಪರಾಧ ಪ್ರಕರಣಗಳು ದಾಖಲಾಗಿವೆ. ಪ್ರಮುಖವಾಗಿ ಪಾಂಡೇಶ್ವರ, ಸುರತ್ಕಲ್, ಬಂಟ್ವಾಳ, ಉಪ್ಪಿನಂಗಡಿ ಹಾಗೂ ಪುತ್ತೂರು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಮನೆಗಳ್ಳತನ, ದರೋಡೆ ಹಾಗೂ ದಾರಿಹೋಕರನ್ನು ಲೂಟಿ ಮಾಡಿದ ಗಂಭೀರ ಆರೋಪಗಳಿವೆ. ಸದ್ಯ ಬುಧವಾರದಂದು ಈತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಕೋರ್ಟ್ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









