ಮಂಗಳೂರು : ವಿವಿಧ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಕರಾವಳಿ ಭಾಗದ 12 ಮಂದಿ ಅರ್ಜಿದಾರರಿಗೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಒಟ್ಟು 9,83,375 ರೂಪಾಯಿಗಳ ಆರ್ಥಿಕ ನೆರವು ಮಂಜೂರಾಗಿದೆ. ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಅವರು ಸಂತ್ರಸ್ತರ ಪರವಾಗಿ ಸಲ್ಲಿಸಿದ್ದ ವಿಶೇಷ ಮನವಿ ಹಾಗೂ ಶಿಫಾರಸ್ಸಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಈ ಪರಿಹಾರದ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿದೆ.
ಇದರಲ್ಲಿ ಮೂರು ಪ್ರಮುಖ ಪ್ರಕರಣಗಳನ್ನು ವಿಶೇಷ ಆದ್ಯತೆಯಡಿ ಪರಿಗಣಿಸಲಾಗಿದ್ದು, ಉಡುಪಿ ಜಿಲ್ಲೆಯ ಶ್ರೀಮತಿ ಮರಿಯಾ ತೆರೆಸ ಡಿಸೋಜಾ ಅವರಿಗೆ ಗರಿಷ್ಠ 3 ಲಕ್ಷ ರೂಪಾಯಿ, ಜಪ್ಪಿನಮೊಗರಿನ ಶ್ರೀ ಕನ್ನನಗೌಡ ಹೇಮನಗೌಡ ಅವರಿಗೆ 2 ಲಕ್ಷ ರೂಪಾಯಿ ಹಾಗೂ ಶ್ರೀ ಕೃಷ್ಣ ಮುರ್ಡೇಶ್ವರ ನಾಯ್ಕ ಅವರಿಗೆ 2 ಲಕ್ಷ ರೂಪಾಯಿಗಳ ವಿಶೇಷ ಧನಸಹಾಯ ಲಭಿಸಿದೆ. ಉಳಿದಂತೆ ಸುಳ್ಯದ ಶ್ರೀಮತಿ ನೆಬಿಸ ಅವರಿಗೆ 79,747 ರೂಪಾಯಿ, ಮಂಗಳೂರಿನ ಅಬ್ದುಲ್ ಖಾದರ್ ಅವರಿಗೆ 59,066 ರೂಪಾಯಿ, ಕುದ್ರೋಳಿಯ ಶ್ರೀಮತಿ ಪುಷ್ಪಲತಾ ಅವರಿಗೆ 31,893 ರೂಪಾಯಿ ಹಾಗೂ ಉಡುಪಿಯ ಅಬ್ದುಲ್ ಹಮೀದ್ ಅವರಿಗೆ 25,000 ರೂಪಾಯಿ ಬಿಡುಗಡೆಗೊಳಿಸಲಾಗಿದೆ.
ಇದೇ ಯೋಜನೆಯಡಿ ಮೂಡಬಿದ್ರಿಯ ಶ್ರೀಮತಿ ಪದ್ಮಾವತಿ ಅವರಿಗೆ 24,217 ರೂಪಾಯಿ, ಜಪ್ಪಿನಮೊಗರಿನ ಶ್ರೀಮತಿ ರೂಪಾ ರೈ ಅವರಿಗೆ 23,500 ರೂಪಾಯಿ, ಮಂಗಳೂರಿನ ಶ್ರೀ ಹಮೀದ್ ಅವರಿಗೆ 22,685 ರೂಪಾಯಿ, ಕಾಟಿಪಳ್ಳದ ಶ್ರೀ ಅಹಮ್ಮದ್ ಬಾವಾ ಅವರಿಗೆ 8,737 ರೂಪಾಯಿ ಮತ್ತು ಮಂಗಳೂರಿನ ಶ್ರೀ ಮಹಮ್ಮದ್ ಅನ್ಸರ್ ಅವರಿಗೆ 8,500 ರೂಪಾಯಿಗಳ ವೈದ್ಯಕೀಯ ನೆರವು ದೊರೆತಿದೆ. ಈ ಮಹತ್ವದ ಆರ್ಥಿಕ ಸಹಾಯದ ಅಧಿಕೃತ ಬಿಡುಗಡೆ ಪತ್ರಗಳನ್ನು ಮಂಗಳೂರು ಮಹಾನಗರ ಪಾಲಿಕೆ ಆವರಣದಲ್ಲಿರುವ ಶಾಸಕ ಐವನ್ ಡಿಸೋಜ ಅವರ ಕಚೇರಿಯಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









