
ಮಂಗಳೂರು : ಮಂಗಳೂರಿನ ಕೆ.ಪಿ.ಟಿ ಬಳಿ ಇರುವ ಎಸ್. ಕ್ಯೂಬ್ ಸೆಂಟರ್ ಸಭಾಂಗಣದಲ್ಲಿ ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ಮಂಗಳೂರು ಘಟಕದ ಮಹಾಸಭೆಯು ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಸಾಮಾನ್ಯ ಸಭೆಯ ಪ್ರಮುಖ ಪ್ರಕ್ರಿಯೆಯಾಗಿ ಮುಂದಿನ 2026-28ರ ದ್ವೈವಾರ್ಷಿಕ ಅವಧಿಗೆ ಹೊಸ ಆಡಳಿತ ಮಂಡಳಿಯನ್ನು ಸರ್ವಾನುಮತದಿಂದ ಆರಿಸಲಾಯಿತು. ಸೊಸೈಟಿಯ ಅಧ್ಯಕ್ಷರಾಗಿ ಮುರಳಿ ಹೊಸಮಜಲು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಿ.ಎಮ್. ಸತೀಶನ್ ಅವರು ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಪುನರಾಯ್ಕೆಗೊಂಡಿದ್ದಾರೆ.
ನೂತನ ಸಮಿತಿಯ ಪ್ರಮುಖ ಜವಾಬ್ದಾರಿಗಳಿಗೆ ಅಜಯಕುಮಾರ್ (ಖಜಾಂಚಿ), ವಾಸಂತಿ ನಾಯರ್ (ಉಪಾಧ್ಯಕ್ಷೆ), ಮಂಜು ಅಜಿತ್ (ಜೊತೆ ಕಾರ್ಯದರ್ಶಿ) ಹಾಗೂ ರವೀಂದ್ರನಾಥ್ (ಜೊತೆ ಖಜಾಂಚಿ) ಅವರುಗಳು ನೇಮಕಗೊಂಡಿದ್ದಾರೆ. ಇವರೊಂದಿಗೆ ನಿರ್ದೇಶಕ ಮಂಡಳಿಯ ಸದಸ್ಯರಾಗಿ ವಿಜಯಕುಮಾರ್, ಎಮ್.ವಿ. ರಾಜನ್ ಮತ್ತು ಎ.ಎಸ್. ಮೋಹನ್ ಜವಾಬ್ದಾರಿ ವಹಿಸಿಕೊಂಡರೆ, ಸಮಿತಿಯ ಕಾರ್ಯಕಾರಿ ಸದಸ್ಯರಾಗಿ ಜೋತಿಷ್ ಕುಮಾರ್, ಜಯಲಕ್ಷ್ಮೀ ಚಂದ್ರಮೋಹನ್, ಮಣಿಕಂಠನ್, ವಿನೋದ್ ರಾಜ್, ಹರೀಶ್ ಗೋವಿಂದ್, ದೇವರಾಜ್ ಹಾಗೂ ವಿನಯನ್ ನಾಯರ್ ಅವರುಗಳು ಆಯ್ಕೆಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ಸೊಸೈಟಿಯ ಮಹಿಳಾ ವಿಭಾಗಕ್ಕೂ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅಧ್ಯಕ್ಷೆಯಾಗಿ ಸುಜಾತಾ ನಾಯರ್, ಕಾರ್ಯದರ್ಶಿಯಾಗಿ ಶ್ರೀಜಾ ನಂಬಿಯಾರ್ ಮತ್ತು ಖಜಾಂಚಿಯಾಗಿ ಗೋಪಿಕಾ ರಾಣಿ ಅವರುಗಳು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇವರಿಗೆ ಬೆಂಬಲವಾಗಿ ಉಪಾಧ್ಯಕ್ಷೆಯಾಗಿ ಪ್ರಭಾ ವಿಜಯಕುಮಾರ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ಅನಿತಾ ಜಯಚಂದ್ರನ್ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಇಡೀ ಚುನಾವಣಾ ಪ್ರಕ್ರಿಯೆಯನ್ನು ಉಡುಪಿ ಘಟಕದ ಸಜಿ ಪಿಳ್ಳೈ ಅವರು ಚುನಾವಣಾ ಅಧಿಕಾರಿಯಾಗಿ ಹಾಗೂ ಮೋಹನ್ ದಾಸ್ ಅವರು ವೀಕ್ಷಕರಾಗಿ ಆಗಮಿಸಿ ಅತ್ಯಂತ ವ್ಯವಸ್ಥಿತವಾಗಿ ನಡೆಸಿಕೊಟ್ಟರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









