ಶಾರ್ಟ್ ಸರ್ಕ್ಯೂಟ್ ನಿಂದ ಜನರಿಕ್ ಔಷಧ ಮಳಿಗೆ ಭಸ್ಮ

Tuesday, August 6th, 2019
genaric

ಮಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದ ಪ್ರಧಾನ ಮಂತ್ರಿ ಜನರಿಕ್ ಔಷಧ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ನಗರದ ತೊಕ್ಕೊಟ್ಟು ಒಳಪೇಟೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಈ ಘಟನೆಯಿಂದ ಲಕ್ಷಾಂತರ ರೂ. ಮೌಲ್ಯದ ಔಷಧಿಗಳು, ಫ್ರಿಡ್ಜ್ ಸೇರಿ‌ದಂತೆ ವಿವಿಧ ವಸ್ತುಗಳು ಸುಟ್ಟು ಭಸ್ಮವಾಗಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಬೆಂಕಿ‌ ನಂದಿಸುವ ಕಾರ್ಯ ಮಾಡಿತು. ಕಾರ್ಯಾಚರಣೆ ವೇಳೆ ಔಷಧಿ ಅಂಗಡಿಯಲ್ಲಿದ್ದ ಬ್ಯಾಟರಿ ಸ್ಪೋಟಗೊಂಡ ಪರಿಣಾಮ ಅಗ್ನಿಶಾಮಕ ದಳದ ಸಿಬ್ಬಂದಿಯ ಮುಖಕ್ಕೆ ಗಾಯವಾದ ಘಟನೆ ನಡೆಯಿತು. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ […]

ದಂಬೇಲ್‌ನಲ್ಲಿ ನದಿ ನೀರಿನಲ್ಲಿ ಪುತ್ತೂರು ಯುವಕನ ಶವ ಪತ್ತೆ

Friday, August 2nd, 2019
sudarshan

ಮಂಗಳೂರು : ಪಣಂಬೂರಿನ ಎನ್‌ಎಂಪಿಟಿ ಕ್ಯಾಂಟೀನಿನಲ್ಲಿ ಕೆಲಸ ಮಾಡುತ್ತಿದ  ಪುತ್ತೂರು ಬಲ್ನಾಡು ಗ್ರಾಮದ ಉಜ್ರುಪಾದೆಯ ಸುದರ್ಶನ ನಾಯ್ಕಾ (22) ಅವರು ಶವವಾಗಿ ಮಂಗಳೂರಿನ ದಂಬೇಲ್‌ನಲ್ಲಿ ಫಲ್ಗುಣಿ ನದಿ ತೀರದಲ್ಲಿ ಪತ್ತೆಯಾಗಿದೆ. ಗುರುವಾರ ಬೆಳಗ್ಗೆ ದಂಬೇಲ್‌ನಲ್ಲಿ ನದಿ ನೀರಿನಲ್ಲಿ ಶವವೊಂದು ತೇಲುತ್ತಿರುವ ಬಗ್ಗೆ ಸಾರ್ವಜನಿಕರು ಉರ್ವ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು. ಸುದರ್ಶನ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದ್ದು, ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಸುದರ್ಶನ್ ಅವರು […]

ಹಿರಿಯ ತುಳು ಸಾಹಿತಿ ಎಂ.ಕೆ.ಸೀತಾರಾಮ್ ಕುಲಾಲ್ ನಿಧನ

Sunday, July 28th, 2019
seetharam kulal

ಮಂಗಳೂರು  : ಹಿರಿಯ ತುಳು ಸಾಹಿತಿ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಕೆ.ಸೀತಾರಾಮ್ ಕುಲಾಲ್ (78) ಭಾನುವಾರ ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸೀತಾರಾಮ್ ಕುಲಾಲ್, ತಮ್ಮ ಸ್ವ ಗೃಹದಲ್ಲಿ ನಿಧನರಾದರು. ಇವರ ಸಾವಿನಿಂದ ತುಳು ಚಿತ್ರರಂಗ ಹಾಗೂ ತುಳು ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ ಉಂಟಾಗಿದೆ. ಸೀತಾರಾಮ್ ಕುಲಾಲ್ ಅವರು ಮೊದಲು ದಾಸಿ ಪುತ್ರ ಕನ್ನಡ ನಾಟಕದ ಮೂಲಕ ರಂಗ ಭೂಮಿ ಪ್ರವೇಶಿಸಿದರು. ಆ ನಂತರ ಪಗೆತ ಪುಗೆ ತುಳು ಚಲನ […]

ಶೌಚಾಲಯಕ್ಕೆ ಎಳೆದೊಯ್ದು 2 ವರ್ಷದ ಮಗುವಿನ ಚಿನ್ನ ಕಳ್ಳತನ

Friday, July 26th, 2019
burka thief

ಮಂಗಳೂರು : ಬುರ್ಖಾಧಾರಿ  ಮಹಿಳೆಯೊಬ್ಬಳು  2 ವರ್ಷದ ಮಗುವನ್ನು  ಶೌಚಾಲಯಕ್ಕೆ ಎಳೆದೊಯ್ದು ಎರಡೂವರೆ ಪವನ್ ಚಿನ್ನದ ಅಭರಣಗಳನ್ನು ಕಳ್ಳತನ ಮಾಡಿದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜುಲೈ 24 ರ ಬುಧವಾರ ನಗರದ ಹಂಪನಕಟ್ಟೆಯ ಮಿಲಾಗ್ರಿಸ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಾಹ ಸಮಾರಂಭದಲ್ಲಿ ವಿವಾಹ ಸಮಾರಂಭ ನಡೆಯುತ್ತಿದ್ದು, ಮದುವೆಗೆ ಬಂದಿದ್ದ 2 ವರ್ಷದ ಮಗುವನ್ನು ಸುಮಾರು ಮಧ್ಯಾಹ್ನ 2.30 ರ ವೇಳೆಗೆ ಎಳೆದೊಯ್ದು ಬುರ್ಕಾಧಾರಿ ಮಹಿಳೆ ಮಗು ಧರಿಸಿದ್ದ ಒಂದು 1.5 ಪವನ್ ಚಿನ್ನದ ಸರ ಮತ್ತು […]

ಆಳ್ವಾಸ್ ಪಿಯು ಕಾಲೇಜು ವಾಣಿಜ್ಯ, ಕಲಾ ಸಂಘ ಉದ್ಘಾಟನೆ

Saturday, July 13th, 2019
Alvas-PU-College

ಮೂಡುಬಿದಿರೆ: ಕಲಿಯುವಂತಹ ಶಿಕ್ಷಣ ಜೀವನಕ್ಕೆ ಪಾಠ ಆಗಬೇಕು. ಕಲಿತ ವಿಷಯಗಳು ಭವಿಷ್ಯವನ್ನು ನಿರ್ಧರಿಸಲು ಅವಕಾಶ ಮಾಡಿಕೊಡುತ್ತವೆ. ವಿದ್ಯಾರ್ಥಿಗಳು ಸಮರ್ಪಕವಾದ ಗುರಿಯೊಂದಿಗೆ ಸಾಧಿಸಬೇಕು ಎಂದು ಮಾಜಿ ವಿಧಾನಸಭಾ ಸದಸ್ಯಕ್ಯಾ.ಗಣೇಶ್‍ಕಾರ್ಣಿಕ್ ಹೇಳಿದರು. ಆಳ್ವಾಸ್ ಪದವಿ ಪೂರ್ವಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಶನಿವಾರ ಪದವಿ ಪೂರ್ವ ವಿಭಾಗದ ವಾಣಿಜ್ಯ ಹಾಗೂ ಕಲಾ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಪರಂಪರೆ ಜೀವನ ಮೌಲ್ಯಗಳನ್ನು ಕೊಡುತ್ತದೆ. ಆದರೆ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ನೈತಿಕ ಪ್ರಜ್ಞೆಯ ಕೊರತೆಯಿದೆ. ಹೊರಜಗತ್ತಿನ ವೈಭವಗಳು ಅಂತರಂಗದ ಸೌಂದರ್ಯವನ್ನು ನೀಡದು. ಆದ್ದರಿಂದ ಮೌಲ್ಯಧಾರಿತ […]

ಸುರತ್ಕಲ್ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಮರಳಿ ಕರ್ತವ್ಯಕ್ಕೆ ಸೇರ್ಪಡೆ

Friday, July 12th, 2019
Ramakrishna

ಮಂಗಳೂರು : ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ಜಾಲವನ್ನು ಮಟ್ಟಹಾಕಲು ಅಸಡ್ಡೆ ಹಾಗೂ ಇತರ ವಿಚಾರಗಳಲ್ಲಿ ಕರ್ತವ್ಯ ಲೋಪ ಎಸಗಿದ ಕಾರಣಕ್ಕೆ ಅಮಾನತು ಶಿಕ್ಷೆಗೆ ಒಳಗಾಗಿದ್ದ ಸುರತ್ಕಲ್ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಕೆ ಜಿ ರಾಮಕೃಷ್ಣ ಅವರನ್ನು ಮರಳಿ ಕರ್ತವ್ಯಕ್ಕೆ ಸೇರ್ಪಡೆಗೊಳಿಸಲಾಗಿದೆ. ಸುರತ್ಕಲ್ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಕೆ ಜಿ ರಾಮಕೃಷ್ಣ ಅವರ ವಿರುದ್ಧದ ಶಿಸ್ತು ಕ್ರಮ ಬಾಕಿ ಇರಿಸಿ, ಮತ್ತೆ ಕರ್ತವ್ಯಕ್ಕೆ ಹಾಜರಾಗುವಂತೆ ಕಮಿಷನರ್ ಸೂಚಿಸಿದ್ದಾರೆ. ರಾಮಕೃಷ್ಣ ಅವರು ಜುಲೈ 10ರಂದು ರಾತ್ರಿ […]

ಸೆಕ್ಸ್ ವೀಡಿಯೊ ಹಂಚಿಕೆ ಪ್ರಕರಣ ಐವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

Friday, July 5th, 2019
Group-sex

ಪುತ್ತೂರು: ಕಾಲೇಜು ವಿದ್ಯಾರ್ಥಿನಿಯ ಮೇಲೆ ಗ್ರೂಪ್ ಸೆಕ್ಸ್ ಮಾಡಿದ, ಅಶ್ಲೀಲ ವೀಡಿಯೊವನ್ನು ಸಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿದ ಆರೋಪದಲ್ಲಿ ಪುತ್ತೂರು ನಗರ ಪೊಲೀಸರು ಕಬಕ ನಿವಾಸಿ ಚಂದ್ರಶೇಖರ ಮಯ್ಯ, ಮುರಳೀ ಪರ್ಲಡ್ಕ, ಪವನ್ ಕರ್ಲ್ಲರ್ಪೆ, ದೈಹಿಕ ಶಿಕ್ಷಣ ಶಿಕ್ಷಕ ಪೂವಪ್ಪ ಮತ್ತು ಶ್ರೇಯಾ ಎಂಬವರನ್ನು ಐಟಿ ಕಾಯ್ದೆಯಡಿ ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಪುತ್ತೂರು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯಕ್ಕೆ ಗುರುವಾರ ಸಂಜೆ ಹಾಜರುಪಡಿಸಿದಾಗ ಆರೋಪಿಗಳಿಗೆ ಒಂದು ದಿನದ ನ್ಯಾಯಾಂಗ ಬಂಧನ ನೀಡಿ ನ್ಯಾಯಾಲಯ ಆದೇಶಿಸಿತು. ಒಂದು ದಿನದ […]

ಪದೇಪದೇ ಮೊಟ್ಟೆ ಇಡುವ ಲಾಭದಾಯಕ ಸ್ವರ್ಣಧಾರ ಕೋಳಿ

Saturday, June 29th, 2019
Swarnadhara

ಮಂಗಳೂರು :  ನಾಟಿ ಕೋಳಿಗೆ ಹೋಲುವ ವಿಶೇಷ ತಳಿಯಾದ ಸ್ವರ್ಣಧಾರ ಕೋಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಬೇಡಿಕೆ ಹೆಚ್ಚುತ್ತಿದೆ. ಈ ತಳಿಯನ್ನು ಬೀದರ್‍ನಲ್ಲಿರುವ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಬಿವೃದ್ಧಿ ಪಡಿಸಿದೆ. ಸ್ವದೇಶಿ ತಳಿಗಳೊಂದಾದ ಸ್ವರ್ಣಧಾರ ಕೋಳಿಯು ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಲಭ್ಯವಿದ್ದು ಆಸಕ್ತರಿಗೆ ಇತ್ತೀಚೆಗೆ ತರಬೇತಿಯ ಮೂಲಕ ವೈಜ್ಞಾನಿಕ ಕೋಳಿ ಸಾಕಣೆ ವಿಧಾನವನ್ನು ತಿಳಿಸಲಾಯಿತು. ಕೇಂದ್ರದ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಎ.ಟಿ. ರಾಮಚಂದ್ರ ನಾಯ್ಕರವರು ಕಾರ್ಯಕ್ರಮದ ಅಧ್ಯಕ್ಷತೆ […]

ಬೆಳ್ತಂಗಡಿ ಹಿಂಸಾತ್ಮಕ ಗೋ ಸಾಗಣೆ – ಕಾರು ಮಾಲೀಕನ ಜೊತೆ ಮತ್ತೋರ್ವನ ಬಂಧನ

Wednesday, June 12th, 2019
Cow thives

ಬೆಳ್ತಂಗಡಿ: ಅಕ್ರಮವಾಗಿ ಐಶಾರಾಮಿ ಕಾರೊಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋ ಸಾಗಣೆ ನಡೆಸುತ್ತಿದ್ದಾಗ ಉಜಿರೆಯ ಮುಂಡಾಜೆ ಸಮೀಪ ಕಾರು ಪಲ್ಟಿಯಾಗಿ 5 ಗೋವುಗಳ ಮೃತ್ಯು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಜಿರೆಯ ಮುಂಡಾಜೆ ಸಮೀಪ ಕಾರು ಪಲ್ಟಿಯಾಗಿ 5 ಗೋವುಗಳ ಮೃತ್ಯುಮೂಡುಬಿದಿರೆ ತೋಡಾರ್ ಇದಾಯತ್ ನಗರ ನಿವಾಸಿ ಕಾರು ಮಾಲೀಕ ಅನ್ಸಾರ್ (27) ಹಾಗೂ ಜುಬೇರ್ (26) ಎಂಬವವರನ್ನ ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಶಾಮೀಲಾಗಿರುವ ಶಂಕೆ ಇದ್ದು, ಅವರ ಬಂಧನಕ್ಕಾಗಿ […]

ಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು: ಇಪ್ಪತ್ತೈದನೆ ಪದವಿ ಪ್ರದಾನ ಸಮಾರಂಭ

Wednesday, June 12th, 2019
Prakruti

ಉಜಿರೆ: ರೋಗಿಗಳಿಗೆ ಸಾಂತ್ವನದ ಮಾತುಗಳೊಂದಿಗೆ ಧೈರ್ಯ ಮತ್ತುಆತ್ಮವಿಶ್ವಾಸತುಂಬಿ ಅವರ ಭಯ, ಆತಂಕ ನಿವಾರಿಸಿ ರೋಗವನ್ನು ಶಮನ ಮಾಡಿಆರೋಗ್ಯರಕ್ಷಣೆ ಮಾಡುವುದು ವೈದ್ಯರಕರ್ತವ್ಯ ಮತ್ತು ಹೊಣೆಗಾರಿಕೆಯಾಗಿದೆ. ವೈದ್ಯ ವೃತ್ತಿ ಹಣ ಸಂಪಾದನೆಗಾಗಿಅಲ್ಲ. ಮಾನವೀಯತೆಯಿಂದ ಸೇವೆ ಮಾಡಲಿಕ್ಕಾಗಿ.ರೋಗಿಗಳಆರೋಗ್ಯ ಭಾಗ್ಯರಕ್ಷಣೆಗಾಗಿ ವಿವೇಚನೆಯಿಂದ ವೈದ್ಯರುಅಲೊಪತಿ ಹಾಗೂ ಪಾರಂಪರಿಕಚಿಕಿತ್ಸಾ ವಿಧಾನವನ್ನು ಬಳಸಬೇಕು ಎಂದು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ನಿರ್ದೇಶಕಡಾ. ಬಿ.ಎನ್. ಗಂಗಾಧರ್ ಹೇಳಿದರು. ಅವರುಉಜಿರೆಯಲ್ಲಿಎಸ್.ಡಿ.ಎಂ.ಪ್ರಕೃತಿಚಿಕಿತ್ಸಾ ಮತ್ತುಯೋಗ ವಿಜ್ಞಾನಕಾಲೇಜಿನಲ್ಲಿ ಮಂಗಳವಾರ ಇಪ್ಪತ್ತೈದನೆ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ವೈದ್ಯ ವೃತ್ತಿ […]