ದಕ್ಷಿಣ ಕನ್ನಡ ಲೋಕಸಭೆಗೆ ಈ ಬಾರಿ ಬಿಜೆಪಿ ಅಭ್ಯರ್ಥಿ ಯಾರು ?

Saturday, March 2nd, 2019
Satyajith

ಮಂಗಳೂರು : ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಅಸಮಾಧಾನ ಗೊಂಡ ಇನ್ನೊಂದು ಬಣ ಆರ್ ಎಸ್ ಎಸ್ ನ ಕಟ್ಟಾಳು ಸತ್ಯಜಿತ್ ಸುರತ್ಕಲ್ ಅವರನ್ನು ಈ ಬಾರಿಯ ಲೋಕ ಸಭಾ ಅಭ್ಯಥಿಯನ್ನಾಗಿಸಲು ಸತ ಪ್ರಯತ್ನ ಮಾಡುತ್ತಿದೆ ಅದಕ್ಕಾಗಿ ಅಲ್ಲಲ್ಲಿ ಸತ್ಯಜಿತ್ ಸುರತ್ಕಲ್ ಅವರ ಫ್ಲೆಕ್ಸ್ ಹಾಕಿದ್ದಾರೆ. ಅಭಿಮಾನಿಗಳು ಜಿಲ್ಲೆಯಾದ್ಯಂತ ಹಾಕಿದ ಫ್ಲೆಕ್ಸ್ ಗಳು ಬಿಜೆಪಿ ಮುಂಖಡರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅದರಲ್ಲೂ ಸತ್ಯಜಿತ್ ಅಭಿಮಾನಿಗಳ ಹೆಸರಿನಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಸತ್ಯಜಿತ್‌ ನಮ್ಮ ಆಯ್ಕೆ ಎಂಬ […]

ಸೇವೆಯೊಂದಿಗೆ ಸಾಮಾಜಿಕ ಕಾಳಜಿ ಅಗತ್ಯ- ಕೆ. ರತ್ನಾಕರಆಚಾರ್ಯ

Wednesday, February 27th, 2019
kalikamba

ಮಂಗಳೂರು  : ಕಾರ್ಯಕರ್ತರು ಸೇವೆಯಜತೆಗೆ ಸಾಮಾಜಿಕ ಕಾಳಜಿಯನ್ನು ಹೊಂದಿರ ಬೇಕಾದುದು ಅತ್ಯವಶ್ಯ ಎಂದು ನೆಕ್ಲಾಜೆ ಕಾರ್ಕಳ ಶ್ರೀ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಕೆ. ರತ್ನಾಕರಆಚಾರ್ಯ ನುಡಿದರು. ನಗರದ ರಥಬೀದಿ ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ 54ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಅತಿಥಿಗಳಾಗಿ ಅವರು ಪಾಲ್ಗೊಂಡಿದ್ದರು. ಪ್ರತೀ ದೇವಸ್ಥಾನಗಳಲ್ಲೂ ಸೇವಾ ಸಮಿತಿಗಳು ಇದ್ದೇಇರುತ್ತವೆ. ಆಡಳಿತ ವರ್ಗ ಮತ್ತು ಸೇವಾ ಸಮಿತಿಗಳು ಪರಸ್ಪರಅನ್ಯೋನ್ಯತೆಯಿಂದ ಕೆಲಸ ಮಾಡಿದಾಗ ಮಾತ್ರಕ್ಷೇತ್ರದಎಲ್ಲಾ ಕೆಲಸಗಳು ಸುಲಲಿತವಾಗಿರಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು. ಸಮಿತಿಯಅಧ್ಯಕ್ಷ ಕೆ.ವಿ. ಜಯರಾಜ್‌ಅಧ್ಯಕ್ಷತೆ […]

ಮಹಾತ್ಮ ಗಾಂಧೀಜಿಯವರ: ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭ

Saturday, February 23rd, 2019
Gandhi Stamp

ಮಂಗಳೂರು : ಜಗತ್ತಿಗೆ ಅಹಿಂಸೆಯ ಸಂದೇಶವನ್ನು ನೀಡಿ ಜನಮಾನಸದಲ್ಲಿ ಅಮರರಾದ ಗಾಂಧೀಜಿಯವರು ಮಹಾತ್ಮ ಅನಿಸಿಕೊಂಡರು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು. ಫೆಬ್ರವರಿ 23 ರಂದು ಅಪರಾಹ್ನ 2 ಗಂಟೆಗೆ ಮಹಾತ್ಮ ಗಾಂಧೀಜಿಯವರ ಮಂಗಳೂರು ಭೇಟಿಯ ಸ್ಮರಣಾರ್ಥ ಆಯೋಜಿಸಿದ ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭವು ಭಾರತೀಯ ಅಂಚೆ ಇಲಾಖೆ ವತಿಯಿಂದ ಜ್ಞಾನೋದಯ ಸಮಾಜ ಮಂದಿರ, ಹೊೈಗೆ ಬಜಾರ್, ಮಂಗಳೂರಿನಲ್ಲಿ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಮಹಾತ್ಮ ಗಾಂಧೀಯವರು ಅಂದಿನ ಕಾಲದಲ್ಲಿ ಮಂಗಳೂರಿಗೆ […]

ಆಯುಧಗಳಿಗಿಂತ ಮನುಷ್ಯನ ಹಿಂಸಾತ್ಮಕ ಮನಸ್ಸು ಅಪಾಯಕಾರಿ: ಡಾ. ಕುರಿಯನ್

Wednesday, February 20th, 2019
Alvas Condolence

ಮೂಡುಬಿದಿರೆ: ನಮ್ಮಲ್ಲಿರುವ ಬಾಂಬ್, ಗನ್, ಚಾಕು ಚೂರಿಗಳು ಅಪಾಯಕಾರಿಗಳಲ್ಲ. ಆದರೆ ನಮ್ಮ ಮನಸ್ಸಿನಲ್ಲಿರುವ ಹಿಂಸಾ ಮನೋಭಾವ ಬಹಳಷ್ಟು ಅಪಾಯಕಾರಿ. ಮನುಷ್ಯ ಮನುಷ್ಯನ್ನು ಕೊಲ್ಲಬೇಕು ಎನ್ನುವ ಆಲೋಚನೆಗಳನ್ನು ತರುವ ಸಿದ್ಧಾಂತ ಹಾಗೂ ವ್ಯವಸ್ಥೆಯನ್ನು ನಮ್ಮ ಮನಸ್ಸಿನಿಂದ ತೆಗೆದುಹಾಗಬೇಕಾದ ಅಗತ್ಯವಿದೆ. ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹೇಳಿದರು. ಪುಲ್ವಾಮಾದಲ್ಲಿ ನಡೆದ ಉಗ್ರನ ದಾಳಿಯಲ್ಲಿ ಪ್ರಾಣತ್ಯಾಗ ಮಾಡಿದ ಯೋಧರ ಸ್ಮರಣಾರ್ಥ ಆಳ್ವಾಸ್ ಕಾಲೇಜಿನಲ್ಲಿ ಜರುಗಿದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಮನುಷ್ಯನ ಮನಸ್ಸು ಹಿಂಸಾತ್ಮಕ ರೂಪತಾಳಿದಾಗ ಅದು ಸಮಾಜದ […]

ಮಕ್ಕಳಿಲ್ಲದ ಕೊರಗಿನಿಂದ ಅಣ್ಣನ ಮಗಳಿಗೆ ಆಸ್ತಿ ಕೊಡುವಂತೆ ಡೆತ್ ನೋಟ್ ಬರೆದಿಟ್ಟು ದಂಪತಿ ಆತ್ಮಹತ್ಯೆ

Tuesday, February 19th, 2019
kotekar-death

ಮಂಗಳೂರು : ಆಕಾಶವಾಣಿಯ ನಿವೃತ್ತ ಉದ್ಯೋಗಿ ಹಾಗೂ ಅವರ ಪತ್ನಿ ದೀರ್ಘಕಾಲದ ಅಸೌಖ್ಯ ಹಾಗೂ ಮಕ್ಕಳಿಲ್ಲದ ಕೊರಗಿನಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರು ಹೊರವಲಯದ ಉಳ್ಳಾಲದ ಕೋಟೆಕಾರು ಬೀರಿ ಎಂಬಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ವೃದ್ಧ ದಂಪತಿ ದೇವರಾಜ್ (74), ವಸಂತಿ (64) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ಆಕಾಶವಾಣಿಯ ನಿವೃತ್ತ ಉದ್ಯೋಗಿ ದೇವರಾಜ್ ಗಾಣಿಗ ಹಲವಾರು ವರ್ಷಗಳಿಂದ ಅಸೌಖ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಅದಲ್ಲದೇ ಪತ್ನಿ ವಸಂತಿ ಕೂಡ ಅಸೌಖ್ಯದಿಂದ ಬಳಲುತ್ತಿದ್ದು, ಕಳೆದ ರಾತ್ರಿ […]

ಶಾಲೆಗೆ ಹೋದ ಮಗಳನ್ನು ಹುಡುಕಿ ಕೊಡಲು ತಂದೆಯಿಂದ ಪೊಲೀಸ್ ಠಾಣೆಯಲ್ಲಿ ದೂರು

Tuesday, February 19th, 2019
Nishmitha

ಮಂಗಳೂರು  : ಕಂಕನಾಡಿ. ನಗರ ಪೊಲೀಸ್ ಠಾಣೆ ಯಲ್ಲಿ  ಶ್ರೀಮತಿ ಗಿರಿಜಾ (38)ಗಂಡ ಅಶೋಕ್ ಪೂಜಾರಿ. ವಾಸ- ಎಕ್ಕೂರು. ಮಂಗಳೂರು. ಇವರ ದೂರಿನಂತೆ. ಗೋರಿಗುಡ್ಡ ದ ಕಿಟೆಲ್ ಮೆಮೋರಿಯಲ್ ಶಾಲೆಯಲ್ಲಿ 9 ನೆ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಗಳು ಕು.ನಿಶ್ಮಿತಾ ಪ್ರಾಯ-14 ವರ್ಷ ದಿನಾಂಕ 16-02-2019 ರಂದು  ಶನಿವಾರ ಶಾಲೆಗೆಂದು ತೆರಳಿದವಳು ಈ ವರೆಗೂ ಮನೆಗೆ  ಬಂದಿರುವುದಿಲ್ಲ ಈ ಬಗ್ಗೆ ಪ್ರಕರಣ ದಾಖಲಾಲಿಸಿದ್ದಾರೆ . ನಿಶ್ಮಿತಾ ಎತ್ತರ- 4 ಅಡಿ 7 ಇಂಚು, ಎಣ್ಣೆ ಗೆಂಪು  ಮೈ ಬಣ್ಣ,ಸಾಧಾರಣ […]

ವೀರ ಯೋಧರ ಮೇಲೆ ನಡೆದ ಅಮಾನುಷ ದಾಳಿಗೆ ತುಳುನಾಡ ರಕ್ಷಣಾ ವೇದಿಕೆ ಖಂಡನೆ

Tuesday, February 19th, 2019
TRV

ಮಂಗಳೂರು  : ಪುಲ್ವಾಮದಲ್ಲಿ ನಮ್ಮ ದೇಶದ ವೀರ ಯೋಧರ ಮೇಲೆ ನಡೆದ ಅಮಾನುಷ ದಾಳಿ ಮತ್ತು ಹತ್ಯಾಕಾಂಡವನ್ನು ತುಳುನಾಡ ರಕ್ಷಣಾ ವೇದಿಕೆ( ರಿ) ತೀವ್ರವಾಗಿ ಖಂಡಿಸುತ್ತದೆ. ನಮ್ಮ ದೇಶವನ್ನು ಕಾಯುವ ಸೈನಿಕರು ಯಾವುದೇ ಕಷ್ಟ ನಷ್ಟವನ್ನು ಲೆಕ್ಕಿಸದೇ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಡುತ್ತಿರುವುದರಿಂದ ನಾವೆಲ್ಲ ಇಂದು ಸುಖ ಸಮೃದ್ಧಿಯಿಂದ ಬದುಕನ್ನು ಸಾಗಿಸುತ್ತಿದ್ದೇವೆ.ನಮ್ಮ ದೆಶದ ಅಸ್ಥಿತ್ವಕ್ಕೆ ಕಂಟಕಪ್ರಾಯವಾಗಿರುವ ಉಗ್ರವಾದಿಗಳಿಗೆ ನಮ್ಮ ಶತ್ರು ರಾಷ್ಟ್ರವಾದ ಪಾಕಿಸ್ತಾನವು ಸಕಲ ನೆರವನ್ನು ನೀಡುತ್ತಿರುವುದು ಕಟುಸತ್ಯ ಸಂಗತಿಯಾಗಿದೆ.ಇಂತಹ ನರಭಕ್ಷಕ ಉಗ್ರಗಾಮಿಗಳಿಂದ ನಮ್ಮ ಹೆಮ್ಮೆಯ ಸೈನಿಕರು […]

‘ಎಸ್‌ಡಿಎಂ ಝೇಂಕಾರ್-2019’ ನಲ್ಲಿ ಆಳ್ವಾಸ್ ಚಾಂಪಿಯನ್

Saturday, January 26th, 2019
Alvas Zenkar

ಮೂಡಬಿದಿರೆ: ಉಜಿರೆಯ ಎಸ್‌ಡಿಎಂ ಕಾಲೇಜಿನಿಂದ ಆಯೋಜಿಸಲಾಗಿದ್ದ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಉತ್ಸವ ಹಾಗೂ ಸ್ಪರ್ಧೆ ’ಎಸ್‌ಡಿಎಂ ಝೇಂಕಾರ್-2019’ ನಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಚಾಂಪಿಯನ್ನಾರಾಗಿ ಮೂಡಿಬಂದರು. ಮ್ಯಾನೇಜ್ಮೆಂಟ್ ಮೇಸ್ಟ್ರೋ ಸ್ಪರ್ಧೆಯಲ್ಲಿ ತೆನ್ಜಿಲ್ ನಿಹಮದ್ ಹಾಗೂ ಕ್ರಿಸ್ ಡಿಸೋಜಾ ತಂಡ ಪ್ರಥಮ, ರಮ್ಯ ಕಾರಂತ, ವಿಯೋನಾ ಗುಪ್ತಾ, ನಿಸರ್ಗ, ಸ್ವಸ್ತಿ ಉಪಾಧ್ಯ, ಪ್ರತೀಕ್ಷಾ, ರಿತಿಕಾ, ನಿಖಿಲ್, ಕ್ರಿಸ್ ಡಿಸೋಜಾ ತಂಡ ಯೂತ್ ಆನ್ ರ‍್ಯಾಂಪ್‌ನಲ್ಲಿ ಪ್ರಥಮ, ಸೈನ್ಸ್ ಕಾರ್ನಿವಲ್‌ನಲ್ಲಿ ಅನ್ವಯ್ ಹಾಗೂ […]

ಜಿಲ್ಲೆಯಲ್ಲಿ ಮಂಗನಕಾಯಿಲೆ ಭೀತಿ, ಆರೋಗ್ಯಾಧಿಕಾರಿಯಿಂದ ಎಚ್ಚರಿಕೆ

Tuesday, January 8th, 2019
Health officer

ಮಂಗಳೂರು :  ದಕ್ಷಿಣ ಕನ್ನಡದ ಮಲೆನಾಡಿನ ತಪ್ಪಲಿನಲ್ಲಿರುವ ಹಳ್ಳಿಗಳಲ್ಲಿ ಮಂಗನಕಾಯಿಲೆ ಕುರಿತು ಜಾಗೃತಿ ಮೂಡಿಸಲು ಇಲಾಖೆಯ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ. ರಾಮಕೃಷ್ಣ ರಾವ್ ಹೇಳಿದ್ದಾರೆ. ಜಿಲ್ಲೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ತಂಡಗಳನ್ನು ರಚಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಅವರು, ಉಣ್ಣಿಗಳಿಂದ ಕಾಯಿಲೆ ಹರಡುವುದರಿಂದ ಕಾಡಂಚಿನ ಮಂದಿ ಕಾಡಿಗೆ ಹೋಗುವುದನ್ನು ಸ್ವಲ್ಪ ಕಾಲ ಸ್ಥಗಿತಗೊಳಿಸುವಂತೆ ಕರೆ ನೀಡಿದರು. ಎಮ್ಮೆ, ಆಕಳು ಮೊದಲಾದ ಸಾಕುಪ್ರಾಣಿಗಳನ್ನು ಕಾಡಿಗೆ ಬಿಡುತ್ತಾರೆ. ಸೌದೆ ಸಂಗ್ರಹಕ್ಕೆ ಕಾಡಿಗೆ […]

ಪ್ರವಾದಿ ನಿಂದನೆ: ಮತ್ಸ್ಯವರ್ತಕರ ಸಂಘ ಖಂಡನೆ

Friday, January 4th, 2019
cm-musthafa

ಮಂಗಳೂರು  : ಇತ್ತೀಚೆಗೆ ಬೆಂಗಳೂರು ಪ್ರಸಾದಿತ ಸುವರ್ಣ ನ್ಯೂಸ್ ಟಿ.ವಿ ವಾಹಿನಿಯ ನಿರೂಪಕ ಅಜಿತ್ ಹನುಮಕ್ಕನವರ್ ಟಿ.ವಿ ಸಂವಾದ ಕಾರ್ಯಕ್ರಮವೊಂದರಲ್ಲಿ ಇತರ ವಿಷಯಗಳನ್ನು ಪ್ರಸ್ತಾಪ ಮಾಡುವಾಗ ಜಗತ್ತಿನ ಸರ್ವ ಮುಸ್ಲಿಮರೊಂದಿಗೆ ಸಹ ಸಮುದಾಯ ಬಾಂಧವರೂ ಕೂಡಾ ಗೌರವಿಸುವ ಪ್ರವಾದಿ ಮೊಹಮ್ಮದ್ ರವರನ್ನು ನಿಂದಿಸಿ ಅವಹೇಳನೆಯಾಗುವಂತಹ ಹೇಳಿಕೆಗಳನ್ನು ನೀಡಿ, ಒಂದು ನಿರ್ದಿಷ್ಟ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡಲು ಪ್ರಯತ್ನಿಸಿದ್ದು, ವಿಭಿನ್ನ ಮತೀಯರ ಮಧ್ಯೆ ಕೋಮುದ್ವೇಷ ಸೃಷ್ಟಿಸುವಂತಹ ಅಪರಾಧ ಕೃತ್ಯವನ್ನು ಎಸಗಿರುತ್ತಾರೆ. ಈ ಘಟನೆಯಿಂದಾಗಿ ಸಾರ್ವಜನಿಕರ ಮನಸ್ಸಿಗೆ […]