ಹೋಂವರ್ಕ್ ಮಾಡದ್ದಕ್ಕೆ ಉಪನ್ಯಾಸಕನಿಂದ ಹಲ್ಲೆ ಆರೋಪ… ವಿದ್ಯಾರ್ಥಿ ಆಸ್ಪತ್ರೆಗೆ ದಾಖಲು

Wednesday, September 12th, 2018
manglore

ಪುತ್ತೂರು: ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕಾಗಿ ಉಪನ್ಯಾಸಕರೊಬ್ಬರು ವಿದ್ಯಾರ್ಥಿಯೋರ್ವನ ಕೆನ್ನೆ ಮತ್ತು ತಲೆಗೆ ಕೈಯಿಂದ ಬಾರಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡಿರುವ ವಿದ್ಯಾರ್ಥಿ ಈಗ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ದ್ವಿತೀಯ ವರ್ಷದ ಡಿಪ್ಲೋಮ ವಿದ್ಯಾರ್ಥಿ, ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ಕೊಡಾಜೆ ನಿವಾಸಿ ಮಹಮ್ಮದ್ ಶರೀಫ್ ಅವರ ಪುತ್ರ ಮಹಮ್ಮದ್ ಮನ್ಸೂರ್ (18) ಹಲ್ಲೆಗೊಳಗಾದ ವಿದ್ಯಾರ್ಥಿ. ಪ್ರಥಮ ಇಂಟರ್ನಲ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿದ್ದ ಪ್ರಶ್ನೆಗಳಿಗೆ 2 ಸಲ […]

ಸೈಕಲ್ ಏರಿ ತೈಲ ಬೆಲೆ ಏರಿಕೆಯನ್ನು ವಿರೋಧಿಸಿದ ಐವನ್ ಡಿಸೋಜ

Monday, September 10th, 2018
Bundh

ಮಂಗಳೂರು : ಇಂಧನಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ನೀಡಿದ್ದ ಕರೆಯ ಮೇರೆಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ಹಂಪನಕಟ್ಟೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯ ಸಂದರ್ಭ ಎತ್ತಿನಗಾಡಿ, ಬೈಕ್‌ನಲ್ಲಿ ಅಡುಗೆ ಅನಿಲ ಸಿಲಿಂಡರ್, ಕಟ್ಟಿಗೆಯನ್ನಿಟ್ಟು ವಿನೂತನವಾಗಿ ಪ್ರತಿರೋಧವನ್ನು ಪ್ರದರ್ಶಿಸಲಾಯಿತು. ಐವನ್ ಡಿಸೋಜ ತಮ್ಮ ಚತುಷ್ಚಕ್ರ ವಾಹನವನ್ನು ದೂಡಿಕೊಂಡು ಬಂದರಲ್ಲದೆ, ಸೈಕಲ್ ಏರಿ ತೈಲ ಬೆಲೆ ಏರಿಕೆಯನ್ನು ವಿರೋಧಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಪ್ರದರ್ಶನದ ವೇಳೆ ಐವನ್ ಡಿಸೋಜ […]

ನಗರಸಭೆ ಚುನಾವಣೆ: ಯು.ಟಿ.ಖಾದರ್‌ ಆಪ್ತನಿಗೆ ಸೋಲು..ಕಿಡಿಕೇಡಿಗಳಿಂದ ಕಲ್ಲು ತೂರಾಟ!

Monday, September 3rd, 2018
ullala-khader

ಮಂಗಳೂರು: ನಗರ ಸಭೆ ಚುನಾವಣಾ ಫ‌ಲಿತಾಂಶ ಪ್ರಕಟವಾಗಿದ್ದು , ವಿಜೇತ ಪಕ್ಷೇತರ ಅಭ್ಯರ್ಥಿ ಸೇರಿ ಹಲವರ ಅಂಗಡಿಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ಸೋಮವಾರ ನಡೆದಿದೆ. 19 ನೇ ವಾರ್ಡ್‌ನಲ್ಲಿ ಸಚಿವ ಯು.ಟಿ.ಖಾದರ್‌ ಅವರ ಆಪ್ತ, ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಉಸ್ಮಾನ್‌ ಕಲ್ಲಾಪು ಅವರು ಪಕ್ಷೇತರ ಅಭ್ಯರ್ಥಿ ಮುಶ್ತಾಕ್‌ ಎದುರು ಸೋಲು ಅನುಭವಿಸಿದ್ದಾರೆ. ಸೋಲಿನ ಬಳಿಕ ಕಲ್ಲಾಪುವಿನಲ್ಲಿ ಅಹಿತಕರ ಘಟನೆ ನಡೆದಿದ್ದು, ಕಿಡಿಕೇಡಿಗಳು ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು […]

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಸಭೆ ಬಿಜೆಪಿಗೆ 25, ಉಳ್ಳಾಲದಲ್ಲಿ ಕಾಂಗ್ರೆಸಿಗೆ 13, ಬಂಟ್ವಾಳದಲ್ಲಿ ಕಾಂಗ್ರೆಸಿಗೆ 12

Monday, September 3rd, 2018
puttur

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಸಭೆ ಬಿಜೆಪಿ ಪಾಲಾಗಿದೆ. ಆಗಸ್ಟ್ 31 ರಂದು ದಕ್ಷಿಣ ಕನ್ನಡ ಜಿಲ್ಲೆಯ 2 ನಗರಸಭೆ ಹಾಗೂ 1 ಪುರಸಭೆಗೆ ಚುನಾವಣೆ ನಡೆದಿತ್ತು. ಪುತ್ತೂರು ನಗರಸಭೆಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಜಿದ್ದಾಜಿದ್ದಿಯ ಹೋರಾಟದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಪುತ್ತೂರಿನಲ್ಲಿ ಬಿಜೆಪಿ ದಾಖಲೆಯ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಧೂಳಿಪಟವಾಗಿದೆ. ಇಲ್ಲಿ ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಇದೇ ಮೊದಲಬಾರಿಗೆ ಪುತ್ತೂರು ನಗರಸಭೆಯಲ್ಲಿ ಎಸ್ ಡಿಪಿಐ ಖಾತೆ ತೆರೆದಿದೆ. ಆಗಸ್ಟ್ 31 ರಂದು […]

ವರ್ತಮಾನದಲ್ಲಿ ರಕ್ಷಾಬಂಧನ ಹಬ್ಬದ ಮಹತ್ವ

Friday, August 24th, 2018
Rakshabandhana

ಮಂಗಳೂರು :  ಭಾರತವು ಹಬ್ಬಗಳ ತವರೂರು. ಈ ಹಬ್ಬಗಳು ಪರಸ್ಪರ ಸ್ನೇಹ-ವಿಶ್ವಾಸ, ಗೌರವವನ್ನು ಇಮ್ಮಡಿಗೊಳಿಸುತ್ತಾ ಮಾನವನ ಜೀವನದಲ್ಲಿ ಸುಖ-ಶಾಂತಿಯನ್ನು ತುಂಬುತ್ತಿವೆ. ಮನುಷ್ಯನಲ್ಲಿ ಹಲವು ರೀತಿಯ ಮಾನವೀಯ ಗುಣಗಳನ್ನು ತುಂಬುತ್ತಾ ಅವನನ್ನು ಗುಣವಂತನ್ನಾಗಿ ಹಬ್ಬಗಳು ಮಾಡುತ್ತಿವೆ. ಈ ನಾಡಿನಲ್ಲಿ ಆಚರಿಸುವ ಹಬ್ಬಗಳಲ್ಲಿ ಮಾನವನ ರಕ್ಷಣೆಯು ಅಡಗಿದೆ. ಆಧುನಿಕ ವಿಜ್ಞಾನ ಯುಗದಲ್ಲಿಯೂ ಕೂಡ ಹಬ್ಬಗಳ ಆಚರಣೆಯು ತನ್ನದೇ ಆದ ಮಹತ್ವವನ್ನು ಹೊಂದಿದೆ. ಭಾರತಾದ್ಯಂತ ವಿಭಿನ್ನ ರೀತಿಯ ರಕ್ಷಾಬಂಧನ: ಉತ್ತರ ಭಾರತದಲ್ಲಿ ರಕ್ಷಾಬಂಧನವನ್ನು ದೇವರನ್ನು ಪೂಜಿಸಿ ಸಹೋದರಿಯರು ಸಹೋದರರಿಗೆ ತಿಲಕವನ್ನಿಟ್ಟು ರಕ್ಷಾಬಂಧವನ್ನು […]

ಬೆಂಗಳೂರು ರಾಜಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಪ್ರವೇಶ

Friday, August 24th, 2018
Rajabhavana

ಬೆಂಗಳೂರು : ರಾಜಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಗುರುವಾರ ದಿಂದ ಪ್ರವೇಶವನ್ನು ಕಲ್ಪಿಸಲಾಗಿದೆ. ಗುರುವಾರ ಸುಮಾರು 500 ಕ್ಕೂ ಹೆಚ್ಚು ಸಾರ್ವಜನಿಕರು ಭೇಟಿ ನೀಡಿದರು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತ್ತಿದೆ. ಸಪ್ಟೆಂಬರ್ 6  ರವರೆಗೆ ಸಾರ್ವಜನಿಕರ ಭೇಟಿಗೆ ಅವಕಾಶವನ್ನು ನೀಡಲಾಗಿದ್ದು ರಾಜಭವನದ ಸೌಂದರ್ಯವನ್ನು ಸವಿಯಬಹುದಾಗಿದೆ.

ಸಂತ ಅಲೋಶಿಯಸ್ ಕಾಲೇಜಿನಲ್ಲಿ ‘ಅಂತರ್-ಧರ್ಮೀಯ ಸಾಮರಸ್ಯ ದಿವಸ’

Wednesday, August 22nd, 2018
Aloysius College

ಮಂಗಳೂರು :  ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಮಂಗಳೂರು ಸೇವಾ ಸಪ್ತಾಹದ ಅಂಗವಾಗಿ ದಿನಾಂಕ 21 ಆಗಸ್ಟ್ 2018ರಂದು ಸಂಜೆ ಕಾಲೇಜಿನ ಎಲ್.ಸಿ.ಅರ್. ಐ. ಸಭಾಂಗಣದಲ್ಲಿ ‘ಅಂತರ್-ಧರ್ಮೀಯ ಸಾಮರಸ್ಯ ದಿವಸ’ವನ್ನು ಬಕ್ರಿದ್ ಆಚರಣೆಯ ಸಲುವಾಗಿ ಹಮ್ಮಿಕೊಂಡಿತ್ತು. ಉದಯವಾಣಿಯ ಮುಖ್ಯ ಸಂಪಾದಕರಾದ, ಶ್ರೀ ಮನೋಹರ್ ಪ್ರಸಾದ್‍, ಸಂತ ಜೋಸೆಫ್ ಸೆಮಿನರಿಯ ರೆ. ಫಾ. ಕ್ಲಿಫರ್ಡ್ ಫೆರ್ನಾಂಡಿಸ್, ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಹಪ್ರಾಧ್ಯಾಪಕರಾದ ಡಾ. ಅಬೂಬಕರ್ ಸಿದ್ದಿಕ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾಲೇಜಿನ ಪ್ರಾಂಶುಪಾಲ ರೆ. ಡಾ. ಪ್ರವೀಣ್ […]

ಮಾಣಿಲ ಶ್ರೀಧಾಮದಲ್ಲಿ ಆಗಸ್ಟ್ 24 ಶುಕ್ರವಾರ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

Monday, August 20th, 2018
Manila Sridhama

ಬಂಟ್ವಾಳ: ಶ್ರೀ ಮಹಾಲಕ್ಷ್ಮಿ ಕ್ಷೇತ್ರ ಶ್ರೀಧಾಮದಲ್ಲಿ ನಡೆಯುತ್ತಿರುವ 48 ದಿವಸಗಳ ಶ್ರೀ ಲಕ್ಷ್ಮಿ ಪೂಜೆಯ 43 ನೇ ದಿನವಾದ ಭಾನುವಾರ ಮುಖ್ಯ ಅತಿಥಿಯಾಗಿ ಭಾಗವಹಿಸಿದಂತಹ ಶ್ರೀ ಕೆಯ್ರೂರು ಶ್ರೀ ನಾರಾಯಣ ಭಟ್ ರವರು ಸಂತೋಷವನ್ನು ವ್ಯಕ್ತಪಡಿಸಬಹುದು.  ಆನಂದವನ್ನು ವ್ಯಕ್ತಪಡಿಸಲಾಗದು. ಆದರೆ  ಶ್ರೀ ಧಾಮದಲ್ಲಿ ಸಂತೋಷ ಮತ್ತು ಆನಂದವನ್ನು ಒಟ್ಟಿಗೆ ಕಳೆಯಲಾಗುತ್ತಿದೆ ಎಂದರು. ಹಿಂದೂ ಸಮಾಜದಲ್ಲಿ ಶಕ್ತಿ ತುಂಬುವ ಕೆಲಸವನ್ನು ಮಾಣಿಲ ಶ್ರೀ ಗಳಂತಹ ಪೂಜರುಗಳಿಂದ ಆಗುತ್ತಿದೆ. ಕೆಲವು ದಿನಗಳ ಹಿಂದೆ ನಿಧನರಾದ ಭಾರತದ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯೀ […]

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ನೆರೆ ಪರಿಹಾರ ನಿಧಿಗೆ 2 ಕೋಟಿ ರೂ.

Monday, August 20th, 2018
subramanya

ಸುಬ್ರಹ್ಮಣ್ಯ : ಅತಿವೃಷ್ಟಿ ಕಡಿಮೆಯಾಗಿ ಪ್ರಕೃತಿ ಶಾಂತಗೊಂಡು ಜನರು, ಪಶು ಪಕ್ಷಿ ಸಂಕುಲ ಶಾಂತಿಯುತವಾಗಿ ಸುಖ, ನೆಮ್ಮದಿಯಿಂದ ಜೀವನ ನಡೆಸಲು ಕೃಪೆ ತೋರುವಂತೆ ಕುಕ್ಕೆ ದೇವರ ಸಾನ್ನಿಧ್ಯದಲ್ಲಿ ಭಾನುವಾರ ಪ್ರಾರ್ಥಿಸಲಾಯಿತು. ಈ ಪ್ರಾರ್ಥನೆಯ ಪ್ರಕಾರ ಸುಬ್ರಹ್ಮಣ್ಯ ದೇವರಿಗೆ 108 ಸೀಯಾಳಾಭಿಷೇಕ ಸೇವೆಯನ್ನು ಆ.21ರಂದು ಬೆಳಗ್ಗೆ 5 ಗಂಟೆಗೆ ನಡೆಸಲಾಗುವುದು. ಅಭಿಷೇಕಕ್ಕೆ ಸೀಯಾಳ ಒದಗಿಸುವ ಭಕ್ತರು ಸೋಮವಾರ ಸಂಜೆಯ ಒಳಗೆ ಶ್ರೀ ದೇವಳದ ಕಚೇರಿಗೆ ಸೀಯಾಳ ಒದಗಿಸಬಹುದು ಎಂದು ಸುಬ್ರಹ್ಮಣ್ಯ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ […]

ಕೊಡಗು : ಮಳೆಯ ಆರ್ಭಟಕ್ಕೆ 600ಕ್ಕೂ ಹೆಚ್ಚು ಮಂದಿ ರಕ್ಷಣೆಗೆ ಮೊರೆ

Friday, August 17th, 2018
Kodagu

ಮಡಿಕೇರಿ : ಕಾವೇರಿಯ ತವರು ಕೊಡಗು ಜಿಲ್ಲೆ ಮಳೆಯ ಆರ್ಭಟಕ್ಕೆ ಅಕ್ಷರಶಃ ನಲುಗಿ ಹೋಗಿದೆ. ಅಲ್ಲಲ್ಲಿ ಗುಡ್ಡಗಳು ಕುಸಿಯುತ್ತಿದ್ದು ಶಿರಂಗಲಾ, ಮಾಂದಾಲ್ ಪಟ್ಟಿ, ಮುಕ್ಕೊಡ್ಲು,  ಹತ್ತಿಹೊಳೆ, ಕಲ್ಲೂರು, ಮುವತೊಕ್ಲು ಮೊದಲಾದ  ಗುಡ್ಡಪ್ರದೇಶದ ಜನರು  ಜಿಲ್ಲೆಯ ನಡುವೆ ಸಂಪರ್ಕ ಕಡಿತಗೊಂಡಿದ್ದು, ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಪ್ರತಿಕೂಲ ಹವಾಮಾನದಿಂದ ಹೆಲಿಕಾಪ್ಟರ್‌ ಕಾರ್ಯಾಚರಣೆ ವಿಳಂಬವಾಗಿದ್ದು, ಜಿಲ್ಲೆಯ ವಿವಿಧೆಡೆ ಅಂದಾಜು 600ಕ್ಕೂ ಹೆಚ್ಚು ಮಂದಿ ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ. ಹಲವರು ಮಣ್ಣಿನ ಅಡಿ ಹಾಗೂ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ಸಾವು– ನೋವು […]