ಸಹಸ್ರಲಿಂಗೇಶ್ವರದಲ್ಲಿ ನೇತ್ರಾವತಿ ಹಾಗು ಕುಮಾರಧಾರ ಸಂಗಮ..ಸಾವಿರಾರು ಭಕ್ತರು ಭಾಗಿ!

Wednesday, August 15th, 2018
sahasra-lingeshwara

ಮಂಗಳೂರು: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಒಂದೆಡೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಇನ್ನೊಂದೆಡೆ ಕೆಲ ಅಪರೂಪದ ವಿದ್ಯಮಾನಗಳಿಗೂ ಸಾಕ್ಷಿಯಾಗುತ್ತಿದೆ. ಸರಿಸುಮಾರು 5 ವರ್ಷಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಮುಂದೆ ಸಂಗಮಗೊಂಡಿದೆ. ಸತತವಾಗಿ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗಿದ್ದರೂ, ಕುಮಾರಧಾರ ಮತ್ತು ನೇತ್ರಾವತಿ ನದಿಗಳು ಸಂಗಮ ಆಗಿರಲಿಲ್ಲ. ಆದರೆ ರಾತ್ರಿ ನೀರಿನ ಒಳಹರಿವು ಹೆಚ್ಚಾಗುತ್ತಿದ್ದಂತೆ ನಿನ್ನೆ ರಾತ್ರಿ ನದಿಗಳ ಸಂಗಮವಾಗಿದ್ದು, ಎರಡೂ ನದಿಗಳ ನೀರು […]

ನಾಡಿನೆಲ್ಲೆಡೆ ಭಕ್ತರಿಂದ ಸಂಭ್ರಮದ ನಾಗರಪಂಚಮಿ ಆಚರಣೆ..!

Wednesday, August 15th, 2018
Nagarapanchami (17)

ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗ ದೇವಸ್ಥಾನಗಳಲ್ಲಿ ನಾಗರಪಂಚಮಿಯನ್ನು ಬುಧವಾರ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಿದರು. ಮಂಗಳೂರಿನ ಇತಿಹಾಸ ಪ್ರಸಿದ್ಧ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಮುಂಜಾನೆಯೇ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ನಾಗ ದೇವರಿಗೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸುವ ಮೂಲಕ ನಾಗರಪಂಚಮಿಯನ್ನು ಆಚರಿಸಿದರು. ಕುಡುಪು ದೇವಸ್ಥಾನದಲ್ಲಿ  ಪ್ರಧಾನ ಆರ್ಚಕರ ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ಹಾಲು, ಕ್ಷೀರಾ, ತುಪ್ಪ, ಜೇನಿನೊಂದಿಗೆ ಪಂಚಾಮೃತ ಆಭಿಷೇಕವನ್ನು ಮಾಡಿ ವಿಶೇಷ ಪೂಜೆ ನೆರವೇರಿಸಿದರು. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, […]

ಪುತ್ತೂರು ಅಗ್ನಿಶಾಮಕ ಠಾಣೆಯ ಎನ್.ಸಿ.ರಾಮಚಂದ್ರ ನಾಯ್ಕಗೆ ರಾಷ್ಟ್ರಪತಿ ಪದಕ..!

Wednesday, August 15th, 2018
ramachandra

ಮಂಗಳೂರು: 2018ನೇ ಸಾಲಿನ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ವತಿಯಿಂದ ಉತ್ತಮ ಕೆಲಸ ನಿರ್ವಹಿಸಿರುವುದಕ್ಕೆ ನೀಡಲ್ಪಡುವ ಗೌರವಾನ್ವಿತ ರಾಷ್ಟ್ರಪತಿ ಪದಕಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಅಗ್ನಿಶಾಮಕ ಠಾಣೆಯ ಎನ್.ಸಿ.ರಾಮಚಂದ್ರ ನಾಯ್ಕರವರನ್ನು ಘೋಷಿಸಲಾಗಿದೆ. ಎನ್.ಸಿ.ರಾಮಚಂದ್ರ ನಾಯ್ಕ ಅವರು 1993ರಂದು ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಗೆ ಅಗ್ನಿಶಾಮಕ ಚಾಲಕರಾಗಿ ಸೇರ್ಪಡೆಗೊಂಡು ಪುತ್ತೂರು ಹಾಗೂ ಬೆಳ್ತಂಗಡಿ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಬಳಿಕ ಅಗ್ನಿಶಾಮಕ ಚಾಲಕ ಹುದ್ದೆಯಿಂದ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಹುದ್ದೆಗೆ […]

ಮಳೆ ಹಾನಿಯೂ ಸಾಕಷ್ಟು ಆಗಿದೆ..ಇದಕ್ಕೆ ಸೂಕ್ತ ಪರಿಹಾರ ಕೈಗೊಳುತ್ತೆವೆ: ಕುಮಾರಸ್ವಾಮಿ

Tuesday, August 14th, 2018
kumarswamy-2

ಮಂಗಳೂರು: ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. 15 ವರ್ಷದ ಬಳಿಕ ಮಳೆ ವಾಡಿಕೆಗಿಂತ ಹೆಚ್ಚಾಗಿದ್ದು, ಮಳೆ ಹಾನಿಯೂ ಸಾಕಷ್ಟು ಆಗಿದೆ. ಈಗಾಗಲೇ ಪರಿಹಾರವನ್ನೂ ನೀಡಿದ್ದೇವೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು. ಶ್ರಾವಣದ ಮೊದಲ ಸೋಮವಾರದಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಅವರು ಮಾಧ್ಯಮದವರ ಜತೆ ಮಾತನಾಡಿ, ಜಿಲ್ಲಾವಾರು ಮಳೆ ಹಾನಿ ಸಭೆ ನಡೆಸಲು ನೀತಿ ಸಂಹಿತೆ ಸಮಸ್ಯೆ ಇದೆ. ಹಾಗಾಗಿ ಜಿಲ್ಲೆಯ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಸೂಕ್ತ ಪರಿಹಾರ ನೀಡುವ ಭರವಸೆ ನೀಡುತ್ತೇನೆ ಎಂದರು. 75%ಕ್ಕಿಂತ ಅಧಿಕ ಹಾನಿಯಾದ ಮನೆಗಳನ್ನು […]

ಶೀರೂರು ಶ್ರೀ ಬದುಕ್ಕಿದ್ದಾಗ ಏಕೆ ಈ ಆರೋಪ ಮಾಡಿಲ್ಲ: ಸಂತೋಷ ಗುರೂಜಿ

Saturday, August 11th, 2018
santhosh-guruji

ಕಾರವಾರ: ಶೀರೂರು ಮಠದ ಲಕ್ಷ್ಮೀವರತೀರ್ಥ ಶ್ರೀಪಾದ ಶ್ರೀಗಳು ಸ್ವಾಮೀಜಿಯೇ ಅಲ್ಲ, ಅವರು ವ್ಯಸನಿಯಾಗಿದ್ದರು ಎನ್ನುವ ಪೇಜಾವರ ಶ್ರೀಗಳ ಹೇಳಿಕೆ ಒಪ್ಪುವುದಿಲ್ಲ. ಒಂದೊಮ್ಮೆ ಅವರು ಹಾಗಿದ್ದಲ್ಲಿ ಬದುಕಿದ್ದಾಗಲೇ ಇಂತಹ ಆರೋಪಗಳು ಯಾಕೆ ಬಂದಿಲ್ಲ ಎಂದು ಬಾರ್ಕೂರು ಮಹಾಸಂಸ್ಥಾನದ ಸಂತೋಷ ಭಾರತಿ ಗುರೂಜಿ ಪ್ರಶ್ನಿಸಿದ್ದಾರೆ. ಅಂಕೋಲಾದ ಬಾಸ್ಗೋಡಿನಲ್ಲಿ ಮಾತನಾಡಿದ ಅವರು, ಲಕ್ಷ್ಮೀವರತೀರ್ಥ ಶ್ರೀಪಾದ ಶ್ರೀ 43 ವರ್ಷಕ್ಕೂ ಅಧಿಕ ಕಾಲ ಶೀರೂರು ಮಠದ ಶ್ರೀಗಳಾಗಿದ್ದು, ಮಠಾಧಿಪತಿಯು ಆಗಿದ್ದಾರೆ. 3 ಪರ್ಯಾಯಗಳನ್ನ ನಡೆಸಿದ್ದಾರೆ. ಅವರು ಬದುಕಿದ್ದಾಗ ಯಾಕೆ ಇವೆಲ್ಲಾ ಆರೋಪ ಬರಲಿಲ್ಲ […]

ಶಿರೂರು ಮೂಲ ಮಠದ ಬೆಲೆಬಾಳುವ ಸೊತ್ತುಗಳು ಉಡುಪಿಗೆ

Thursday, August 2nd, 2018
Shiroor math

ಉಡುಪಿ :  ಹಿರಿಯಡ್ಕ ಸಮೀಪದ ಶಿರೂರು ಮೂಲ ಮಠದಲ್ಲಿದ್ದ ಬೆಲೆಬಾಳುವ, ಅಮೂಲ್ಯ ಸೊತ್ತುಗಳನ್ನು ಸುರಕ್ಷತೆಯ ದೃಷ್ಠಿಯಿಂದ ದ್ವಂದ್ವ ಮಠವಾದ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಇಂದು ಪೊಲೀಸರ ಸಮ್ಮುಖದಲ್ಲಿ ಉಡುಪಿಯ ಶಿರೂರು ಮಠಕ್ಕೆ ತಂದು ಅಲ್ಲಿನ ಲಾಕರ್‌ನಲ್ಲಿರಿಸಿದರು. ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಜು.19ರಂದು  ಮೃತಪಟ್ಟ ನಂತರ ತನಿಖೆಯ ಹಿನ್ನೆಲೆಯಲ್ಲಿ ಪೊಲೀಸರು ಶಿರೂರು ಮೂಲ ಮಠವನ್ನು ತಮ್ಮ ಸುಪರ್ದಿಗೆ ಪಡೆದು ಬಿಗಿ ಭದ್ರತೆಯನ್ನು ಒದಗಿಸಿದ್ದರು. ತೀರಾ ಗ್ರಾಮೀಣ ಪ್ರದೇಶವಾದ ಶಿರೂರಿನ ಮೂಲಮಠದಲ್ಲಿರುವ ಬೆಲೆಬಾಳುವ ಹಲವು […]

26 ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ

Tuesday, July 31st, 2018
Incharge

ಬೆಂಗಳೂರು :  ಕಾಂಗ್ರೆಸ್ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳ ನಂತರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದ್ದಾರೆ. ಖಾತೆ ಹಂಚಿಕೆ ಬಳಿಕ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಮತ್ತು ಸಚಿವ ಸ್ಥಾನ ಪಡೆದುಕೊಂಡ ಸಚಿವರಲ್ಲೂ ಹಲವರು ಗೊಂದಲ ಹೊಂದಿದ್ದರಿಂದ ಸಿಎಂ ಕುಮಾರಸ್ವಾಮಿ ಅವರು ಜಿಲ್ಲಾ ಉಸ್ತುವಾರಿ ಸಚಿವರ ನೇಮಕವನ್ನು ಮುಂದೂಡುತ್ತಾ ಬಂದಿದ್ದರು. ಇಂದು ಸಂಜೆ ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿ, ಪಟ್ಟಿ […]

ರಾಜ್ಯದ ಎಲ್ಲ ಅಂಗನವಾಡಿಗಳಲ್ಲಿ ಬಯೋಮೆಟ್ರಿಕ್‌ ಹಾಜರಾತಿ ಕಡ್ಡಾಯ: ಸಚಿವೆ ಜಯಮಾಲಾ

Wednesday, July 25th, 2018
jayamala

ಮಂಗಳೂರು: ಅಂಗನವಾಡಿ ವ್ಯವಸ್ಥೆ ಪಾರದರ್ಶಕವಾಗಿಸಲು ರಾಜ್ಯದ ಎಲ್ಲ ಅಂಗನವಾಡಿಗಳಲ್ಲಿ ಬಯೋಮೆಟ್ರಿಕ್‌ ಹಾಜರಾತಿ ಕಡ್ಡಾಯ ಗೊಳಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಹೇಳಿದರು. ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿಗಳ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರನ್ನು ಇಲಾಖೆಯ ಕೆಲಸಗಳಿಗೆ ಬಿಟ್ಟು ಅನ್ಯ ಕೆಲಸಗಳಿಗೆ ಬಳಸುವಂತಿಲ್ಲ. […]

ಗಾಳಿ ಮಳೆಗೆ ಬೆಚ್ಚಗೆ ಮಲಗಬೇಕಾದ ಆ ಪುಟಾಣಿಗಳು, ಭಿಕ್ಷೆ ಬೇಡುತ್ತಾ ತಿರುಗುತ್ತಾರೆ

Tuesday, July 24th, 2018
Beggars

ಮಂಗಳೂರು : ಬೆಚ್ಚನೆಯ ಹೊದಿಕೆ ಹಾಕಿ, ಹಾಲು ಬ್ರೆಡ್ಡು ತಿಂದು ಹಾಯಾಗಿ ಮಲಗುವ ಮಕ್ಕಳು ಇಂದು ಭಿಕ್ಷಾಟನೆಗೆ ಇಳಿದಿದ್ದಾರೆ. ಪೌಷ್ಟಿಕಾಂಶವಿಲ್ಲದೆ, ಆಹಾರ ವಿಲ್ಲದೆ, ತಮ್ಮ ಭವಿಷ್ಯವನ್ನೇ ನಷ್ಟಮಾಡಿಕೊಳ್ಳುತ್ತಿದ್ದಾರೆ. ಶ್ರೀಮಂತರ ಮಕ್ಕಳೇನೋ ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕಿ ಶಾಲೆಗೆ ಹೋಗುತ್ತಾರೆ. ಅವರು ಕೆಮ್ಮಿದರೆ ಜೌಷಧಿಕೊಡಲು ಪಾಲಕರು ಜೊತೆಯಲ್ಲಿಯೇ ಇರುತ್ತಾರೆ. ಅದರೆ ಭಿಕ್ಷುಕ ಮಕ್ಕಳಿಗೆ? ಹಸಿವಿಗಾಗಿ ಆ ಪುಟ್ಟ ಮಕ್ಕಳು ಗೋಗರೆಯುವುದನ್ನು ನೀವು ನೋಡಿದರೆ ನಿಮ್ಮ ಮನ ಕರಗದೆ ಇರಲಾರದು. ಗಾಳಿ ಮಳೆಗೆ ಬೆಚ್ಚಗೆ ಮಲಗಬೇಕಾದ ಆ ಪುಟಾಣಿಗಳು ನಡುಗುತ್ತಾ […]

ಸಿಎ-ಸಿಪಿಟಿಯಲ್ಲಿ ಆಳ್ವಾಸ್ ಅತ್ಯುತ್ತಮ ಸಾಧನೆ

Saturday, July 21st, 2018
alwas-clg

ಮೂಡುಬಿದಿರೆ: ಆಳ್ವಾಸ್ ಪಿಯು ಕಾಲೇಜಿನ 147 ಮಂದಿ ವಿದ್ಯಾರ್ಥಿಗಳು ಸಿಎ-ಸಿಪಿಟಿ ಪರೀಕ್ಷೆ ಬರೆದಿದ್ದು, ಅದರಲ್ಲಿ 74 ಮಂದಿ ತೇರ್ಗಡೆ ಹೊಂದಿದ್ದಾರೆ. 9ಮಂದಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಆಳ್ವಾಸ್ ವಿದ್ಯಾರ್ಥಿಗಳಾದ ಅಶ್ವಿನಿ ಶೆಣೈ, ನೂತನ್ ಬಿ.ಯು, ಶುಭಕರ್ ಎ.ಚೌಗಲೆ, ಹರ್ಷಿತ್ ವಿ., ರಕ್ಷಾ ರಮೇಶ್ ಶೆಟ್ಟಿ, ಹರ್ಷಿತ್ ವೈ, ಶ್ರೇಯಾ ಡಿ., ಸುಕ್ಷ್ಮಾ ಎಸ್.ಆಚಾರ್ಯ, ಭರತ್ ಗಜಾನನ ಹೆಗ್ಡೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು. ವಿದ್ಯಾರ್ಥಿಗಳಾ ಸಾಧನೆಗೆ ಆಳ್ವಾಸ್ ಶಿಕ್ಷಣ […]