ವಿಶ್ವ ಹಿಂದೂ ಪರಿಷತ್ ಕಾಸರಗೋಡು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಂಗಾರ ಶ್ರೀಪಾದ ನಿಧನ

Monday, September 28th, 2020
Angara Sripada

ಕಾಸರಗೋಡು : ಉಪ್ಪಳ ಬಾಯಾರಿನ ಪೆರ್ವೋಡಿ ನಿವಾಸಿ ಅಂಗಾರ ಶ್ರೀಪಾದ (69) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಬೆಳಗ್ಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಬಾಯಾರು ಸಹಕಾರಿ ಬ್ಯಾಂಕ್ ನ ನಿರ್ದೇಶಕರೂ ಆಗಿದ್ದ ಇವರು ಈ ಹಿಂದೆ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಕಳೆದ ಹತ್ತು ವರ್ಷಗಳಿಂದ ವಿಶ್ವ ಹಿಂದೂ ಪರಿಷತ್ ನ ಕಾಸರಗೋಡು ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕಾಸರಗೋಡು ಕೊರೊನಾ ಹಾವಳಿ : ಪುತ್ತೂರು ವಿಭಾಗದ ಕಾಸರಗೋಡು, ಉಪ್ಪಳ ಕೆಎಸ್ಸಾರ್ಟಿಸಿ ಬಸ್ಸು ಸಂಚಾರ ರದ್ದು

Monday, March 23rd, 2020
putturu Kasaragod

ಪುತ್ತೂರು: ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪುತ್ತೂರು-ಕಾಸರಗೋಡು, ಪುತ್ತೂರು-ಉಪ್ಪಳ, ಪುತ್ತೂರು-ಅಡೂರು ಸೇರಿದಂತೆ ಕೆಎಸ್ಸಾರ್ಟಿಸಿ ಅಂತರ್‍ರಾಜ್ಯ ಸಾರಿಗೆ ಸೇವೆಯನ್ನು ಮಾ. 31ರವರೆಗೆ ಸ್ಥಗಿತಗೊಳಿಸಲಾಗಿದ್ದು, ಜಿಲ್ಲಾಡಳಿತದ ಸೂಚನೆಯಂತೆ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗ ನಿಯಂತ್ರಣಾಧಿಕಾರಿ ನಾಗೇಂದ್ರ ತಿಳಿಸಿದ್ದಾರೆ. ಪುತ್ತೂರು ವಿಭಾಗ ವ್ಯಾಪ್ತಿಯ ಧರ್ಮಸ್ಥಳ, ಬಿ.ಸಿ. ರೋಡು, ಮಡಿಕೇರಿ, ಸುಳ್ಯ ಘಟಕಗಳಿಂದಲೂ ಕಾಸರಗೋಡು ಜಿಲ್ಲೆಗೆ ಓಡಾಟ ನಡೆಸುವ ಬಸ್‍ಗಳ ಸಂಚಾರವನ್ನು ಮಾ. 31ರವರೆಗೆ ಸ್ಥಗಿತಗೊಳಿಸಲಾಗಿದೆ ಪ್ರಯಾಣಿಕರು ಸಹಕರಿಸುವಂತೆ ಅವರು ವಿನಂತಿಸಿದ್ದಾರೆ. ಮಾ. 22ರಂದು ನಡೆಯುವ […]

ಗಡಿನಾಡ ಕುವರಿಗೆ ಮಂಗಳೂರು ಯುನಿವರ್ಸಿಟಿಯಲ್ಲಿ ಮೊದಲ ರ‍್ಯಾಂಕ್

Thursday, March 5th, 2020
poojashree

ಉಪ್ಪಳ : ಸಪ್ತ ಭಾಷಾ ಸಂಗಮ ಭೂಮಿ ಮಂಜೇಶ್ವರದ ಉಪ್ಪಳ ಭಗವತಿಗೆ ಅಭಿಮಾನವಾದ ಕ್ಷಣ. ಮಂಗಳೂರು ಎಂ.ಎ ಯುನಿವರ್ಸಿಟಿಯಲ್ಲಿ ಪೊಲಿಟಿಕಲ್ ಸಯನ್ಸ್ ನಲ್ಲಿ ಮೊದಲ ಶ್ರೇಣಿ ಪಡೆದ ಉಪ್ಪಳ ಶ್ರೀ ಭಗವತಿ ಕ್ಷೇತ್ರದ ಪೂಜಾರಿಯವರ ಸೊಸೆ ಹಾಗೂ ನಾರಾಯಣ ಉಮಾವತಿ ದಂಪತಿಗಳ ಸುಪುತ್ರಿ ಕುಮಾರಿ ಪೂಜಶ್ರೀಯನ್ನು ಭಾರತೀಯ ಜನತಾ ಪಕ್ಷದ ಮಂಜೇಶ್ವರ ಮಂಡಲ ಸಮಿತಿಯ ವತಿಯಿಂದ ಮಂಡಲ ಅಧ್ಯಕ್ಷರಾದ ಮಣಿಕಂಠ ರೆೃ ಪಟ್ಲ, ಉಪಾಧ್ಯಕ್ಷರಾದ ಪದ್ಮನಾಭ ಕಡಪ್ಪರ, ಜಯಂತಿ ಟಿ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಆದಶ್೯ ಬಿ.ಎಂ ಮಂಜೇಶ್ವರ್ […]

ನ್ಯೂಮೋನಿಯಾ ದಿಂದ ಉಪ್ಪಳದ ವ್ಯಕ್ತಿ ಸಾವು

Tuesday, July 2nd, 2019
ramesh-shetty

ಕಾಸರಗೋಡು : ಉಪ್ಪಳ ಜೋಡುಕಲ್ಲು ಓಪತ್ತಿಮೂಲೆಯ ರಮೇಶ್ ಶೆಟ್ಟಿ(44)  ನ್ಯೂಮೋನಿಯಾ ದಿಂದ ಸೋಮವಾರ  ಸಾವನ್ನಪ್ಪಿದ್ದಾರೆ . ಪೈಂಟಿಂಗ್ ಕಾರ್ಮಿಕನಾಗಿದ್ದ ರಮೇಶ್ ಶೆಟ್ಟಿ ಒಂದು ವರ್ಷದ ಹಿಂದೆ ಮುಂಬೈಯ ಹೋಟೆಲ್ ನಲ್ಲಿ ಕಾರ್ಮಿಕನಾಗಿ ಕೆಲಸಮಾಡಿದ್ದರು. ಬಳಿಕ ಊರಿಗೆ ಬಂದು ಪೈಂಟಿಂಗ್ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಕಲ್ಲಿಕೋಟೆಯಲ್ಲಿ ಕಟ್ಟಡವೊಂದರ ಪೈಂಟಿಂಗ್ ಕೆಲಸಕ್ಕೆ ತೆರಳಿದ್ದರು. ಜ್ವರದ ಹಿನ್ನಲೆಯಲ್ಲಿ ಊರಿಗೆ ಬಂದಿದ್ದ ರಮೇಶ್ ರವರು ಶುಕ್ರವಾರ ಉಪ್ಪಳದ ಖಾಸಗಿ ಆಸ್ಪತ್ರೆಯಿಂದ ಔಷದಿ ತೆಗೆದುಕೊಂಡರೂ ವಾಸಿಯಾಗದ ಕಾರಣ ಶನಿವಾರ ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. […]

60ನೇ ರಾಜ್ಯಮಟ್ಟದ ಗೇಮ್ಸ್ ಗೆ ಉಪ್ಪಳದಲ್ಲಿ ಚಾಲನೆ

Wednesday, November 9th, 2016
Kabbaddi

ಉಪ್ಪಳ: ಬಹುಭಾಷಾ ಸಂಗಮ ಭೂಮಿಯಾದ ಗಡಿನಾಡು ಕಾಸರಗೋಡಿನ ಉಪ್ಪಳದ ಮಣ್ಣಂಗುಳಿ ಮೈದಾನದಲ್ಲಿ ಇದೇ ಮೊತ್ತಮೊದಲ ಬಾರಿಗೆ ರಾಜ್ಯಮಟ್ಟದ ಶಾಲಾ ಗೇಮ್ಸ್ ಗೆ ಮಂಗಳವಾರ ಚಾಲನೆ ನೀಡಲಾಯಿತು. ಮಂಗಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು ಸಮಾರಂಭವನ್ನು ಉದ್ಘಾಟಿಸಿದರು. ಮಂಗಳವಾರದಿಂದ ಮೊದಲ್ಗೊಂಡು ಮೂರು ದಿನಗಳವರೆಗೆ ನಡೆಯುವ ಗೇಮ್ಸ್ ನಲ್ಲಿ ರಾಜ್ಯದ 14 ಜಿಲ್ಲೆಗಳ 1400 ವಿದ್ಯಾರ್ಥಿಗಳು ಪಾಲ್ಗೊಳ್ಳುವರು. ಕುಸ್ತಿ, ಕಬಡ್ಡಿ, ಹ್ಯಾಂಡ್ ಬಾಲ್, ರಸ್ ಲಿಂಗ್ ಗಳ ಚಾಂಫಿಯನ್‌ಶಿಫ್ ನಡೆಯುತ್ತಲಿದೆ.ಸ್ಥಳೀಯ ಉಪ್ಪಳ,ಮಂಜೇಶ್ವರ ಪ್ರದೇಶದ ನಾಗರಿಕ ಸಮಿತಿ ನೆರವು ನೀಡುತ್ತಿದೆ. ಗಡಿ […]

ವ್ಯಾಪಾರಿ ದಿನಾಚರಣೆ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಉಪ್ಪಳದಲ್ಲಿ ಚಾಲನೆ

Wednesday, August 10th, 2016
Business Day

ಮಂಜೇಶ್ವರ: ವ್ಯಾಪಾರಿ ವ್ಯಸಾಯಿ ಏಕೋಪನಾ ಸಮಿತಿ ಹಮ್ಮಿಕೊಂಡ ವ್ಯಾಪಾರಿ ದಿನಾಚರಣೆಯ ಜಿಲ್ಲಾ ಮಟ್ಟದ ಉದ್ಘಾಟನೆ ಮಂಗಳವಾರ ಬೆಳಿಗ್ಗೆ ಉಪ್ಪಳದಲ್ಲಿ ನಡೆಯಿತು. ಕೆವಿವಿಇಎಸ್ ಉಪ್ಪಳ ಘಟಕದ ಉಪ್ಪಳದಲ್ಲಿರುವ ವ್ಯಾಪಾರ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಪಧಾನ ಕಾರ್ಯದರ್ಶಿ ಟಿ. ಎಂ. ಜೋಸ್ ತಯ್ಯಿಲ್ ಉದ್ಘಾಟಿಸಿದರು. ಉಪ್ಪಳ ಘಟಕದ ಅಧ್ಯಕ್ಷ ಮೊಹಮ್ಮದ್ ರಫೀಕ್ ಕೆ.ಐ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದ ಅಂಗವಾಗಿ ಉಪ್ಪಳ ಹನಫಿ ಬಜಾರ್‌ನಿಂದ ಉಪ್ಪಳ ವ್ಯಾಪಾರ ಭವನವರೆಗೆ ವ್ಯಾಪಾರಿಗಳಿಂದ ಮೆರವಣಿಗೆ ನಡೆಯಿತು. ಈ ವೇಳೆ ವ್ಯಾಪಾರಿಗಳ ಯೂತ್ ವಿಂಗ್ […]

ಆಳ್ವಾಸ್ ನುಡಿಸಿರಿ 2015ರ ಸರ್ವಾಧ್ಯಕ್ಷರಾಗಿ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ

Thursday, November 5th, 2015
Venkatachala

ಮೂಡುಬಿದಿರೆ : ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ ನಡೆಸಿಕೊಂಡು ಬರುತ್ತಿರುವ ನಾಡು-ನುಡಿ-ಸಂಸ್ಕೃತಿಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಆಳ್ವಾಸ್ ನುಡಿಸಿರಿ. ಈ ಸಮ್ಮೇಳನವನ್ನು ಕಳೆದ 12 ವರ್ಷಗಳಿಂದ ಕನ್ನಡ ಬಾಂಧವರ ಸಹಕಾರದಿಂದ ನಿರಂತರವಾಗಿ ಸಂಘಟಿಸಿಕೊಂಡು ಬರುವ ಮೂಲಕ ನಾಡಿನಾದ್ಯಂತ ನಾಡು-ನುಡಿಯ ಎಚ್ಚರವನ್ನು, ಸಂಸ್ಕೃತಿ ಪ್ರೀತಿ-ಗೌರವಗಳನ್ನು ವೃದ್ಧಿಸಲು ಸಾಧ್ಯವಾಗಿದೆ. ಕನ್ನಡಿಗರ ಹೆಮ್ಮೆಯ ಈ ಕಾರ್ಯಕ್ರಮವು ಈ ವರ್ಷ ನವೆಂಬರ್ 26, 27, 28 ಮತ್ತು 29 (ಗುರುವಾರ, ಶುಕ್ರವಾರ, ಶನಿವಾರ ಮತ್ತು ಆದಿತ್ಯವಾರ) ನೇ ದಿನಾಂಕಗಳಂದು […]