ಕುಲಶೇಖರದ ಬಳಿ ರಸ್ತೆ ಅಪಘಾತ : ಓರ್ವನ ಸಾವು

3:15 PM, Wednesday, March 27th, 2013
Share
1 Star2 Stars3 Stars4 Stars5 Stars
(No Ratings Yet)
Loading...

Accsident near Kulashekar ಮಂಗಳೂರು : ಇಂದು ಬೆಳಗ್ಗೆ  ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರಿಗೆ ಓಮ್ನಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದು ಇನ್ನೋರ್ವ ಮಹಿಳೆಗೆ ಗಂಭೀರ ಗಾಯಗೊಂಡ ಘಟನೆ  ಕುಲಶೇಖರದ ಸೇಕ್ರೆಡ್ ಹಾರ್ಟ್ ಸ್ಕೂಲ್ ಬಳಿ ನಡೆದಿದೆ.

ವಾಮಂಜೂರಿನಿಂದ ಕುಲಶೇಖರದ ಕಡೆಗೆ ಹೋಗುತ್ತಿದ್ದ ಓಮ್ನಿ ಕಾರು  ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಆಲ್ಬರ್ಟ್ ಫ್ರಾನ್ಸಿಸ್ಕೋ ಹಾಗೂ ಮಹಿಳೆಗೆ ಡಿಕ್ಕಿ ಹೊಡೆಯಿತು ಪರಿಣಾಮ ಆಲ್ಬರ್ಟ್ ಫ್ರಾನ್ಸಿಸ್ಕೋ(60) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English