ಉಡುಪಿ : ಹತ್ತು ವರ್ಷಗಳ ಹಿಂದೆ ಉಡುಪಿ ಶಾಸಕ ರಘುಪತಿ ಭಟ್ ರಿಂದ ಟಿಕೇಟ್ ವಂಚಿತರಾಗಿದ್ದ ಸುಧಾಕರ್ ಶೆಟ್ಟಿಯವರಿಗೆ ಇದೀಗ ರಘುಪತಿ ಭಟ್ ರ ಕಾರಣದಿಂದಲೇ ಉಡುಪಿ ವಿದಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ಟಿಕೆಟ್ ನೀಡಿದೆ.
ರಾಸಲೀಲೆ ಪ್ರಕರಣದ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದ ಉಡುಪಿ ಶಾಸಕ ರಘುಪತಿ ಭಟ್ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಪಕ್ಷ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಿದರೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಆದರೆ ಇದೀಗ ಪಕ್ಷ ರಘುಪತಿ ಭಟ್ ಗೆ ಸ್ಪರ್ಧಿಸಲು ಅವಕಾಶ ನಿರಾಕರಿಸಿ ಸುಧಾಕರ್ ಶೆಟ್ಟಿಯವರಿಗೆ ಟಿಕೆಟ್ ನೀಡಿದೆ.
ಸುಧಾಕರ್ ಶೆಟ್ಟಿ ಹತ್ತು ವರ್ಷಗಳ ಹಿಂದೆ ಪಕ್ಷದ ಬೆಳವಣಿಗೆಗೆ ಶ್ರಮಿಸಿ ಚುನಾವಣೆಯಲ್ಲಿ ಸೋಲನ್ನಪ್ಪಿದ್ದರು. ಆ ಬಳಿಕ ಪಕ್ಷ ಚುನಾವಣೆಯಲ್ಲಿ ಸುಧಾಕರ್ ಶೆಟ್ಟರಿಗೆ ಟಿಕೇಟ್ ನೀಡುವ ಬದಲು ರಘುಪತಿ ಭಟ್ ಗೆ ನೀಡಿತ್ತು. ಇದರಿಂದ ಕೆಲವು ವರ್ಷಗಳ ಹಿಂದೆ ಪಕ್ಷ ಬಿಟ್ಟು ಹೊರನಡೆದಿದ್ದ ಸುಧಾಕರ್ ಶೆಟ್ಟಿಯವರು ನಂತರ ಪಕ್ಷಕ್ಕೆ ಮರಳಿ ಬಂದಿದ್ದರು. ಇದೀಗ ಸುಧಾಕರ್ ಶೆಟ್ಟಿಯವರಿಗೆ ರಘುಪತಿ ಭಟ್ ರ ಕಾರಣದಿಂದಲೇ ಮತ್ತೆ ಟಿಕೇಟ್ ಲಭಿಸಿದಂತಾಗಿದೆ.
Click this button or press Ctrl+G to toggle between Kannada and English