ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ರಾಷ್ಟ್ರೀಯ ಭದ್ರತಾ ದಳವು (NSG) ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಸಿದ್ಧತೆಗಾಗಿ ಅಣಕು ಪ್ರದರ್ಶನವನ್ನು ಹಮ್ಮಿಕೊಂಡಿದೆ. ಈ ಅಭ್ಯಾಸದ ಭಾಗವಾಗಿ ಗುರುವಾರ ಬೆಳಿಗ್ಗೆ ಬಂದರು ನಗರಿ ಮಂಗಳೂರಿನ ಆಕಾಶದಲ್ಲಿ ಕೆಳಮಟ್ಟದಲ್ಲಿ ಹೆಲಿಕಾಪ್ಟರ್ ನಿರಂತರವಾಗಿ ಹಾರಾಟ ನಡೆಸಿದ್ದು, ಹಠಾತ್ ಬೆಳವಣಿಗೆಯಿಂದಾಗಿ ಸ್ಥಳೀಯ ನಿವಾಸಿಗಳು ಒಂದು ಕ್ಷಣ ದಿಗ್ಭ್ರಮೆಗೊಂಡರು.
ನಗರದ ಹಲವು ಪ್ರಮುಖ ಪ್ರದೇಶಗಳ ಮೇಲೆ ಏಕಾಏಕಿ ಶಬ್ದ ಮಾಡುತ್ತಾ ಅತ್ಯಂತ ಕೆಳಮಟ್ಟದಲ್ಲಿ ಹೆಲಿಕಾಪ್ಟರ್ ಹಾರಾಡಿದ್ದನ್ನು ಕಂಡ ಸಾರ್ವಜನಿಕರಲ್ಲಿ ಹಲವು ಅನುಮಾನಗಳು ಹಾಗೂ ಆತಂಕಗಳು ವ್ಯಕ್ತವಾದವು. ಜನಸಾಮಾನ್ಯರು ಘಟನೆಯ ನಿಜಾಂಶ ತಿಳಿಯದೆ ಕೊಂಚ ಗಾಬರಿಗೊಂಡ ಸನ್ನಿವೇಶವೂ ನಿರ್ಮಾಣವಾಗಿತ್ತು.
ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಪೊಲೀಸ್ ಉನ್ನತಾಧಿಕಾರಿಗಳು, ಇದು ಎನ್ಎಸ್ಜಿ ಪಡೆಯ ಕಾರ್ಯಾಚರಣೆಯ ದಕ್ಷತೆ ಮತ್ತು ಸಿದ್ಧತೆಯನ್ನು ಪರಿಶೀಲಿಸಲು ಆಯೋಜಿಸಲಾದ ಕೇವಲ ಅಣಕು ಕಾರ್ಯಾಚರಣೆಯಾಗಿದೆ (Mock Drill) ಎಂದು ತಿಳಿಸಿದ್ದಾರೆ. ನಾಗರಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೆ ಧೈರ್ಯವಾಗಿರಬೇಕು ಮತ್ತು ಆತಂಕ ಪಡುವ ಅಗತ್ಯವಿಲ್ಲ ಎಂದು ಮನವಿ ಮಾಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










