ಮಂಗಳೂರು : ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್ ಲೋಬೊ ರವರನ್ನು ಬೆಂಬಲಿಸುವಂತೆ ಬುಧವಾರ ಜಿಲ್ಲಾ ಕಾಂಗ್ರೆಸ್ ನ ಕಾನೂನು ಮತ್ತು ಮಾನವ ಹಕ್ಕು ವಿಭಾಗದ ಆಶ್ರಯದಲ್ಲಿ ಬುಧವಾರ ನಡೆದ ವಕೀಲರ ಸಭೆಯಲ್ಲಿ ಮನವಿ ಮಾಡಿಕೊಳ್ಳಲಾಯಿತು. ಸಭೆಯಲ್ಲಿ ಹಿರಿಯ ವಕೀಲರಾದ ಸೀತಾರಾಮ ಶೆಟ್ಟಿ, ಪುರುಷೋತ್ತಮ ಪೂಜಾರಿ, ವೆಲೆಂಟೈನ್ ಡಿ’ಸಿಲ್ವಾ, ನಾರಾಯಣ ಪೂಜಾರಿ, ಬಿ. ಇಬ್ರಾಹಿಂ, ಕಳ್ಳಿಗೆ ತಾರಾನಾಥ ಶೆಟ್ಟಿ, ಎಂ.ಪಿ. ಶೆಣೈ, ರಾಜೇಂದ್ರ ಕುಮಾರ್, ಎಂ.ಪಿ. ನೊರೋನ್ಹಾ ಉಪಸ್ಥಿತರಿದ್ದು, ಜೆ.ಆರ್. ಲೋಬೊ ಅವರಿಗೆ ಬೆಂಬಲ ಸೂಚಿಸಿದರು.
ಮಂಗಳೂರನ್ನು ಇಡೀ ರಾಜ್ಯದಲ್ಲಿಯೇ ೨ ನೇ ಪ್ರಮುಖ ಹಾಗೂ ಅತ್ಯುತ್ತಮ ನಗರವನ್ನಾಗಿ ಅಭಿವೃದ್ಧಿ ಪಡಿಸುವ ಗುರಿಯನ್ನು ತಾವು ಹೊಂದಿದ್ದು ಇದಕ್ಕೆ ಎಲ್ಲರ ಸಹಕಾರ ಮತ್ತು ಬೆಂಬಲ ಅಗತ್ಯ ಎಂದರು.
Click this button or press Ctrl+G to toggle between Kannada and English