ಉಪ್ಪಿನಂಗಡಿ: ದಂಪತಿಯ ನಡುವಿನ ದೂರವಾಣಿ ಸಂಭಾಷಣೆಯಲ್ಲಾದ ತೀವ್ರ ತಕರಾರು ಕೊನೆಯಲ್ಲಿ ಮಹಾಪಾಪಕ್ಕೆ ಕಾರಣವಾದ ಘಟನೆ ಸಮೀಪದ ಪೆರ್ನೆ ಮೈರಕಟ್ಟೆಯಲ್ಲಿ ಸಂಭವಿಸಿದೆ. ಕೌಟುಂಬಿಕ ಜಗಳದಿಂದ ಕೆರಳಿದ ನೂರುನ್ನಿಸಾ ಎಂಬಾಕೆ ತನ್ನ 3.5 ವರ್ಷದ ಹೆಣ್ಣುಮಗು ಹಾಗೂ ಪತಿಯ ಸಹೋದರಿಯ 3 ವರ್ಷದ ಗಂಡುಮಗುವನ್ನು ಹತ್ತಿರದ ಬಾವಿಗೆ ಎಸೆದಿದ್ದಾಳೆ. ಈ ದುರಂತದಲ್ಲಿ ಒಂದು ಮಗು ಪ್ರಾಣ ಕಳೆದುಕೊಂಡಿದೆ. ಕೃತ್ಯ ಎಸಗಿದ ಬಳಿಕ ಸ್ಥಳದಲ್ಲೇ ಇದ್ದ ಆರೋಪಿಯನ್ನು ಉಪ್ಪಿನಂಗಡಿ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿ ದೂರು ದಾಖಲಿಸಿಕೊಂಡ ಪೋಲಿಸರು ಬಂಧಿತ ನೂರುನ್ನಿಸಾಳನ್ನು ಸೆಪ್ಟೆಂಬರ್ 20 ರಂದು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









