ಬೆಂಗಳೂರು: ಮಕರ ಶ್ರೀ ಭಜನಾ ಮಂಡಳಿ (ರಿ.) ಬೆಂಗಳೂರು ಇದರ ‘ಮನೆ-ಮನಗಳಲ್ಲಿ ಭಜನೆ’ ಧೈಯವಾಕ್ಯದೊಂದಿಗೆ ನಾಲ್ಕನೇ ವರ್ಷದ ಭಜನಾ ಮಹೋತ್ಸವವು ಇದೇ ಬರುವ ಅಕ್ಟೋಬರ್ 03, 2026ರ ಶನಿವಾರದಂದು ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಸಾನ್ನಿಧ್ಯದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಲಿದೆ.
ಅಂದು ಮಧ್ಯಾಹ್ನ 2:00 ಗಂಟೆಯಿಂದ ರಾತ್ರಿ 9:00 ಗಂಟೆಯವರೆಗೆ ಜರುಗಲಿರುವ ಈ ಧಾರ್ಮಿಕ ಕಾರ್ಯಕ್ರಮವು ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ದಿವ್ಯ ಸ್ಮರಣೆಯೊಂದಿಗೆ, ಜಗದ್ಗುರು ಡಾ. ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಪೂರ್ಣಾನುಗ್ರಹ ಹಾಗೂ ಶ್ರೀ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದೆ.
ಮಧ್ಯಾಹ್ನ 2:15 ರಿಂದ ಬೆಂಗಳೂರು ನಗರದ ನಾನಾ ಭಾಗಗಳಿಂದ ಆಗಮಿಸುವ ವಿವಿಧ ಭಜನಾ ಮಂಡಳಿಗಳಿಂದ ನಾದಮಯ ಭಜನಾ ಸಂಕೀರ್ತನೆ ಸೇವೆ ಜರುಗಲಿದ್ದು, ರಾತ್ರಿ 8:20 ರಿಂದ ಭಜನಾ ಮಂಗಲೋತ್ಸವ, ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿದೆ.
ಕೇವಲ ಭಜನೆಗೆ ಮಾತ್ರ ಸೀಮಿತವಾಗದೆ ಕಳೆದ ಎರಡು ವರ್ಷಗಳಿಂದ ‘ವಿದ್ಯಾನಿಧಿ’ ಮತ್ತು ‘ಆರೋಗ್ಯನಿಧಿ’ ಎಂಬ ಸಾಮಾಜಿಕ ಯೋಜನೆಗಳ ಮೂಲಕ ಅಶಕ್ತರಿಗೆ ನೆರವಾಗುತ್ತಾ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವ ಮಂಡಳಿಯು, ಈ ಶುಭ ಸಂದರ್ಭದಲ್ಲಿ ಭಕ್ತಾದಿಗಳು ಸಕುಟುಂಬ ಸಪರಿವಾರವಾಗಿ ಭಾಗವಹಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸಿಕೊಂಡಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









