ಮಂಗಳೂರು : ನಗರದ ಬಂದರು ಬದ್ರಿಯಾ ಕಾಲೇಜಿನ ಸಮೀಪ ವಿರುವ ಅಶೋಕ ಆಟೊ ವರ್ಕ್ಸ್ ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಪೂರ್ಣೇಶ್ ತನ್ನ ಹಿರೋ ಹೊಂಡ ಬೈಕನ್ನು ಮಳೆಯಲ್ಲಿ ರೈನ್ ಕೋಟ್ ರಹಿತವಾಗಿ ಸಂಚರಿಸಲು ಯೋಗ್ಯವಾಗುವಂತೆ ಸಿದ್ದಗೊಳಿಸಿದ್ದಾರೆ.
2001 ಮಾಡೆಲಿನ ಹಿರೋ ಹೊಂಡಾ ಕಂಪನಿಯ ಬೈಕನ್ನು ಸುಮಾರು 4 ಸಾವಿರ ವೆಚ್ಚದಲ್ಲಿ ಕಾರಿನಂತೆ ಬೈಕಿನ ಎದುರಿಗೆ ಗಾಜು, ಮೇಲ್ಚಾವಣಿ ನಿರ್ಮಿಸಿ ಹೊಸ ಮಾದರಿಯ ಪ್ರಯೋಗ ನಡೆಸಿದ್ದಾರೆ.
ಕೇವಲ 5 ಬೋಳ್ಟ್ ಗಳನ್ನು ಅಳವಡಿಸಿ ಈ ಹೊಸ ಪ್ರಯೋಗ ಮಾಡಲಾಗಿದೆ. ಇದು ಮಳೆಗಾಲದ ಆರು ತಿಂಗಳಿಗೆ ಉಪಯೋಗಿಸಿ ಮತ್ತೆ ಕಳಚಿಡಬಹುದಾಗಿದೆ. ಬೈಕಿನಲ್ಲಿ ಒಬ್ಬನಿಗೆ ಎಷ್ಟೇ ಮಳೆ ಬಂದರೂ ನಿಶ್ಚಿಂತೆಯಿಂದ ಸಂಚರಿಸಬಹುದು.
ಈ ಪ್ರಯೋಗಕ್ಕೆ ಪೋಲಿಸರ ಕಿರಿಕಿರಿ ಇಲ್ಲ ಎನ್ನುತ್ತಾರೆ ಮೆಕ್ಯಾನಿಕ್ ಪೂರ್ಣೇಶ್. ಆದರೂ ಈ ಹೊಸ ಪ್ರಯೋಗಕ್ಕೆ ಆರ್.ಟಿ.ಓ ಪರ್ಮಿಸನ್ ತಗೊಳ್ಳಿ ಎಂದು ಸೂಚನೆ ನೀಡಿದ್ದಾರಂತೆ.
ಈ ಹೊಸ ಪ್ರಯೋಗಕ್ಕೆ ಆರ್.ಟಿ.ಓ ಸಮ್ಮಿತಿಸಿದರೆ. ಇದನ್ನು ಇನಷ್ಟು ಅಭಿವೃದ್ದಿಪಡಿಸಿ ಬೇಡಿಕೆಯಿರುವ ಬೈಕುಗಳಿಗೆ ಅಳವಡಿಸುವ ಯೋಜನೆಯನ್ನು ಪೂರ್ಣೇಶ್ ಹಾಕಿಕೊಂಡಿದ್ದಾರೆ.
Click this button or press Ctrl+G to toggle between Kannada and English