
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಯ ಯುವಕರ ತಂಡ ಸುಮಾರು ಎಂಟು ವರ್ಷಗಳಿಂದ ಪ್ರತಿ ಶನಿವಾರ ಮಕರ ಶ್ರೀ ಭಜನಾ ಮಂಡಳಿಯ ಮೂಲಕ ನಡೆಸಿಕೊಂಡು ಬರುತ್ತಿರುವ ಭಜನಾ ಸಂಕೀರ್ತನೆಯ ಚತುರ್ಥ ವರ್ಷದ ಭಜನಾ ಮಹೋತ್ಸವವು ವಿಜಯನಗರದಲ್ಲಿರುವ ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಾಗೂ ಶ್ರೀ ಆದಿಚುಂಚನಗಿರಿ ಶಾಖಾ ಮಠದ ದಿವ್ಯ ಸಾನಿಧ್ಯದಲ್ಲಿ ಶನಿವಾರ (ಅಕ್ಟೋಬರ್ 3, 2026) ಅತ್ಯಂತ ವೈಭವ ಹಾಗೂ ಭಕ್ತಿಭಾವದಿಂದ ಸಂಪನ್ನಗೊಂಡಿತು.
ಬೆಳಗಿನ ಜಾವ 8 ಗಂಟೆಯಿಂದಲೇ ಧಾರ್ಮಿಕ ವಿಧಿವಿಧಾನಗಳು ಚಾಲನೆ ಪಡೆದುಕೊಂಡವು. ವಿಘ್ನನಿವಾರಕ ಗಣಪತಿ ಪೂಜೆ, ಧನಲಕ್ಷ್ಮಿ ಪೂಜೆ ಹಾಗೂ ವಾಗ್ದೇವಿ ಸರಸ್ವತಿ ಪೂಜೆಗಳನ್ನು ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಲಾಯಿತು.
ಮಧ್ಯಾಹ್ನ 2:30ಕ್ಕೆ ಶ್ರೀ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿಯವರ ಅಮೃತ ಹಸ್ತದಿಂದ ಮಂಗಲ ದೀಪ ಪ್ರಜ್ವಲನಗೊಳಿಸುವುದರೊಂದಿಗೆ ಭಜನಾ ಸೇವೆಗೆ ಚಾಲನೆ ಸಿಕ್ಕಿತು. ಈ ಧಾರ್ಮಿಕ ಸಮ್ಮೇಳನದಲ್ಲಿ ಬಿಳಿಕಹಳ್ಳಿಯ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ, ಹೊಸಹಳ್ಳಿಯ ಮಕರಶ್ರೀ ಭಜನಾ ಮಂಡಳಿ, ಹೊಸಪೇಟೆಯ ಶ್ರೀ ರಾಮ ಭಜನಾ ಮಂಡಳಿ, ಬೆಂಗಳೂರಿನ ಭ್ರಾಮರಿ ಭಜನ್ ಮಾಲ ಹಾಗೂ ದಾಸರಹಳ್ಳಿಯ ವಿನಾಯಕ ಭಜನಾ ಮಂಡಳಿಗಳು ಪಾಲ್ಗೊಂಡು ಸುಮಧುರ ಭಜನೆಗಳ ಮೂಲಕ ಸಂಕೀರ್ತನೆ ನಡೆಸಿದವು.
ರಾತ್ರಿ 8:30ರ ಸುಮಾರಿಗೆ ಮಹಾ ಮಂಗಳಾರತಿಯೊಂದಿಗೆ ಭಜನಾ ಮಹೋತ್ಸವವು ಸಂಪೂರ್ಣಗೊಂಡಿತು. ಈ ಸುಸಂದರ್ಭದಲ್ಲಿ ಶ್ರೀ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿಯವರನ್ನು ಭಕ್ತಿಪೂರ್ವಕವಾಗಿ ಗೌರವಿಸಲಾಯಿತು. ತದನಂತರ ಸಂಸ್ಥೆಯ ಮಾಜಿ ಸಂಚಾಲಕರಾದ ಅಮೃತ್ ಕೆ. ಅವರ ಸೇವೆಯನ್ನು ಸ್ಮರಿಸಿ ಸನ್ಮಾನಿಸಲಾಯಿತು. ಹಾಗೆಯೇ ಕಾರ್ಯಕ್ರಮದಶಸ್ಸಿಗೆ ಉದಾರವಾಗಿ ನೆರವಾದ ದಾನಿಗಳನ್ನು ಸಾಂಪ್ರದಾಯಿಕವಾಗಿ ಸತ್ಕರಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಮತ್ತು ಆಭಿಮಾನಿಗಳಿಗೆ ಮಂಗಲಮಯ ಅನ್ನಸಂತರ್ಪಣೆ (ಮಹಾಪ್ರಸಾದ) ವ್ಯವಸ್ಥೆಯನ್ನು ಮಾಡಲಾಗಿತ್ತು.
ಚಿತ್ರಗಳು : ಮಹೇಶ್, ಶಾರು ಫೋಟೋಗ್ರಫಿ

ನೇರ ಪ್ರಸಾರ ವಿಡಿಯೋ : ಮೆಗಾ ಮೀಡಿಯಾ ನ್ಯೂಸ್ ಬಳಗ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









