ಮೂಡುಬಿದಿರೆ : ಮೂಡುಬಿದಿರೆಯ ಪ್ರಸಿದ್ಧ ಆಳ್ವಾಸ್ ಸಹಕಾರ ಸಂಘ ನಿಯಮಿತದ ಮುಂಬರುವ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಡಾ. ಎಂ. ಮೋಹನ್ ಆಳ್ವ ಹಾಗೂ ಉಪಾಧ್ಯಕ್ಷರಾಗಿ ಎ. ಮೋಹನ್ ಪಡಿವಾಳ್ ಅವರು ಮತ್ತೊಮ್ಮೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಯಶಸ್ವಿಯಾಗಿ ನೆರವೇರಿದ್ದು, ಹಿರಿಯ ಮುಖಂಡರಿಗೆ ಮತ್ತೆ ಜವಾಬ್ದಾರಿ ಹಸ್ತಾಂತರಿಸಲಾಗಿದೆ.
ಇದರೊಂದಿಗೆ ಸಂಘದ ನಿರ್ದೇಶಕ ಮಂಡಳಿಯ ಸದಸ್ಯರಾಗಿ ಜಯಶ್ರೀ ಎ. ಶೆಟ್ಟಿ, ಶ್ರೀಪತಿ ಭಟ್, ನಾರಾಯಣ ಪಿ.ಎಂ., ಜಯರಾಮ್ ಕೋಟ್ಯಾನ್, ವಿವೇಕ್ ಆಳ್ವ, ಪ್ರಣೀತ್ ಕುಮಾರ್, ಪ್ರಕಾಶಿನಿ ವಿ. ಹೆಗ್ಡೆ, ಡಾ. ಕುರಿಯನ್, ಎಸ್. ಸೀತಾರಾಮ ಶೆಟ್ಟಿ, ರಾಮಚಂದ್ರ ಮಿಜಾರು, ಮೊಹಮ್ಮದ್ ಷರೀಫ್, ಅಶ್ವಿನ್ ಜೊಸ್ಸಿ ಪಿರೇರಾ ಹಾಗೂ ಮೀನಾಕ್ಷಿ ಬಿ. ಅವರು ಆಯ್ಕೆಯಾಗಿದ್ದಾರೆ.
ಸಹಕಾರ ಸಂಘಗಳ ಚುನಾವಣಾ ರಿಟರ್ನಿಂಗ್ ಅಧಿಕಾರಿ ಹಾಗೂ ಚುನಾವಣಾಧಿಕಾರಿ ಎನ್.ಜೆ. ಗೋಪಾಲ್ ಅವರು ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ಮಾಹಿತಿ ನೀಡಿದೆ.
https://t.co/0q0q8B4m5o ಆಳ್ವಾಸ್ ಸಹಕಾರ ಸಂಘದ ಅಧ್ಯಕ್ಷರಾಗಿ ಡಾ. ಎಂ. ಮೋಹನ್ ಆಳ್ವ, ಉಪಾಧ್ಯಕ್ಷರಾಗಿ ಎ. ಮೋಹನ್ ಪಡಿವಾಳ್ ಪುನರಾಯ್ಕೆ #Moodbidri #AlvasCooperative #MohanAlva #MegaMediaNews #MegaMediaNewsKannada #MegaMediaTV #MegaMediaNewsLive
— Mega Media News (@megamedianews10) November 11, 2026
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









