
ಮಂಗಳೂರು : ತುಳುನಾಡಿನಲ್ಲಿ ಆಟಿ ಅಮಾವಾಸ್ಯೆ ಮಹತ್ವದ ಸ್ಥಾನವನ್ನು ಪಡೆದಿದೆ. ಆಟಿ ಆಚರಣೆ ಹೆಚ್ಚಾಗಿ ಶಿವ ಕ್ಷೇತ್ರಗಳಲ್ಲಿ ನಡೆಯುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಪುರಾಣ ಪವಿತ್ರ ಕ್ಷೇತ್ರಗಳಾದ ಶ್ರೀ ನರಹರಿ ಪರ್ವತ, ಶ್ರೀ ಕಾರಿಂಜೇಶ್ವರ ದೇವಸ್ಥಾನ, ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನ ಅಲ್ಲದೆ ಮಂಗಳೂರು, ಪುತ್ತೂರು, ಕಾಸರಗೋಡು, ಉಡುಪಿ ಜಿಲ್ಲೆಗಳಲ್ಲೂ ಆಟಿ ಅಮಾವಾಸ್ಯೆಯನ್ನು ತುಳುವರು ಆಚರಿಸಿದರು.
ಆಟಿ ಅಮಾವಾಸ್ಯೆಯನ್ನು ದೇವಸ್ಥಾನಗಳಲ್ಲಿ ಆಚರಿಸಿದಂತೆಯೇ . ಈ ತಿಂಗಳಲ್ಲಿ ತುಳುವರು ಮನೆಗಳಲ್ಲೂ ಆಚರಿಸುತ್ತಾರೆ, ಪ್ರೇತಗಳಿಗೆ ಬಡಿಸುವುದು, ಹೊಸ ಮದುಮಗಳನ್ನು ತವರಿಗೆ ಕಳುಹಿಸುವುದು, ಆಟಿ ಕಳಂಜನನ್ನು ಸ್ವಾಗತಿಸುವುದು, ವಿಶೇಷ ಖಾದ್ಯಗಳಾದ ಪತ್ರೊಡೆ, ಕಣಿಲೆ, ತೇವು ತೇಟ್ಲ, ಹದಿನಾರು ಬಗೆಯ ಕೆತ್ತೆ ಕಷಾಯ, ಅಮಾವಾಸ್ಯೆ ದಿನ ಪಾಲೇ ಮರದ ಕೆತ್ತೆ ಕಷಾಯ ಕುಡಿಯುವ ಆಚರಣೆಗಳು ನಡೆಯುತ್ತದೆ.
ಈ ತಿಂಗಳಲ್ಲಿ ಅಮವಾಸ್ಯೆಯಂದು ತೀರ್ಥಸ್ನಾನ ಮಾಡಿದರೆ, ಪುಣ್ಯಪ್ರಾಪ್ತಿ, ಸಕಲ ರೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನಲೆ ದಕ್ಷಿಣಕನ್ನಡ ಜಿಲ್ಲೆಯ ಹೆಸರಾಂತ ಶಿವಕ್ಷೇತ್ರ ನರಹರಿ ಬೆಟ್ಟದ ತುದಿಯಲ್ಲಿರುವ ಸದಾಶಿವ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ ತೀರ್ಥಸ್ನಾನ ಮಾಡುತ್ತಾರೆ.
ಆಟಿ ತಿಂಗಳಿನ ಅಮಾವಾಸ್ಯೆಯ ದಿನ ಕರಾವಳಿಯ ನಾನಾ ಶಿವ ಸನ್ನಿಧಿಗಳಲ್ಲಿರುವ ಪುಷ್ಕರಿಣಿಗಳಲ್ಲಿ ತೀರ್ಥ ಸ್ನಾನದ ಸಂಭ್ರಮ ಐತಿಹಾಸಿಕ ಹಿನ್ನೆಲೆ ಇರುವ ಮಹತೋಭಾರ ಕಾರಿಂಜ ಕಾರಿಂಜೇಶ್ವರ ದೇವಸ್ಥಾನ ಮತ್ತು ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ನಡೆಯುವ ತೀರ್ಥಸ್ನಾನಕ್ಕೆ ವಿಶೇಷ ಮನ್ನಣೆ. ಇಂದು ದಕ್ಷಿಣಕನ್ನಡ ಜಿಲ್ಲೆಯ ಹೆಸರಾಂತ ಶಿವಕ್ಷೇತ್ರ ನರಹರಿ ಬೆಟ್ಟದ ತುದಿಯಲ್ಲಿರುವ ಸದಾಶಿವ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಕ್ಷೇತ್ರದಲ್ಲಿರುವ ಶಂಖ, ಚಕ್ರ, ಗಧಾ, ಪದ್ಮ ಎನ್ನುವ ನಾಲ್ಕು ನೀರಿನ ಕುಂಡಗಳಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಹಬ್ಬಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









