ಮಂಗಳೂರು : ಸುಧೀರ್ ಅತ್ತಾವರ್ ನಿರ್ದೇಶನದಲ್ಲಿ ಬಹುಕೋಟಿ ವೆಚ್ಚದ “ಕೊರಗಜ್ಜ” ಸಿನಿಮಾವು 3D ತಂತ್ರಜ್ಙಾನದಲ್ಲಿ ಮೂಡಿಬರುತ್ತಿರುವುದು ಈಗಾಗಲೇ ತಿಳಿದಿರುವ ವಿಚಾರ. ಆದರೆ ” ಕೊರಗಜ್ಜ” ಅಥವ ನಮ್ಮ ಟ್ಯಾಗ್ ಲೈನ್ ನ ತುಣುಕು “ತನಿಯ”( ಕೊರ್ರೆ ಕೊಡ್ತಾರ್ ಕೊರಗ ತನಿಯ) ಹೆಸರನ್ನು ಬಳಸಿಕೊಂಡು, ಸಾರ್ವಜನಿಕರಲ್ಲಿ ಮತ್ತು ಶ್ರೀಮಂತ ‘ಬಿಸಿನೆಸ್ ಮ್ಯಾನ್’ ಗಳ ಬಳಿ ಹಣ ದೋಚುವ ಹುನ್ನಾರ ನಡೆಯುತ್ತಿರುವ ವಿಚಾರ ಚಿತ್ರ ತಂಡದ ಗಮನಕ್ಕೆ ಬಂದಿರುತ್ತದೆ. ಸಾರ್ವಜನಿಕರಲ್ಲಿ ಈ ಮೂಲಕೆ ತಿಳಿಯ ಪಡಿಸುವುದೇನೆಂದರೆ, ದಯವಿಟ್ಟು ಯಾರೂ ಕೂಡಾ “ಕೊರಗಜ್ಜ” ಅಥವ “ತನಿಯ” ಹೆಸರಿನ ಸಿನಿಮಾಕ್ಕಾಗಿ ಹಣ ನೀಡಬಾರದು. “ಕೊರಗಜ್ಜ” ಸಿನಿಮಾಕ್ಕಾಗಿ ಯಾರಲ್ಲೂ ಚಿತ್ರ ತಂಡ “ಧನ ಸಹಾಯ” ಕೇಳುತ್ತಿಲ್ಲ. ನಮ್ಮ ಸಿನಿಮಾದ ಹೆಸರು ಅಥವ ಟ್ಯಾಗ್ ಲೈನ್ ನ ತುಣುಕನ್ನು ಬಳಸಿಕೊಂಡು ಸಿನಿಮಾದ ಕೆಲಸಕ್ಕಾಗಿ ಸಹಾಯಧನ ಯಾಚಿಸಿ ಬಂದರೆ ದಯವಿಟ್ಟು ಅದಕ್ಕೆ ಯಾರೂ ಪ್ರೋತ್ಸಾಹ ನೀಡಬೇಡಿ ಎಂದು ಚಿತ್ರದ ಕಾರ್ಯಕಾರಿ ನಿರ್ಮಾಪಕರಾದ ವಿದ್ಯಾಧರ್ ಶೆಟ್ಟಿ ಸಾರ್ವಜನಿಕರಲ್ಲಿ ಮನವಿ ಮಾಡಿರುತ್ತಾರೆ
ನಮ್ಮ ನಿರ್ಮಾಣ ಸಂಸ್ಥೆಯಾದ ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿ ಮೂಡಿಬರುತ್ತಿರುವ “ಕೊರಗಜ್ಜ” ಸಿನಿಮಾದ ವಿಶ್ವ ದರ್ಜೆಯ ಪೊಸ್ಟ್ ಪ್ರೊಡಕ್ಷನ್ ಕೆಲಸಕ್ಕಾಗಿ ನಿರ್ಮಾಪಕ ತ್ರಿವಿಕ್ರಮ ಸಪಲ್ಯರವರು ಈಗಾಗಲೇ ಕೋಟ್ಯಾಂತರ ರುಪಾಯಿಗಳ ಬಂಡವಾಳ ಹೂಡಿರುತ್ತಾರೆ.
ಸುಮಾರು 40 ತಂತ್ರಜ್ಙರು ಚೆನ್ನೈ ಮತ್ತು ಕೊಚ್ಚಿಯಲ್ಲಿ ಚಿತ್ರದ 3ಡಿ ಟೆಕ್ನಾಲಾಜಿಗಾಗಿ ಹಗಲೂ-ರಾತ್ರಿ ಶ್ರಮಿಸುತ್ತಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಈ ಕೆಲಸ ಕೂಡಾ ಪೂರ್ತಿ ಆಗಲಿದ್ದು; “ಕೊರಗಜ್ಜ” ಸಿನಿಮಾವು ಅತ್ಯಾಧುನಿಕ ತಾಂತ್ರಿಕ ಗುಣಮಟ್ಟದೊಂದಿಗೆ ಪ್ರೇಕ್ಷಕರ ಎದುರು ರಾರಾಜಿಸಲಿದೆ..
ಆದ್ದರಿಂದ ಸಾರ್ವಜನಿಕರಲ್ಲಿ ಈ ಮೂಲಕ ತಿಳಿಯಪಡಿಸುವುದೇನೆಂದರೆ ಯಾರಾದರೂ “ಕೊರಗಜ್ಜ” ಅಥವ “ತನಿಯ”ಹೆಸರಿನ ಸಿನಿಮಾಗೆ ನಿಮ್ಮ ಬಳಿ ಹಣ ಕೇಳಿಕೊಂಡು ಬಂದರೆ , ದಯವಿಟ್ಟು ಪ್ರೋತ್ಸಾಹಿಸಬೇಡಿ.ನೀವೇನಾದರೂ ಬಂಡವಾಳ ಹೂಡಿದರೆ ಅಥವ ಹಣ ನೀಡಿದರೆ, ಅದಕ್ಕೆ “ತ್ರಿವಿಕ್ರಮ ಸಿನೆಮಾಸ್” ಆಗಲೀ “ಸಕ್ಸಸ್ ಫಿಲಂಸ್” ಆಗಲೀ ಜವಾಬ್ದಾರಿ ಅಲ್ಲ. ಸಾರ್ವಜನಿಕರು ಈ ಬಗ್ಗೆ ಎಚ್ಚರ ದಿಂದಿರಬೇಕೆಂದು ಸಿನೆಮಾದ ಕಾರ್ಯಕಾರಿ ನಿರ್ಮಾಪಕರಾದ ವಿದ್ಯಾಧರ್ ಶೆಟ್ಟಿ ಸಾರ್ವಜನಿಕರಲ್ಲಿ ಕಳ ಕಳಿಯಿಂದ ಮನವಿ ಮಾಡಿರುತ್ತಾರೆ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









