ಉಡುಪಿ : ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಮಾಡಿಯಲ್ಲಿ 27 ವರ್ಷದ ಯುವ ಮಾಡೆಲ್ ಕೃತಿ ಬಂಗೇರ ಅವರು ತಮ್ಮ ನಿವಾಸದ ಬೆಡ್ರೂಮ್ನಲ್ಲಿ ವೇಲ್ನಿಂದ ಫ್ಯಾನ್ಗೆ ನೇಣು ಬಿಗಿದುಕೊಂಡು ಅಂತಿಮ ಉಸಿರೆಳೆದಿದ್ದಾರೆ. ಮಾಡೆಲಿಂಗ್ ರಂಗದಲ್ಲಿ ಗುರುತಿಸಿಕೊಂಡಿದ್ದ ಇವರು, ಕಡಿಯಾಳಿಯ ಖಾಸಗಿ ಹೋಟೆಲೊಂದರಲ್ಲಿ ಉದ್ಯೋಗದಲ್ಲಿದ್ದು, ಕಳೆದ ಐದು ತಿಂಗಳುಗಳಿಂದ ಕೆಲಸಕ್ಕೆ ತೆರಳದೆ ತಾಯಿ ಮತ್ತು ಸಹೋದರಿಯೊಂದಿಗೆ ಕಲ್ಮಾಡಿಯ ಮನೆಯಲ್ಲೇ ನೆಲೆಸಿದ್ದರು. ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದ ಕೃತಿ, ಆಗಸ್ಟ್ 6ರ ಮಧ್ಯಾಹ್ನ ತಮ್ಮ ತಾಯಿಯನ್ನು ಮನೆಯಿಂದ ಹೊರಕಳುಹಿಸಿ ಒಳಗಿನಿಂದ ಬಾಗಿಲು ಭದ್ರಪಡಿಸಿಕೊಂಡು ಈ ದುರಂತ ನಿರ್ಧಾರ ತಳೆದಿದ್ದಾರೆ.
ಘಟನೆಯ ವಿವರ ಪ್ರಕಾರ, ತಾಯಿ ರತ್ನಾ ಅವರು ಮಲ್ಪೆಗೆ ಹಾಗೂ ಸಹೋದರಿ ಉದ್ಯೋಗ ನಿಮಿತ್ತ ಉಡುಪಿಗೆ ತೆರಳಿದ್ದರು. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ತಾಯಿ ಮನೆಗೆ ಮರಳಿದಾಗ ಕೃತಿ ಅವರನ್ನು ಹೊರಗೆ ಕಳುಹಿಸಿ ಬಾಗಿಲು ಹಾಕಿಕೊಂಡಿದ್ದರು. ಎಷ್ಟೇ ಬಾಗಿಲು ತಟ್ಟಿದರೂ ಒಳಗಿನಿಂದ ಸ್ಪಂದನೆ ಬಾರದಿದ್ದಾಗ, ಆತಂಕಗೊಂಡ ತಾಯಿ ತಮ್ಮ ಸಹೋದರ ಚಂದ್ರ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಬರಹೇಳಿದ್ದಾರೆ. ಬಳಿಕ ಬಾಗಿಲು ಒಡೆದು ಒಳಪ್ರವೇಶಿಸಿದಾಗ ಕೃತಿ ಫ್ಯಾನ್ಗೆ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಸಂಬಂಧ ಮೃತರ ಸಹೋದರಿ ನೀಡಿದ ದೂರಿನ ಮೇರೆಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










