ಉಜಿರೆ : ಸ್ಯಾಂಡಲ್ವುಡ್ ತಾರೆ, ಚಲನಚಿತ್ರ ನಟ ಯಶ್ ಅವರು ಮಂಗಳವಾರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದ ಅವರು ಅವರ ಆಶೀರ್ವಾದ ಪಡೆದುಕೊಂಡರು. ಸಿನಿಮಾ ರಂಗದಲ್ಲಿ ಯಶ್ ಅವರ ಸಾಧನೆ ಹಾಗೂ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ವೀರೇಂದ್ರ ಹೆಗ್ಗಡೆಯವರು, ಅವರು ಚಲನಚಿತ್ರ ರಂಗದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಕ್ಷೇತ್ರಕ್ಕೆ ಆಗಮಿಸಿದ ನಟ ಯಶ್ ಅವರನ್ನು ಧರ್ಮಾಧಿಕಾರಿಗಳು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಾನ್ವಿತವಾಗಿ ಸನ್ಮಾನಿಸಿದರು. ಅದಕ್ಕೂ ಮುನ್ನ ಬೀಡಿಗೆ ಆಗಮಿಸಿದ ಯಶ್ ಅವರನ್ನು ಡಿ. ಹರ್ಷೇಂದ್ರ ಕುಮಾರ್ ಅವರು ಮಾಲಾಪಣೆ ಮಾಡಿ ಆತ್ಮೀಯವಾಗಿ ಸ್ವಾಗತಿಸಿದರು.
ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದ ಬಳಿಕ, ಯಶ್ ಅವರು ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ಮಧ್ಯಾಹ್ನದ ಭೋಜನ ಸ್ವೀಕರಿಸಿ ಅಲ್ಲಿಂದ ತಮ್ಮ ಪ್ರಯಾಣ ಬೆಳೆಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









