
ತೌಡುಗೋಳಿ : ಪುರಾತನ ಶ್ರೀ ದುರ್ಗಾದೇವಿ ಕ್ಷೇತ್ರ, ಅಯ್ಯಪ್ಪ ಸ್ವಾಮಿ ಮಂದಿರ, ಪರಿವಾರ ದೈವಗಳ ಸಾನಿಧ್ಯ ಜೀರ್ಣೋದ್ದಾರಕ್ಕೆ ನಿಧಿ ಸಂಚಯನಕ್ಕೆ ಚಾಲನೆ, ಧಾರ್ಮಿಕ ಸಭೆ ಸೆಪ್ಟೆಂಬರ್ 6ರಂದು ನಡೆಯಿತು.
ಉಳ್ಳಾಲ : ಭಾರತೀಯ ಪರಂಪರೆಯ ಪಾರಮಾರ್ಥಿಕ ಬೆಳವಣಿಗೆಯ ದೃಷ್ಟಿಯಲ್ಲಿ ಜೀರ್ಣಾವಸ್ಥೆಯಲ್ಲಿದ್ದ ಕಾರಣಿಕದ ಕ್ಷೇತ್ರವೊಂದವೊಂದರ ನಿರ್ಮಾಣ ಹಿಂದೂ ಧ್ರ್ಮಕ್ಕೆ ಒಂದು ದೊಡ್ಡ ಕೊಡುಗೆ ನೀಡಿದಂತೆ ಆಗಿದೆ. ಅಯ್ಯಪ್ಪನ ತ್ಯಾಗದ ಗುಣ ಚಿಂತಿಸಿದರೆ ಚಿಂತಿಸಿದರೆ ನಮ್ಮ ಬದುಕು ಪಾವನವಾದಂತೆ. ಹಾಗೆಯೇ ಕ್ಷೇತ್ರ ನಿರ್ಮಾಣಕ್ಕೆ ನಿಧಿ ಸಂಚಯನದಲ್ಲಿ ಲಕ್ಷ್ಮಿ ಹರಿದು ಬರಲಿದ್ದಾಳೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಧಾರ್ಮಿಕ ಸಭೆಯ ಆಶೀರ್ವಚನದಲ್ಲಿ ಹೇಳಿದರು.
ಶ್ರೀ ದುರ್ಗಾದೇವಿ ಕ್ಷೇತ್ರ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಹಾಗೂ ಪರಿವಾರದೈವಗಳ ಸಾನಿಧ್ಯದಲ್ಲಿ ಪುನಃ ನವೀಕರಣ ಸಲುವಾಗಿ ವರ್ಕಾಡಿ ಹೊಸಮನೆ ಶ್ರೀ ರಾಜೇಶ್ ತಾಳಿತ್ತಾಯರವರ ಪೌರೋಹಿತ್ಯದಲ್ಲಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಲುವಾಗಿ ಪಾದುಕಾನ್ಯಾಸ, ಶ್ರೀ ಮಹಾಗಣಪತಿ ಹೋಮ ನಡೆದ ಬಳಿಕ ನಿಧಿ ಸಂಚಯನಕ್ಕೆ ಚಾಲನೆ ನೀಡಿ ಧಾರ್ಮಿಕ ಸಭೆಯಲ್ಲಿ ಅವರು ನುಡಿದರು.
ಶ್ರೀ ಕ್ಷೇತ್ರ ಪುನರ್ ನಿರ್ಮಾಣ ಸಮಿತಿ ಗೌರವಾಧ್ಯಕ್ಷ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ ಮನುಷ್ಯ ತನ್ನ ಬದುಕಿನಲ್ಲಿ ಸಂಪಾದಿಸಿದ ಸಂಪತ್ತಿನಲ್ಲಿ ಮಂದಿರ ನಿರ್ಮಾಣದ ಜೊತೆಯಲ್ಲಿ ಬಡವರ ಸೇವೆಯನ್ನು ಮಾಡಬೇಕು ಎಂದು ಹೇಳಿದರು.
ಕ್ಷೇತ್ರ ನಿರ್ಮಾಣದ ಕೆಲಸ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯಾವುದೇ ಒಳ್ಳೆಯ ಕೆಲಸ ಮಾಡುವಾಗ ಸೇರಿಕೊಳ್ಳುವುದು ಜವಾಬ್ದಾರಿ. ನಾವೆಲ್ಲಾ ಒಂದೇ ತಾಯಿಯ ಮಕ್ಕಳಂತೆ ಸೇರಿ ಕೆಲಸ ಮಾಡಿದಲ್ಲಿ ಕ್ಷೇತ್ರದ ಜೀರ್ಣೋದ್ದಾರದ ಕೆಲಸಗಳು ಅತೀ ಶೀಘ್ರದಲ್ಲಿ ನೆರವೇರುವುದರಲ್ಲಿ ಎರಡು ಮಾತಿಲ್ಲ ಎಂದು ಶ್ರೀ ಕ್ಷೇತ್ರ ತೌಡುಗೋಳಿ ಇದರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.
ಕಾರ್ಯಕ್ರಮದಲ್ಲಿ ತಂತ್ರಿಗಳಾದ ವರ್ಕಾಡಿ ಹೊಸಮನೆ ಶ್ರೀ ರಾಜೇಶ್ ತಾಳಿತ್ತಾಯ, ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಗೋವಿಂದ ಗುರುಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿ, ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಮಂಜಪ್ಪ ಕಾರ್ನವರ್, ಶ್ರೀ ಕ್ಷೇತ್ರ ಶಾಂತಿಪಳಿಕೆ ಆಡಳಿತ ಮೊಕ್ತೇಸರ ಪ್ರಸನ್ನ ಫಕ್ಕಳ ಬಲೆತ್ತೋಡು, ಶಾಂತಿಪಳಿಕೆ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಆಳ್ವರಬೆಟ್ಟು, ಧಾರ್ಮಿಕ ಮುಖಂಡ ಕೆ. ಟಿ. ಸುವರ್ಣ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ಉದ್ಯಮಿ ಮನೋಜ್ ಶೆಟ್ಟಿ ನೀರೋಳಿಕೆ, ಧಾರ್ಮಿಕ ಮುಖಂಡರುಗಳಾದ ಪ್ರಭಾಕರ್ ರೈ ಕಲ್ಪನೆ, ಜಿಲ್ಲಾ ಕಂಬಳ ಸಮಿತಿ ಉಪಾಧ್ಯಕ್ಷ ಗಿರೀಶ್ ಆಳ್ವ ಮೋರ್ಲ, ನೆತ್ತಿಲಪದವು ಶ್ರೀ ಕೃಷ್ಣ ಮಂದಿರದ ಅಧ್ಯಕ್ಷ ಪ್ರೇಮಾನಂದ ರೈ ನೆತ್ತಿಲಕೋಡಿ, ಬಾಲಕೃಷ್ಣ ಶೆಟ್ಟಿ ಪಾವುಲ, ದೇರಳಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಪುರುಷೋತ್ತಮ ಅಂಚನ್, ಜೀರ್ಣೋದ್ದಾರ ಸಮಿತಿ ಸಂಚಾಲಕ ಪುರುಷೋತ್ತಮ ಚೆಂಡ್ಲಾ, ಉದ್ಯಮಿ ನಂದರಾಜ್ ಪಿಜಿನಬೈಲ್, ಮಹಾಮ್ಮಯ ಕ್ಷೇತ್ರದ ಅರ್ಚಕ ಸುರೇಶ್ ಶೆಟ್ಟಿಗಾರ್, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವರಾಜ್ ತೌಡುಗೋಳಿ, ಲೆಕ್ಕಪರಿಶೋಧಕರಾದ ಜಿತೇಶ್ ಶೆಟ್ಟಿ ಪೂಂಜರಮನೆ, ರಮೇಶ್ ಮೋರ್ಲ, ಕಾರ್ಯಾಧ್ಯಕ್ಷ ಮಾಧವ ಶೆಟ್ಟಿ ಬಡಾಜೆ, ಉಪಾಧ್ಯಕ್ಷರಾದ ಕಿಶೋರ್ ನಾಯ್ಕ್ ವರ್ಕಾಡಿ, ಸಂಘಟನಾ ಕಾರ್ಯದರ್ಶಿಗಳಾದ ಆನಂದ ಎಸ್ ಸೇರಿದಂತೆ ಪ್ರಮುಖರು, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅಧ್ಯಕ್ಷತೆ ವಹಿಸಿ ಪ್ರಾಥಮಿಕ ಮಾತುಗಳನ್ನಾಡಿದರು. ಸಮಿತಿ ಕೋಶಾಧಿಕಾರಿ ಶಿವಪ್ರಸಾದ್ ತೌಡುಗೋಳಿ ಸ್ವಾಗತಿಸಿದರು. ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ ಹಾಗೂ ರಂಗ ಕಲಾವಿದ ರವಿ ವರ್ಕಾಡಿ ಕಾರ್ಯಕ್ರಮ ನಿರೂಪಿಸಿದರು.



ವಿಡಿಯೋ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









