ಉಳ್ಳಾಲ : ಪ್ರಸಿದ್ಧ ಮಾಡೂರು ಶ್ರೀ ಪಾಡಾಂಗರ ಭಗವತೀ ಕ್ಷೇತ್ರದಲ್ಲಿ ನಾಗರ ಪಂಚಮಿಯ ಧಾರ್ಮಿಕ ಕಾರ್ಯಕ್ರಮಗಳು ಸೋಮವಾರ ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ನೆರವೇರಿದವು. ಬ್ರಹ್ಮಶ್ರೀ ಉಚ್ಚಿಲತ್ತಾಯ ತಂತ್ರಿಗಳ ಪಾವನ ಸಾನ್ನಿಧ್ಯ ಹಾಗೂ ನೇತೃತ್ವದಲ್ಲಿ ವಿವಿಧ ವೈದಿಕ ಪೂಜಾ ವಿಧಿವಿಧಾನಗಳು ಸಾಂಗವಾಗಿ ಜರುಗಿದವು.
ಬೆಳಗಿನ ಜಾವದಿಂದಲೇ ಆಗಮಿಸಿದ ತೀಯಾ ಸಮಾಜದ ಬಂಗೇರ ತರವಾಡಿನ ಕುಟುಂಬಸ್ಥರು ಮತ್ತು ಅಪಾರ ಸಂಖ್ಯೆಯ ಭಕ್ತಾದಿಗಳು ನಾಗದೇವರಿಗೆ ಹಾಲು, ಎಳೆನೀರು (ಸಿಯಾಳ) ಹಾಗೂ ಪುಷ್ಪಗಳನ್ನು ಅರ್ಪಿಸಿ ತನು ತರ್ಪಣ ಸೇವೆ ಸಲ್ಲಿಸಿದರು. ಇದರೊಂದಿಗೆ ನಾಗತಂಬಿಲ, ವಿಶೇಷ ಪಂಚಮಿ ಪೂಜೆ ಹಾಗೂ ಪಂಚಾಮೃತ ಅಭಿಷೇಕ ಸೇವೆಗಳು ಶ್ರದ್ಧಾಪೂರ್ವಕವಾಗಿ ನಡೆದವು.
ಇದೇ ಶುಭ ದಿನದಂದು ಸಿಂಹ ಸಂಕ್ರಮಣ (ಸೋಣ) ಪೂಜೆ, ಸಂಕ್ರಮಣದ ವಿಶೇಷ ಪೂಜೆ ಹಾಗೂ ಮಧ್ಯಾಹ್ನದ ನಿತ್ಯಪೂಜೆಯು ನೆರವೇರಿತು. ಬಳಿಕ ಶ್ರೀ ನಾಗದೇವರ ಸನ್ನಿಧಿಯಲ್ಲಿ ಅದ್ಧೂರಿ ಮಹಾಪೂಜೆ ನೆರವೇರಿ ಭಕ್ತರ ಕಣ್ಣುತುಂಬಿಸಿತು. ಪೂಜಾ ಕೈಂಕರ್ಯಗಳ ನಂತರ ಆಗಮಿಸಿದ್ದ ಸರ್ವ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆ ಮಾಡಲಾಯಿತು.
ವಿಡಿಯೋ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









