ಮಂಗಳೂರು : ಮಂಗಳೂರಿನ ಹಳೆಯ ಮೀನುಗಾರಿಕಾ ಬಂದರಿನಲ್ಲಿ (ಧಕ್ಕೆ) ಬೃಹತ್ ಗಾತ್ರದ ‘ಮುಡಾವು’ ಮೀನೊಂದು ಪ್ರತ್ಯಕ್ಷಗೊಂಡು ಸಾರ್ವಜನಿಕರ ಹಾಗೂ ಮೀನುಗಾರರ ವಿಶೇಷ ಗಮನ ಸೆಳೆದಿದೆ. ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದಾಗ ಬಲೆಗೆ ಬಿದ್ದಿದ್ದ ಈ ಅಪರೂಪದ ದೈತ್ಯ ಮೀನನ್ನು ಬಂದರಿಗೆ ತರಲಾಗಿತ್ತು.
ಸಾಮಾನ್ಯವಾಗಿ ದೊರೆಯುವ ಮುಡಾವು ಮೀನುಗಳಿಗಿಂತ ಅತ್ಯಂತ ಭಿನ್ನ ಹಾಗೂ ದೊಡ್ಡದಾಗಿದ್ದ ಈ ಮೀನು ಬರೋಬ್ಬರಿ 17 ಕಿಲೋ ತೂಕವಿತ್ತು. ಬಂದರಿಗೆ ಮೀನು ತರುತ್ತಿದ್ದಂತೆ ಅದನ್ನು ಹತ್ತಿರದಿಂದ ವೀಕ್ಷಿಸಲು ಮತ್ತು ಛಾಯಾಚಿತ್ರ ತೆಗೆಯಲು ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರು ಕುತೂಹಲದಿಂದ ಜಮಾಯಿಸಿದ್ದರು.
ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 500 ರೂಪಾಯಿಯಂತೆ ಹರಾಜಾದ ಈ ದೈತ್ಯ ಮುಡಾವು ಮೀನು ಒಟ್ಟು 8,500 ರೂಪಾಯಿಗೆ ಮಾರಾಟವಾಗಿದೆ. ದಕ್ಕೆಯಲ್ಲಿ ಕೆಲಕಾಲ ಕುತೂಹಲದ ವಾತಾವರಣ ಸೃಷ್ಟಿಸಿದ್ದ ಈ ಅಪರೂಪದ ಗಾತ್ರದ ಮೀನು ಬಲೆಗೆ ಬಿದ್ದಿರುವುದು ಮೀನುಗಾರರಲ್ಲೂ ಅಚ್ಚರಿ ಮೂಡಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









