ಉಪ್ಪಿನಂಗಡಿ: ಪೆರ್ನೆಯ ಕಡಂಬು ನಿವಾಸಿಯೊಬ್ಬರ ಹಟ್ಟಿಯಿಂದ ದನವನ್ನು ಕದ್ದುಕೊಂಡು ಹೋಗಿ ಅವರ ತೋಟದಲ್ಲೇ ಅದನ್ನು ಕೊಂದು ಅದರ ಕರುಳು ಸಹಿತ ತ್ಯಾಜ್ಯವನ್ನು ಅಲ್ಲೇ ಬಿಸಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಉಳ್ಳಾಲ ಚೆಂಬುಗುಡ್ಡೆ ನಿವಾಸಿ ಇರ್ಷಾದ್ (34), ಮಂಗಳೂರು ಕುದ್ರೋಳಿ ನಿವಾಸಿ ಮಹಮ್ಮದ್ ಮನ್ಸೂರ್ (48), ಮಂಗಳೂರು ಕಣ್ಣೂರು ನಿವಾಸಿ ಅಬ್ದುಲ್ ಅಝೀಮ್ (18) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಪೆರ್ನೆಯ ಕಡಂಬು ನಿವಾಸಿ ದೇಜಪ್ಪ ಮೂಲ್ಯರ ಹಟ್ಟಿಯಿಂದ ಅವರು ಸೆ.4ರಂದು ನಸುಕಿನ ವೇಳೆ ದನವನ್ನು ಕದ್ದು, ಅದನ್ನು ಕೊಂದು ಅದರ ತ್ಯಾಜ್ಯವನ್ನು ಹೊರತೆಗೆದು, ಅದನ್ನು ಅಲ್ಲೇ ಎಸೆದು ಹೋಗಿರುವುದಾಗಿ ದೂರಲಾಗಿತ್ತು. ದುಷ್ಕರ್ಮಿಗಳ ಇಂತಹ ಹೀನ ಕೃತ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









