ಮಂಗಳೂರು : ಮಂಗಳೂರು ನಗರ ಪಾಲಿಕೆಯ 57 ಮತ್ತು 59 ವಾರ್ಡಿನ ರಸ್ತೆಯಲ್ಲಿ ಕಳೆದ ಐದು ದಿನಗಳಿಂದ ರಸ್ತೆಯಲ್ಲೇ ಡ್ರೈನೇಜ್ ತ್ಯಾಜ್ಯಗಳು ಹರಿದು ಹೋಗುತ್ತಿದ್ದು ವಾಹನ ಸವಾರರು ಮತ್ತು ಸಮೀಪದ ಮನೆಗಳಿಗೆ ಕೆಟ್ಟ ವಾಸನೆಯಿಂದ ವಾಸಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಮೃತ ಯೋಜನೆಯಡಿಯಲ್ಲಿ 2019 ರಲ್ಲಿ ಆರಂಭಗೊಂಡ ಡ್ರೈನೇಜ್ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ಇಲ್ಲಿ ನಿರ್ಮಾಣ ಗೊಳ್ಳುತ್ತಿರುವ ಕಟ್ಟಡಗಳು ಮಂಗಳೂರು ನಗರ ಪಾಲಿಕೆಯ ಕಂಪ್ಲೀಷನ್ ಸರ್ಟಿಫಿಕೇಟುಗಳಿಗೆ ಮಾತ್ರ ಎಸ್ ಟಿ ಪಿ ಮಾಡುತ್ತಿದ್ದು ಆ ಬಳಿಕ ಅದನ್ನು ಪಾಲಿಸುತ್ತಿಲ್ಲ ಎಂದು ಸ್ಥಳೀಯ ಕಾರ್ಪೊರೇಟರ್ ಹೇಳುತ್ತಾರೆ.

ಕುಡುಪಾಡಿಯಲ್ಲಿ ರಸ್ತೆಯಲ್ಲಿ ವಾಹನ ಸಂಚಾರವಂತೂ ಬಹಳ ಕಷ್ಟಕರ, ಮಳೆಯಿಂದ ಹಾಗು ಇತರ ಕಾಮಗಾರಿಗಳಿಂದ ದೊಡ್ಡ ಕಂದಕಗಳು ನಿರ್ಮಾಣವಾಗಿದೆ. ರಸ್ತೆ ಕಿರಿದಾಗಿರುವುದರಿಂದ ಎರಡು ವಾಹನಗಳು ಸಂಚಾರಕ್ಕೆ ಸ್ಥಳಾವಕಾಶಗಳು ಕಡಿಮೆ ಇರುವುದರಿಂದ ವಾಹನ ಸಂಚಾರಕ್ಕೆ ಪ್ರತಿ ದಿನ ತಡೆಯುಂಟಾಗುವುದು ಇಲ್ಲಿನ ನಿತ್ಯದ ಸಮಸ್ಯೆ.
ಮಂಗಳೂರು ನಗರ ಪಾಲಿಕೆಯಲ್ಲಿ ಈಗ ಆಡಳಿತ ಇಲ್ಲದೆ ಇರುವುದರಿಂದ ಸ್ಥಳೀಯ ಜೆಇ ಅಥವಾ ಜಿಲ್ಲಾಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೆ ಇರುವುದರಿಂದ ಜನಸಾಮಾನ್ಯರು ಮತ್ತು ವಾಹನ ಸವಾರರು ಕಷ್ಟ ಪಡುವಂತಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









