ಬಂಟ್ವಾಳ : ಸಿನೆಮಾ ನಟಿ ರಾಧಿಕಾಕುಮಾರ ಸ್ವಾಮಿ ಅವರು ಬಿಸಿರೋಡಿನ ಆಡಳಿತ ಸೌಧದ ಕಚೇರಿಯ ಎರಡನೇ ಅಂತಸ್ತಿನಲ್ಲಿರುವ ಉಪನೋಂದಾವಣೆ ಕಚೇರಿಗೆ ಶುಕ್ರವಾರ ಆಗಮಿಸಿದಾಗ ಸಾರ್ವಜನಿಕರು ಸೆಲ್ಫೀ ತೆಗಿಸಿಕೊಂಡರು.
ತಾಯಿ ಜೊತೆ ಬಂದಿದ್ದ ಇವರಿಗೆ ನೊಂದಾವಣೆ ಕಚೇರಿಯಲ್ಲಿ ತನ್ನ ಕೆಲಸ ಮುಗಿಸಿಕೊಂಡು ಮತ್ತೆ ವಾಪಸಾಗಿದ್ದಾರೆ.
ರಾಧಿಕಾ ಅವರು ಈ ಹಿಂದೆ ಖರೀದಿ ಮಾಡಿರುವ ಜಮೀನಿನ ಮೇಲೆ ತೆಗೆದಿದ್ದ ಅಡಮಾನವನ್ನು (ಸಾಲ) ತೀರುವಳಿ ರಶೀದಿ ಮಾಡಲು ಬಂದಿದ್ದಾರೆ ಎಂದು ಉಪನೊಂದಾವಣೆ ಕಚೇರಿ ಅಧಿಕಾರಿಗಳು ಹೇಳಿದ್ದಾರೆ.
ಈ ವೇಳೆ ಕಚೇರಿ ಸಿಬ್ಬಂದಿಗಳ ಸಹಿತ ಕಚೇರಿಗೆ ಬಂದಿದ್ದ ಸಾರ್ವಜನಿಕರು ರಾಧಿಕಾಕುಮಾರ ಸ್ವಾಮಿ ಅವರ ಜೊತೆ ಸೆಲ್ಫೀ ಫೊಟೋಗಳನ್ನು ತೆಗೆಸಿಕೊಂಡರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









