ದುಬೈ: ಯುಎಇಯ ಹೆಸರಾಂತ ಉದ್ಯಮಿ, ಎನ್ಎಂಸಿ ಹೆಲ್ತ್ಕೇರ್ ಗ್ರೂಪ್ನ ಸಂಸ್ಥಾಪಕ ಬಿ.ಆರ್. ಶೆಟ್ಟಿ ಅವರಿಗೆ ದುಬೈ ಇಂಟರ್ನ್ಯಾಷನಲ್ ಫೈನಾನ್ಸಿಯಲ್ ಸೆಂಟರ್ (DIFC) ನ್ಯಾಯಾಲಯದಿಂದ ದೊಡ್ಡ ಹಿನ್ನಡೆಯಾಗಿದೆ. 50 ಮಿಲಿಯನ್ ಡಾಲರ್ (ಸುಮಾರು ₹408.5 ಕೋಟಿ) ಸಾಲದ ಮೊತ್ತವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ (SBI) ಪಾವತಿಸುವಂತೆ ನ್ಯಾಯಾಲಯ ಆದೇಶ ನೀಡಿದೆ.
ಏನಿದು ಪ್ರಕರಣ?
2018ರ ಡಿಸೆಂಬರ್ನಲ್ಲಿ ಎಸ್ಬಿಐ ನೀಡಿದ್ದ 50 ಮಿಲಿಯನ್ ಡಾಲರ್ ಸಾಲಕ್ಕೆ ಬಿ.ಆರ್. ಶೆಟ್ಟಿ ಅವರು ವೈಯಕ್ತಿಕ ಗ್ಯಾರಂಟಿಗೆ ಸಹಿ ಹಾಕಿದ್ದರು.
ಆದರೆ, ನ್ಯಾಯಾಲಯದ ವಿಚಾರಣೆ ವೇಳೆ ಶೆಟ್ಟಿ ಅವರು “ಸಹಿ ನಕಲಿಯಾಗಿದೆ, ನಾನು ಗ್ಯಾರಂಟಿ ನೀಡಿಲ್ಲ” ಎಂದು ವಾದಿಸಿದ್ದರು.
ನ್ಯಾಯಾಲಯವು ಸಾಕ್ಷ್ಯಗಳನ್ನು (ಫೋಟೋಗಳು, ಇಮೇಲ್ಗಳು ಮತ್ತು ಸಾಕ್ಷಿಗಳ ಹೇಳಿಕೆ) ಪರಿಶೀಲಿಸಿ, ಶೆಟ್ಟಿ ಅವರ ಹೇಳಿಕೆ ಸುಳ್ಳು ಎಂದು ತೀರ್ಮಾನಿಸಿತು.
ನ್ಯಾಯಾಧೀಶ ಆಂಡ್ರೂ ಮೋರಾನ್ ಅವರು ಶೆಟ್ಟಿ ನೀಡಿದ ಸಾಕ್ಷ್ಯವನ್ನು ‘ಅವಿಶ್ವಾಸಾರ್ಹ ಸುಳ್ಳುಗಳ ಸರಮಾಲೆ ಮತ್ತು ಅಸಂಬದ್ಧ’ ಎಂದು ತೀಕ್ಷ್ಣವಾಗಿ ಟೀಕಿಸಿದ್ದಾರೆ.
ಸಾಲಕ್ಕೆ ವೈಯಕ್ತಿಕವಾಗಿ ಶೆಟ್ಟಿಯವರೇ ಹೊಣೆಗಾರರು ಎಂದು ತೀರ್ಮಾನಿಸಿದ ನ್ಯಾಯಾಲಯ, ಸಾಲದ ಮೊತ್ತ ₹408.5 ಕೋಟಿ ಪಾವತಿಸುವಂತೆ ಅಕ್ಟೋಬರ್ 8 ರಂದು ಆದೇಶ ನೀಡಿದೆ.
ಈ ತೀರ್ಪು ಒಂದು ಕಾಲದಲ್ಲಿ ಯುಎಇಯಲ್ಲೇ ಅತಿ ಹೆಚ್ಚು ಯಶಸ್ಸು ಕಂಡ ಭಾರತೀಯ ಉದ್ಯಮಿಯ ವಿರುದ್ಧ ಬಂದ ಮತ್ತೊಂದು ಮಹತ್ವದ ತೀರ್ಪು ಆಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ವಿದೇಶ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









