ತಿರುವಾಂಕೂರು : ಕೇರಳದ ಸುಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ವಾರ್ಷಿಕ ಮಂಡಲ ಯಾತ್ರೆಯು ಸೋಮವಾರದಿಂದ ವಿಧ್ಯುಕ್ತವಾಗಿ ಪ್ರಾರಂಭಗೊಂಡಿದೆ. ಭಾನುವಾರ ಸಂಜೆಯೇ ದೇಗುಲದ ಬಾಗಿಲು ತೆರೆಯಲಾಗಿದ್ದು, ಅಲ್ಲಿಂದ 41 ದಿನಗಳ ಕಾಲ ನಡೆಯಲಿರುವ ಈ ಮಂಡಲ ಯಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಈ ಅವಧಿಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಅಯ್ಯಪ್ಪನ ದರ್ಶನ ಪಡೆಯಲಿದ್ದಾರೆ.
ಮೊದಲ ದಿನವೇ ಭಾರೀ ಭಕ್ತರ ದಂಡು
ಮಂಡಲ ಋತುವಿನ ಆರಂಭದ ದಿನವಾದ ಸೋಮವಾರವೇ ಶಬರಿಮಲೆಯಲ್ಲಿ ಭಕ್ತರ ದಂಡು ಹರಿದುಬಂದಿದೆ. ಮೊದಲ ದಿನವೇ ಬರೋಬ್ಬರಿ 1.36 ಲಕ್ಷ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಈ ದಿನ ಪ್ರಧಾನ ಆರ್ಚಕರ ನೇತೃತ್ವದಲ್ಲಿ ಎಲ್ಲ ಸಕಲ ಧಾರ್ಮಿಕ ವಿಧಿವಿಧಾನಗಳು ಯಶಸ್ವಿಯಾಗಿ ನೆರವೇರಿದವು.
ಚಿನ್ನಲೇಪಿತ ಕವಚಗಳ ಕಳವು ಪ್ರಕರಣದ ತನಿಖೆ
ಯಾತ್ರೆಯ ಪ್ರಾರಂಭದ ದಿನವೇ, ದೇಗುಲದ ಆಡಳಿತ ಮಂಡಳಿ ಒಂದು ಮಹತ್ವದ ಕಾರ್ಯಕ್ಕೆ ಕೈಹಾಕಿತು. ದ್ವಾರಪಾಲಕ ವಿಗ್ರಹಗಳ ಚಿನ್ನಲೇಪಿತ ಕವಚಗಳ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡದ (SIT) ಅಧಿಕಾರಿಗಳು ವೈಜ್ಞಾನಿಕ ಪರೀಕ್ಷೆಗಾಗಿ ಕವಚಗಳನ್ನು ಕಳಚಿದರು.
ಸೋಮವಾರ ಮಧ್ಯಾಹ್ನ 1.15ಕ್ಕೆ ತಿರುವಾಂಕೂರು ದೇವಸ್ವಂ ಮಂಡಳಿಯ (TDB) ಅಧಿಕಾರಿಗಳ ಸಮ್ಮುಖದಲ್ಲಿ ಕವಚಗಳನ್ನು ಕಳಚುವ ಕಾರ್ಯ ಪ್ರಾರಂಭವಾಯಿತು.
ಮೂರು ಗಂಟೆಗಳ ಕಾಲ ಈ ಪ್ರಕ್ರಿಯೆ ಮುಂದುವರಿಯಿತು. ಆ ಬಳಿಕ ಕವಚಗಳನ್ನು ಪ್ರತ್ಯೇಕ ಕೋಣೆಗೆ ಸ್ಥಳಾಂತರಿಸಿ ತೂಕ ಮಾಡಲಾಯಿತು.
ಅಂತಿಮವಾಗಿ, ಕಳವು ಪ್ರಕರಣದ ವಿಧಿವಿಜ್ಞಾನ ಪರೀಕ್ಷೆಗಾಗಿ ಕವಚಗಳ ಮಾದರಿಗಳನ್ನು ಸಂಗ್ರಹಿಸಿ ಕಳುಹಿಸಲಾಯಿತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









