ಕೃಷ್ಣಾಪುರ, ಸುರತ್ಕಲ್ ಮತ್ತು ಕಾಟಿಪಳ್ಳ ಪರಿಸರದಲ್ಲಿ ಬಿ.ಎಂ.ಆರ್ ಗೋಲ್ಡ್ ‘ಲಕ್ಕಿ ಸ್ಕೀಂ’ (Lucky Scheme) ಹೆಸರಿನಲ್ಲಿ ಹಣ ಹೂಡಿಕೆ ಮಾಡುವ ವಂಚನೆಯ ಹಾವಳಿ ಮಿತಿಮೀರಿದೆ. ಈ ಹಿಂದೆ ಹಲವು ಕಂಪನಿಗಳು ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಕಚೇರಿ ಮುಚ್ಚಿರುವ ನಿದರ್ಶನಗಳು ಇವೆ.
ಈಗ, ಇದೇ ಸ್ಕೀಂ ನಡೆಸುತ್ತಿದ್ದ ಮತ್ತೊಂದು ಹೊಸ ಕಂಪನಿಯ ವಿರುದ್ಧವೂ ಗ್ರಾಹಕರು ಪ್ರತಿಭಟನೆ ನಡೆಸಿದ್ದಾರೆ. ಈ ಕಂಪನಿಯು ಪ್ರತೀ ತಿಂಗಳು ಗ್ರಾಹಕರಿಂದ ಸಾವಿರಾರು ರೂಪಾಯಿ ಕಂತುಗಳನ್ನು ಸಂಗ್ರಹಿಸಿ, ಭರವಸೆ ನೀಡಿದ ಆಫರ್ ಅಥವಾ ಸ್ಕೀಂ ಪ್ರಯೋಜನಗಳನ್ನು ನೀಡುತ್ತಿಲ್ಲ. ಮಾತ್ರವಲ್ಲದೆ, ಹಣವನ್ನು ಹಿಂದಿರುಗಿಸಲು ಕೂಡ ವಿಳಂಬ ಮಾಡುತ್ತಿದೆ.
ಮಾಲೀಕರು ಹಿಂದೆ ಹಣ ವಾಪಸ್ ನೀಡುವುದಾಗಿ ಭರವಸೆ ನೀಡಿದ್ದರೂ, ಈ ಭರವಸೆ ಈಡೇರದ ಕಾರಣ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿ ಕೈ ಸುಟ್ಟುಕೊಂಡಿರುವ ಗ್ರಾಹಕರು ಗುರುವಾರ ಬೆಳಗ್ಗೆ ಕೃಷ್ಣಾಪುರದಲ್ಲಿರುವ ಕಂಪನಿಯ ಕಚೇರಿಗೆ ಮುತ್ತಿಗೆ ಹಾಕಿ ದಾಂಧಲೆ ಎಸಗಿದರು.
ಘಟನೆಯ ಹಿನ್ನೆಲೆಯಲ್ಲಿ, ವಿಷಯ ತಿಳಿದ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು ಮತ್ತು ಕಂಪನಿಯ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಅಪರಾಧ, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









