ಮಂಗಳೂರು : ಜೈ ಭಾರತೀ ತರುಣ ವೃಂದ (ರಿ.) ಉರ್ವ, ಹೊಯ್ಗೆ ಬೈಲು ಇದರ ವಜ್ರ ಮಹೋತ್ಸವ ಕಾರ್ಯಕ್ರಮ ಡಿಸೆಂಬರ್ 28, 2025 ಭಾನುವಾರ ಉರ್ವ ಗ್ರೌಂಡ್ ನಲ್ಲಿಅದ್ದೂರಿಯಾಗಿ ನಡೆಯಿತು.
ಮಂಗಳೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ.) ಇದರ ಗೌರವಸಲಹೆ ಗಾರರಾದ ಪುರುಷೋತ್ತಮ ಪೂಜಾರಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜೈ ಭಾರತೀ ತರುಣ ವೃಂದ ಅನೇಕ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ನಮ್ಮ ಜಿಲ್ಲೆಗೆ ಹೆಮ್ಮೆ ತಂದಂತಹ ಸಂಸ್ಥೆ ಎಂದು ಪುರುಷೋತ್ತಮ ಪೂಜಾರಿ ಹೇಳಿದರು.
ಬಿಜೆಪಿ ಯುವಮೋರ್ಚ ದ.ಕ. ಜಿಲ್ಲೆ ಜಿಲ್ಲಾಧ್ಯಕ್ಷರಾದ ಉಲ್ಲಾಳ ನಂದನ್ ಮಲ್ಯ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ ರೈ, ನಮ್ಮ ಕುಡ್ಲನಿರ್ದೇಶಕರಾದ ಲೀಲಾಕ್ಷ ಬಿ ಕರ್ಕೇರ, ಆಶಾ ಇನ್ಫ್ರಾ ಡೆವಲಪರ್ಸ್ ಆಂಡ್ ಪರ್ಲ್ ಪ್ರಾಪರ್ಟೀಸ್, ಮಂಗಳೂರು ಇದರ ಮಾಲಕರಾದ ಬಾಬಾ ಅಲಂಕಾರ್, ಬಿಲ್ಲವ ಸಂಘ (ರಿ.) ಉರ್ವ-ಅಶೋಕನಗರ ಇದರ ಅಧ್ಯಕ್ಷರಾದ ಬಿ ಹರಿಪ್ರಸಾದ್, ಬಂಟರ ಸಂಘ ಅಶೋಕನಗರ ಉರ್ವ ಇದರ ಅಧ್ಯಕ್ಷರಾದ
ರವಿಚಂದ್ರ ಶೆಟ್ಟಿ ಅಶೋಕನಗರ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾದ ಶ್ರೀಮತಿ ನಾಗವೇಣಿ ದೇವದಾಸ್, ಹೋಟೆಲ್ ಉದ್ಯಮಿ ಸುಧಾಕರ್ ಆಳ್ವ, ಜೈ ಭಾರತೀ ತರುಣ ವೃಂದದ ಅಧ್ಯಕ್ಷರಾದ ವಿಕ್ರಂ, ಶ್ರೀ ಗೌರವ ಅಧ್ಯಕ್ಷರಾದ ಕೇಶವ ಕರ್ಕೇರ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಸದಸ್ಯ ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್ ಸ್ವಾಗತಿಸಿದರು ಚೇತನ್ ಕುಮಾರ್ ಧನ್ಯವಾದ ಸಮರ್ಪಿಸಿದರು.
ಬಳಿಕ ಸುಧೀರ್ ಉಳ್ಳಾಲ ನೇತೃತ್ವದ ಸಿಟಿ ಗ್ರೇಸ್ ಕುಡ್ಲ ಕ್ವೀನ್ಸ್ ನೃತ್ಯ ತಂಡದಿಂದ ಅಮೋಘ ನೃತ್ಯ ಕಾರ್ಯಕ್ರಮ, ಅಶೋಕ್ ಪೊಳಲಿಯವರ ಕೋಳಿ ನೃತ್ಯ ಮತ್ತು ಶ್ರೀ ಶಿರಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿಶಕ್ತಿ ಕಲಾಬಳಗ, ಉರ್ವ ಚಿಲಿಂಬಿ, ಇವರಿಂದ ಅದ್ದೂರಿ ತುಳು ಪೌರಾಣಿಕ ನಾಟಕ: “ಜೋಡು ಜೀಟಿಗೆ” ನಡೆಯಿತು.
ಜೈ ಭಾರತಿ ತರುಣ ವೃಂದದ ಉಪಾಧ್ಯಕ್ಷರಾದ ಸತೀಶ್ ಪೂಜಾರಿ, ಅಶೋಕನಗರ, ಜೊತೆ ಕಾರ್ಯದರ್ಶಿ ಲತೀಶ್ ಜಿ. ದೇವಾಡಿಗ, ಕೋಶಾಧಿಕಾರಿ ಸುನಿಲ್ ದೇವಾಡಿಗ, ಕ್ರೀಡಾ ಕಾರ್ಯದರ್ಶಿತ್ರಿಶಾಂತ್ ಅಮೀನ್, ಜೊತೆ ಕ್ರೀಡಾ ಕಾರ್ಯದರ್ಶಿ ತಿಲಕ್ರಾಜ್ ದೇವಾಡಿಗ, ಸಮಿತಿ ಸದಸ್ಯರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ವಿಡಿಯೋ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, Uncategorized, ಟಾಪ್ ಸುದ್ದಿ, ಸುದ್ದಿಗಳು









