ಬಂಟ್ವಾಳ : ತಾಲೂಕಿನ ನೇರಳಕಟ್ಟೆ ಎಂಬಲ್ಲಿ ಶಾಲಾ ಮಕ್ಕಳಿದ್ದ ಬಸ್ ಒಂದನ್ನು ಅಡ್ಡಗಟ್ಟಿ, ಚಾಲಕ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಈ ಬಸ್ ಕಲ್ಲಡ್ಕ ಪ್ರಭಾಕರ್ ಭಟ್ ಅವರ ನೇತೃತ್ವದ ಪ್ರತಿಷ್ಠಿತ ಶ್ರೀರಾಮ ವಿದ್ಯಾಕೇಂದ್ರಕ್ಕೆ ಸೇರಿದ್ದಾಗಿದ್ದು, ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಈ ಅಹಿತಕರ ಘಟನೆ ಸಂಭವಿಸಿದೆ.
ವರದಿಗಳ ಪ್ರಕಾರ, ಶಾಲಾ ಬಸ್ ಚಾಲನೆ ಮಾಡುತ್ತಿದ್ದ ವೇಳೆ ಸ್ಕೂಟರ್ ಒಂದಕ್ಕೆ ಡಿಕ್ಕಿಯಾಗುವ ಸಂಭವವಿತ್ತು ಎನ್ನಲಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡ ಸ್ಥಳೀಯ ಗುಂಪೊಂದು ಬಸ್ಸನ್ನು ನಡುರಸ್ತೆಯಲ್ಲೇ ತಡೆದಿದೆ. ಬಸ್ಸಿನ ಒಳಗೆ ಶಾಲಾ ಮಕ್ಕಳಿದ್ದಾರೆ ಎಂಬ ಕನಿಷ್ಠ ಕಾಳಜಿಯೂ ಇಲ್ಲದೆ, ಗುಂಪು ಚಾಲಕನ ವಿರುದ್ಧ ವಾಗ್ವಾದಕ್ಕಿಳಿದು ಗಲಾಟೆ ಮಾಡಿದೆ.
ಬಸ್ ಅಡ್ಡಗಟ್ಟಿದ ಗುಂಪು ಚಾಲಕ ಹಾಗೂ ಬಸ್ ಸಿಬ್ಬಂದಿಗೆ ಏಕವಚನದಲ್ಲಿ ನಿಂದಿಸಿ, ಅವಾಜ್ ಹಾಕಿದ್ದಾರೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸಿಬ್ಬಂದಿ ಸಮಾಧಾನಪಡಿಸಲು ಯತ್ನಿಸಿದರೂ, ಗುಂಪು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕೆಲ ಕಾಲ ರಸ್ತೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಬಳಿಕ ಬಸ್ಸನ್ನು ಅಲ್ಲಿಂದ ಹೋಗಲು ಬಿಡಲಾಗಿದೆ. ಘಟನೆಯಿಂದಾಗಿ ಬಸ್ಸಿನಲ್ಲಿದ್ದ ಶಾಲಾ ಮಕ್ಕಳು ಕೆಲಕಾಲ ಆತಂಕಕ್ಕೊಳಗಾಗಿದ್ದರು.
ಚಾಲಕನಿಗೆ ಅವಾಜ್ ಹಾಕಿದ ವಿಡಿಯೋ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









