ಮಂಗಳೂರು : ಮಂಗಳೂರಿನ ನರಿಂಗಾನದಲ್ಲಿ ಶನಿವಾರ ಜರುಗಿದ 4ನೇ ವರ್ಷದ “ಲವ-ಕುಶ ಕಂಬಳೋತ್ಸವ” ಕರಾವಳಿಯ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರು, ಯಕ್ಷಗಾನ, ದೈವಾರಾಧನೆ ಮತ್ತು ನಾಗಾರಾಧನೆಯಂತೆ ಕಂಬಳವು ಕರಾವಳಿ ಕರ್ನಾಟಕದ ಅಸ್ಮಿತೆಯ ಅವಿಭಾಜ್ಯ ಅಂಗವಾಗಿದೆ ಎಂದರು. ಕಂಬಳ ಕೇವಲ ಜಾನಪದ ಕ್ರೀಡೆಯಲ್ಲ, ಇದು ಶಿಸ್ತು ಮತ್ತು ನಂಬಿಕೆಗಳೊಂದಿಗೆ ಬೆರೆತ ಸುದೀರ್ಘ ಇತಿಹಾಸವಿರುವ ವಿಶಿಷ್ಟ ಪರಂಪರೆಯಾಗಿದೆ ಎಂದು ಅವರು ಬಣ್ಣಿಸಿದರು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಕಂಬಳದ ಹಿಂದೆ ಕೃಷಿ ಸಂಸ್ಕೃತಿ ಮತ್ತು ಧಾರ್ಮಿಕ ಭಾವನೆಗಳ ಬೆಸುಗೆಯಿದೆ ಎಂದು ತಿಳಿಸಿದರು. ತುಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಇಂತಹ ಕ್ರೀಡೋತ್ಸವಗಳು ಪೂರಕವಾಗಿದ್ದು, ತುಳುನಾಡಿನ ಸಂಪ್ರದಾಯಗಳಿಗೆ ಹೆಚ್ಚಿನ ಮಾನ್ಯತೆ ಸಿಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು. ಹಿರಿಯ ವಿಶ್ಲೇಷಕ ಗುಣಪಾಲ್ ಕಡಂಬ ಅವರು ಮಾತನಾಡಿ, ಕಂಬಳವು ಜಾತಿ-ಮತದ ಭೇದವಿಲ್ಲದೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಯನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟರು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಿ, ಕಂಬಳವನ್ನು ದೇಶದ ಮಹತ್ವದ ಸಾಂಸ್ಕೃತಿಕ ಅಸ್ತಿ ಎಂದು ಶ್ಲಾಘಿಸಿದರು. ವಿಧಾನಸಭಾಧ್ಯಕ್ಷ ಹಾಗೂ ನರಿಂಗಾನ ಕಂಬಳ ಸಮಿತಿ ಅಧ್ಯಕ್ಷ ಯು.ಟಿ. ಖಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ಎಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವು ಗಣ್ಯರು ಹಾಗೂ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದು, ಕರಾವಳಿಯ ಈ ವೀರ ಕ್ರೀಡೆಗೆ ಬೆಂಬಲ ಸೂಚಿಸಿದರು.
ವಿಡಿಯೋ ಲೈವ್ 3
ವಿಡಿಯೋ ಲೈವ್ 2
ವಿಡಿಯೋ ಲೈವ್ 1
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಕಂಬಳ, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು









