
ಮಂಗಳೂರು : ತೌಡುಗೋಳಿ ಶ್ರೀ ದುರ್ಗಾದೇವಿ ಕ್ಷೇತ್ರ, ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಹಾಗೂ ಪರಿವಾರದೈವಗಳ ಸಾನಿಧ್ಯ ಇಲ್ಲಿ ತಾ. 05.02.2026ನೇ ಗುರುವಾರ ಬೆಳಿಗ್ಗೆ ಗಂಟೆ 7.45ಕ್ಕೆ. ತೌಡುಗೋಳಿ ಶ್ರೀ ದುರ್ಗಾದೇವಿ ಕ್ಷೇತ್ರದ ಶಿಲಾನ್ಯಾಸ ಮಾಣಿಲ ಕ್ಷೇತ್ರದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಮತ್ತು ಆಶೀರ್ವಚನದೊಂದಿಗೆ ನೆರವೇರಿತು.
ಕ್ಷೇತ್ರದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಮಾಣಿಲ ಶ್ರೀ ಗಳು ಹಿಂದೂ ಸಮಾಜದ ಶ್ರದ್ಧಾ ಕೇಂದ್ರಗಳನ್ನು ಉಳಿಸಿ ಬೆಳೆಸುವ ಕಾಲಘಟ್ಟದಲ್ಲಿ ನಾವಿರುವಾಗ ತೌಡುಗೋಳಿಯಲ್ಲಿ ನಡೆಯುತ್ತಿರುವಂತಹ ಈ ಕ್ಷೇತ್ರದ ಜೀರ್ಣೋದ್ದಾರ ಮಹತ್ವ ಪಡೆದಿದೆ. ಪ್ರತಿಯೊಬ್ಬರೂ ಈ ಪುಣ್ಯಕಾರ್ಯದಲ್ಲಿ ಕೈ ಜೋಡಿಸಿ ಯಶಸ್ವೀ ಗೊಳಿಸಲು ಕರೆ ನೀಡಿದರು.
ಉದ್ಯಾವರ ಮಾಡ ಅರಸು ಮಂಜಿಷ್ಣಾರ್ ದೈವದ ಅಣ್ಣ ದೈವದ ಪಾತ್ರಿ ರಾಜ ಬೆಳ್ಚಪ್ಪಾಡರು ಮಾತನಾಡಿ ಈ ಕ್ಷೇತ್ರದ ಜೀರ್ಣೋದ್ದಾರ ಕೆಲಸಗಳು ಸಾಂಗವಾಗಿ ನೆರವೇರಿ ಬ್ರಹ್ಮಕಳಶ ನೋಡುವ ಭಾಗ್ಯ ನಮಗೆಲ್ಲರಿಗೂ ಆದಷ್ಟು ಬೇಗ ಸಿಗಲಿ ಎಂದು ಹಾರೈಸಿದರು.
ಈ ಸಂಧರ್ಭದಲ್ಲಿ ಶ್ರೀ ಕ್ಷೇತ್ರದ ಜೀರ್ಣೋದ್ದಾರದ ನಿಧಿ ಸಂಚಯದ ಕೂಪನ್ ಗಳನ್ನು ಮಾಣಿಲ ಶ್ರೀ ಗಳು ದಾನಿಗಳಿಗೆ ನೀಡಿ ಬಿಡುಗಡೆ ಮಾಡಿದರು.
ಧಾರ್ಮಿಕ ಸಭೆಯ ವೇದಿಕೆಯಲ್ಲಿ ಕ್ಷೇತ್ರದ ಅನುವಂಶೀಯ ಮೊಕ್ತೇಸರ, ಗೋವಿಂದ ಗುರುಸ್ವಾಮಿ, ವರ್ಕಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದೇವಪ್ಪ ಶೆಟ್ಟಿ ಚಾವಡಿ ಬೈಲು, ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ಪ್ರೇಮಾನಂದ ರೈ ನೆತ್ತಿಲ, ಶ್ರೀ ಮಿತ್ತಮೊಗರಾಯ ದೈವಸ್ಥಾನದ ಮೊಕ್ತೇಸರರಾದ ಪಸನ್ನ ಪಕ್ಕಳ, ಸಮಾಜ ಸೇವಕ ಹರೀಶ್ ಕನ್ನಿಗುಳಿ, ದೈವ ಪರಿಚಾರಕ ಶಾಂತ ಶೆಟ್ಟಿ, ತಾಲೀಮು ಮಾಸ್ಟರ್ ಮಾಧವ ಶೆಟ್ಟಿ ಬಡಾಜೆ, ನೃತ್ಯ ಶಿಕ್ಷಕ ಆರ್. ಬಿ. ಉದ್ಯಾವರ, ಯಕ್ಷಗಾನ ಭಾಗವತ ಆನಂದ ಸರ್ಕುಡೇಲ್, ಕಟ್ಟಡ ನಿರ್ಮಾಣ ಮೇಲ್ವಿಚಾರಕ ದಿನೇಶ್ ಕೊಂದಲಕುಮೇರ್ ಮೊದಲಾದವರು ಉಪಸ್ಥಿತರಿದ್ದರು.
ಶಿವಪ್ರಸಾದ್ ತೌಡುಗೋಳಿ ಸ್ವಾಗತಿಸಿ, ವಂದನಾರ್ಪಣೆ ಗೈದರು, ಶಿವರಾಜ್ ತೌಡುಗೋಳಿ, ಸಮಿತಿಯ ಸದಸ್ಯರು ಸಹಕರಿಸಿದರು.
ವಿಡಿಯೋ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









