
ಉಳ್ಳಾಲ: ತೌಡುಗೋಳಿ ಶ್ರೀ ದುರ್ಗಾದೇವಿ ಕ್ಷೇತ್ರ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಕ್ಷೇತ್ರದ ಸಹಯೋಗದೊಂದಿಗೆ ತೌಡುಗೋಳಿ ಶ್ರೀ ದುರ್ಗಾಬಾಲಗೋಕುಲ, ಶ್ರೀ ದುರ್ಗಾಂಜನೇಯ ವ್ಯಯಾಮ ಶಾಲೆ, ಶ್ರೀ ದುರ್ಗಾ ನಾಟ್ಯಾಲದ ವತಿಯಿಂದ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಜೂನ್ 7 ರ ಆದಿತ್ಯವಾರ ನಡೆಯಿತು.
ಪುಸ್ತಕ ವಿತರಣೆ ಮಾಡಿ ಮಾತನಾಡಿದ ಶ್ರೀ ಲಕ್ಷ್ಮಿ ನಾರಾಯಣ ಹೊಳ್ಳ ಮರಿಕಾಪು ಬಾಲಗೋಕುಲದಲ್ಲಿ ಕಲಿತ ಪಾಠ ನೀವು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಏರಿದರು ನೆನಪಿನಲ್ಲಿ ಇಡುವಂತಹ ಘಟನೆಯಾಗಬೇಕು. ನಿಮಗೆ ಉಚಿತವಾಗಿ ಸಿಕ್ಕಿದ ಪುಸ್ತಕ ನಿಮ್ಮ ವಿದ್ಯಾಭಾಸಕ್ಕೆ ಸ್ಪೂರ್ತಿಯಾಗಬೇಕು ಎಂದು ಹೇಳಿದರು.
ದೇವಪ್ಪ ಶೆಟ್ಟಿ ಚಾವಡಿ ಬೈಲು, ಮಾಧವಶೆಟ್ಟಿ ಬಡಾಜೆ, ಹರೀಶ್ ಇರಾ, ಶಮಿತ್ ಭಂಡಾರಿ ಕಪಣಮೊಗರುಗುತ್ತು, ಕಿಶೋರ್ ನಾಯ್ಕ್ ವಾರ್ಕಾಡಿ ಮಕ್ಕಳಿಗೆ ಶುಭ ಹಾರೈಸಿದರು.
ಕ್ಷೇತ್ರದ ಅನುವಂಶಿಕ ಮೊಕ್ತೇಸರರಾದ ಶ್ರೀ ಗೋವಿಂದ ಗುರುಸ್ವಾಮಿ, ಶಿಕ್ಷಕಿಯರಾದ ಪ್ರತಿಬಾ, ಲಲಿತ, ಸುಹಾಸಿನಿ, ನಂದಿನಿ ಹಾಗೂ ಸಮಿತಿಯ ಸದಸ್ಯರಾದ ಜಿತೇಶ್ ಶೆಟ್ಟಿ ಪೂಂಜಾರ ಮನೆ, ರಮೇಶ್ ಮೋರ್ಲ , ಆನಂದ ಬೆಲ್ಚಡ ನಿರೋಳಿಕೆ, ಸತೀಶ್ ಮಲಿ, ಗಂಗಾಧರ ಶಾಂತಿಪಲಿಕೆ, ಚಿತ್ರ ಮುಡೂರು ಇನ್ನಿತರರು ಉಪಸ್ಥಿತರಿದ್ದರು.
ಶಿವಪ್ರಸಾದ ತೌಡುಗೋಳಿ ಸ್ವಾಗತಿಸಿದರು. ಶಿವರಾಜ್ ತೌಡುಗೋಳಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









