ಮಂಗಳೂರು : ಪಾಲ್ಗುಣ ಮಾಸದ ಹುಣ್ಣಿಮೆಯ ದಿನವಾದ ಮಾರ್ಚ್ 3ರಂದು ಬಾನಂಗಳದಲ್ಲಿ ಕೇತುಗ್ರಸ್ತ ರಕ್ತಚಂದ್ರಗ್ರಹಣ ಸಂಭವಿಸಲಿದ್ದು, ಭಾರತದಾದ್ಯಂತ ಈ ವಿಸ್ಮಯ ಗೋಚರವಾಗಲಿದೆ. ಅಂದು ಮಧ್ಯಾಹ್ನ 3:20ಕ್ಕೆ ಗ್ರಹಣ ಆರಂಭವಾಗಿ ಸಂಜೆ 6:47ಕ್ಕೆ ಮುಕ್ತಾಯವಾಗಲಿದ್ದು, ಕರ್ನಾಟಕದಲ್ಲಿಯೂ ಸುಮಾರು 25 ನಿಮಿಷಗಳ ಕಾಲ ಈ ಕೆಂಬಣ್ಣದ ಚಂದಿರನ ದರ್ಶನ ಪಡೆಯಬಹುದಾಗಿದೆ. ಹೋಳಿ ಹಬ್ಬದ ಸಂಭ್ರಮದ ನಡುವೆಯೇ ಸಂಭವಿಸುತ್ತಿರುವ ಈ ಗ್ರಹಣವು ಖಗೋಳ ಆಸಕ್ತರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ ಗ್ರಹಣದ ಸಮಯವನ್ನು ಸೂತಕ ಕಾಲವೆಂದು ಪರಿಗಣಿಸಲಾಗುವುದರಿಂದ, ಈ ಅವಧಿಯಲ್ಲಿ ಮದುವೆ, ಗೃಹಪ್ರವೇಶ ಅಥವಾ ಹೊಸ ವೃತ್ತಿಜೀವನ ಆರಂಭದಂತಹ ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೆ. ಗ್ರಹಣದ ಸಮಯದಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಮಾಡಬಾರದು ಹಾಗೂ ಗರ್ಭಿಣಿಯರು ಮನೆಯಿಂದ ಹೊರಗೆ ಓಡಾಡಬಾರದು ಎಂಬ ನಿಯಮಗಳಿವೆ. ಗ್ರಹಣದ ಮುನ್ನ ಮತ್ತು ನಂತರ ಸ್ನಾನ ಮಾಡಿ ಮನೆಯನ್ನು ಶುದ್ಧೀಕರಿಸುವುದು ಹಾಗೂ ಆಹಾರ ಪದಾರ್ಥಗಳ ಮೇಲೆ ದರ್ಬೆ ಅಥವಾ ತುಳಸಿ ದಳಗಳನ್ನು ಹಾಕಿಡುವುದು ಶ್ರೇಯಸ್ಕರ ಎಂದು ಹೇಳಲಾಗಿದೆ.
ಗ್ರಹಣದ ಅವಧಿಯಲ್ಲಿ ದೈವಿಕ ಚಿಂತನೆಗೆ ಪ್ರಾಧಾನ್ಯತೆ ನೀಡಲಾಗಿದ್ದು, ಈ ಸಮಯದಲ್ಲಿ ಧ್ಯಾನ, ಭಜನೆ ಮತ್ತು ಮಹಾಮೃತ್ಯುಂಜಯ ಮಂತ್ರ ಪಠಿಸುವುದು ಉತ್ತಮ ಫಲ ನೀಡುತ್ತದೆ ಎಂಬ ನಂಬಿಕೆಯಿದೆ. ದೇವರ ವಿಗ್ರಹಗಳ ಮೇಲೆ ಗಂಗಾಜಲ ಸಿಂಪಡಿಸಿ ದರ್ಬೆಯ ಬಂಧನದಲ್ಲಿಡುವುದು ಹಾಗೂ ಗ್ರಹಣ ಮುಕ್ತಾಯದ ನಂತರ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ. ಪ್ರಕೃತಿಯ ಈ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಲು ಜನಸಾಮಾನ್ಯರು ಸಜ್ಜಾಗುತ್ತಿದ್ದಾರೆ..
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು, ಹೊಸ ಸುದ್ದಿಗಳು









