ಮಂಗಳೂರು : ಅತ್ತಾವರದ ಎನ್. ಜಿ. ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಲಾದ ಗರ್ಭಗೃಹದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ದುರ್ಗಾದೇವಿಯರ ಪ್ರತಿಷ್ಠಾಪನಾ ಬ್ರಹ್ಮಕಲಶಾಭಿಷೇಕ ಮಹೋತ್ಸವವು ಏಪ್ರಿಲ್ 23ರ ಗುರುವಾರ ಅದ್ದೂರಿಯಾಗಿ ನೆರವೇರಲಿದೆ. ಏಪ್ರಿಲ್ 19ರ ಆದಿತ್ಯವಾರ ಹಸಿರುವಾಣಿ-ಹೊರೆಕಾಣಿಕೆ ಮೆರವಣಿಗೆಯೊಂದಿಗೆ ಚಾಲನೆ ಪಡೆದ ಈ ಉತ್ಸವವು, ಏಪ್ರಿಲ್ 20ರಿಂದ 23ರವರೆಗೆ ಸತತವಾಗಿ ವಿವಿಧ ಧಾರ್ಮಿಕ ಸತ್ಕರ್ಮಗಳು ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಜರುಗಲಿದೆ. ಪಂದಳ ರಾಜವಂಶಸ್ಥರಾದ ತಿರುವನಂತಪುರದ ಶ್ರೀ ನಾರಾಯಣ ವರ್ಮ ತಂಬುರಾನ್ ಅವರ ಘನ ಉಪಸ್ಥಿತಿಯಲ್ಲಿ ಹಾಗೂ ವೇದಮೂರ್ತಿ ಬ್ರಹ್ಮಶ್ರೀ ಕುಡುಪು ಕೃಷ್ಣರಾಜ ತಂತ್ರಿಗಳ ಪೌರೋಹಿತ್ಯದಲ್ಲಿ ಈ ಪವಿತ್ರ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.
ಮುಖ್ಯ ದಿನವಾದ ಗುರುವಾರ ಮುಂಜಾನೆ ಪ್ರಾತಃ ಫಾ. 6.00ರಿಂದ: ಪ್ರಾಸಾದ ಪ್ರತಿಷ್ಠೆ, ಶಿಖರ ಕಲಶ ಪ್ರತಿಷ್ಠೆ, ರತ್ನನ್ಯಾಸ ಪೀಠ ಪ್ರತಿಷ್ಠೆ. ಪೂರ್ವಾಹ್ನ ಫಾ. 7.30ರಿಂದ 9.30ರ ಸಮಯ ನಡೆಯಲಿರುವ ವೃಷಭ ಲಗ್ನ ಸುಮುಹೂರ್ತದಲ್ಲಿ, ಶ್ರೀ ಅಯ್ಯಪ್ಪ ಸ್ವಾಮಿಯ ಪ್ರತಿಷ್ಠಾಪನೆ, ಅಷ್ಟಬಂಧ ಸ್ಥಾಪನೆ, ಜೀವ ಕುಂಭಾಭಿಷೇಕ, ಪ್ರಾಣ ಪ್ರತಿಷ್ಠಾಪನೆ, ಶ್ರೀ ಗಣಪತಿ, ಶ್ರೀ ಸುಬ್ರಹ್ಮಣ್ಯ, ಶ್ರೀ ದುರ್ಗಾದೇವಿ ದೇವರುಗಳ ಪ್ರತಿಷ್ಠಾಪನೆ, ಕಲಶಾಭಿಷೇಕ, ಪ್ರಸನ್ನ ಪೂಜೆ. ನಂತರ 9.30ರಿಂದ 10.30ರ ವೇಳೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಬ್ರಹ್ಮ ಕುಂಭಾಭಿಷೇಕ, ಪರಿಕಲಶಾಭಿಷೇಕ, ಪ್ರಸನ್ನ ಪೂಜೆ. ಮಧ್ಯಾಹ್ನ 12.00 ವೇಳೆಗೆ: ಮಹಾಪೂಜೆ, ಪಲ್ಲಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ 11.30ರ ವೇಳೆಗೆ ದೀಪ ಪ್ರಜ್ವಲನೆ ಶ್ರೀ ವೈದ್ಯನಾಥ ಕ್ಷೇತ್ರ ವೇದಿಕೆಯಲ್ಲಿ ಶ್ರೀ ಪವನ್ ಕುಮಾರ್ (ಶಿವ ಡೆಕೋರ್ಸ್ , ಮಂಗಳೂರು), ಶ್ರೀ ಲೋಕೇಶ್ ಸುವರ್ಣ ಕುದ್ರೋಳಿ (ಅಧ್ಯಕ್ಷರು, ಮಂಗಳೂರು ಏಳು ಪಟ್ನ ಮೊಗವೀರ ಸಂಯುಕ್ತ ಸಭಾ), ಶ್ರೀ ಲಕ್ಷ್ಮಣ್ ಅಮೀನ್ ಕೋಡಿಕಲ್ (ಮೊಕ್ತೇಸರರು, ಶ್ರೀ ಮಾರಿಯಮ್ಮ ದೇವಸ್ಥಾನ, ಉರ್ವ), ಶ್ರೀ ಬಿ ದಾಮೋದರ್ ಚೆಟ್ಟಿಯಾರ್ ಉರ್ವಾ (ಪ್ರತಿಕ್ಷಕರು, ಬಾಲ ಸಂಸ್ಕಾರ ಕೇಂದ್ರ, ಉರ್ವಾ), ಶ್ರೀ ಅಕ್ಷಿತ್ ಅತ್ತಾವರ (ಸಂಘಟನಾ ಕಾರ್ಯದರ್ಶಿ, ಶ್ರೀ ಅಯ್ಯಪ್ಪ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ) ಇವರಿಂದ ನಡೆಯಲಿದೆ.
ಭಜನಾ ಸಂಕೀರ್ತನೆ : 11.45ರಿಂದ 1.00ರವರೆಗೆ : ಶ್ರೀ ಅಯ್ಯಪ್ಪ ದೇವಸ್ಥಾನ, ಪಡೀಲ್, ಕಣ್ಣೂರು. 1.00ರಿಂದ 1.45ರವರೆಗೆ : ಕಲಾ ಸಾರಥಿ ತೋನ್ಸೆ ಪುಷ್ಕಳ್ ಕುಮಾರ್ ರಾಗ ಸಂಯೋಜನೆಯಲ್ಲಿ ಡಾ| ಮಾಲತಿ ಶೆಟ್ಟಿ ಮಾಣೂರು ನೇತೃತ್ವದಲ್ಲಿ ಕವಿ ಕಾವ್ಯ ಗಾಯನ. ಮಧ್ಯಾಹ್ನ 12.30ರಿಂದ : ಅನ್ನ ಪ್ರಸಾದ ವಿತರಣೆ.
ಸಂಜೆ 5.00ರ ವೇಳೆಗೆ : ದೀಪ ಪ್ರಜ್ವಲನೆ : ಶ್ರೀ ಎಂ. ಗಣೇಶ್ ಶೆಟ್ಟಿ (ಮಾಲಕರು, ಹೋಟೆಲ್ ಫುಡ್ಲ್ಯಾಂಡ್), ಶ್ರೀ ಲಕ್ಷ್ಮೀಶ ಉಪಾಧ್ಯಾಯ (ಪ್ರಧಾನ ಅರ್ಚಕರು, ಶ್ರೀ ಉಮಾ ಮಹೇಶ್ವರ ಕ್ಷೇತ್ರ ಅತ್ತಾವರ), ಶ್ರೀ ನೀಲೇಶ್ ಡಿ ಕಾಮತ್ (ಮಾರುತಿ ಗ್ರೈಂಡರ್ಸ್, ಮಂಗಳೂರು), ಶ್ರೀ ಅರವಿಂದ ಭಟ್ (ಅಪೂರ್ವ ಜೆರಾಕ್ಸ್, ಮಂಗಳೂರು), ಶ್ರೀ ಉಮೇಶ್ ರಾವ್ ಕುಂಬ್ಳೆ (ಉಪಾಧ್ಯಕ್ಷರು, ಶ್ರೀ ಅಯ್ಯಪ್ಪ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ) ನಡೆಸಲಿರುವರು,
ಭಜನಾ ಸಂಕೀರ್ತನೆ : 5.15 ರಿಂದ 6.00ರವರೆಗೆ : ಕದ್ರಿ ಗೋಪಾಲಕೃಷ್ಣ ಮಠ ಭಜನಾ ಮಂಡಳಿ, ಕದ್ರಿಕಂಬಳ ಇವರು ನಡೆಸಲಿರುವರು.
ಸಂಜೆ 7.00ರಿಂದ ಸಭಾ ಕಾರ್ಯಕ್ರಮ ನಡೆಯಲಿರುವುದು, ದಿವ್ಯ ಉಪಸ್ಥಿತಿ : ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು (ಶ್ರೀ ನಿತ್ಯಾನಂದ ಆಶ್ರಮ, ಕೊಂಡೆವೂರು ಮಠ, ಉಪ್ಪಳ), ವೇದಮೂರ್ತಿ ಬ್ರಹ್ಮಶ್ರೀ ಕುಡುಪು ಕೃಷ್ಣರಾಜ ತಂತ್ರಿಗಳು, ಶ್ರೀ ಅನಂತ ಪದ್ಮನಾಭ ಅಸ್ರಣ್ಣ (ಅನುವಂಶಿಕ ಅರ್ಚಕರು, ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ).
ಅಧ್ಯಕ್ಷತೆ : ಶ್ರೀ ಡಿ ವೇದವ್ಯಾಸ ಕಾಮತ್ (ಶಾಸಕರು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ), ಮುಖ್ಯ ಅತಿಥಿಗಳು : ಶ್ರೀ ಅರೂರು ಕಿಶೋರ್ ರಾವ್ (ಅರವಿಂದ ಮೋಟಾರ್ಸ್, ಮಂಗಳೂರು), ಡಾ| ಎಂ ಎನ್ ರಾಜೇಂದ್ರ ಕುಮಾರ್ (ಅಧ್ಯಕ್ಷರು, ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ), ಶ್ರೀ ವಿಜಯರಾಘವೇಂದ್ರ (ಜನಪ್ರಿಯ ಕನ್ನಡ ಚಲನಚಿತ್ರ ನಟ), ಶ್ರೀ ಕರುಣಾಕರ್ (ಮಾಲಕರು, ಕರುಣಾ ಇನ್ಫ್ರಾ ಪ್ರಾಪರ್ಟೀಸ್, ಮಂಗಳೂರು), ಶ್ರೀ ಎಂ ಸುಧಾಕರ್ ಶೆಟ್ಟಿ (ಮುಗ್ಗಿ ಕಾನ್ಸ್ಟ್ರಕ್ಷನ್ಸ್, ಕಾವೂರು), ಶ್ರೀ ರತೀಂದ್ರನಾಥ್ ಹೆಚ್ (ಗೌರವಾಧ್ಯಕ್ಷರು, ಶ್ರೀ ಚಿತ್ತಪ್ರಾಣ ಸೇವಾ ಸಮಿತಿ, ಅತ್ತಾವರ), ಶ್ರೀ ಅಗರಿ ರಾಘವೇಂದ್ರ ಎಸ್. ಭಟ್ (ಅಗರಿ ಎಂಟರ್ಪ್ರೈಸಸ್, ಸುರತ್ಕಲ್/ಯೆಯ್ಯಾಡಿ/ಮೂಡಬಿದ್ರೆ), ಶ್ರೀ ವಿನಯ ಭಟ್ ಪಿ. ಜೆ. (ಪ್ರಧಾನ ವ್ಯವಸ್ಥಾಪಕರು, ಕರ್ನಾಟಕ ಬ್ಯಾಂಕ್), ಶ್ರೀ ಲೀಲಾಕ್ಷ ಬಿ. ಕರ್ಕೇರ (ನಿರ್ದೇಶಕರು, ನಮ್ಮ ಕುಡ್ಲ, ಮಂಗಳೂರು), ಶ್ರೀ ರಾಜೇಶ್ ಕಾರಂತ ಕುಂದಾಪುರ (ಮಾಲಕರು, ಗೋಪಾಲಕೃಷ್ಣ ಕಾನ್ಸ್ಟ್ರಕ್ಷನ್ಸ್, ಕುಂದಾಪುರ), ಶ್ರೀ ಜಯಶೀಲ ಶೆಟ್ಟಿ ಬೈಂದೂರು (ಮಾಲಕರು, ಜೆ.ಎನ್.ಎಸ್. ಇನ್ಫ್ರಾ ಪ್ರೈ. ಲಿಮಿಟೆಡ್), ಶ್ರೀ ದಿವಾಕರ್ ಪಾಂಡೇಶ್ವರ (ಪೂರ್ವ ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆ) ಭಾಗವಹಿಸುವರು.
ಸನ್ಮಾನಿತರು : ಶ್ರೀ ಗೋಕುಲ್ದಾಸ್ (ಸೂಪರಿಂಟೆಂಡಿಂಗ್ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಮಂಗಳೂರು), ಶ್ರೀ ಮುರಳೀಧರ್ (ಪಾಂಚಜನ್ಯ, ಕೊಟ್ಟಾರ), ಶ್ರೀ ಸಂತೋಷ್ ಶೆಟ್ಟಿ (ಆರ್ಕಿಟೆಕ್ಟ್, ಮಂಗಳೂರು), ಶ್ರೀ ಸೂರಜ್ ರಾಘವನ್ (ಅಧ್ಯಕ್ಷರು, ಅಯ್ಯಪ್ಪ ಭಕ್ತ ಸಮಿತಿ, ಅತ್ತಾವರ)
ಸಂಜೆ 6.15ರಿಂದ : ಕುಮಾರಿ ನಿನಾದ ಅತ್ತಾವರ ಮತ್ತು ತಂಡದವರಿಂದ ಭಕ್ತಿ ಗೀತೆ ಮತ್ತು ರಸಮಂಜರಿ, ಸಂಜೆ 8.00ರಿಂದ : ಅನ್ನಪ್ರಸಾದ, ರಾತ್ರಿ 9.00ರಿಂದ : ನಾಟ್ಯಕಲಾರತ್ನ, ವಿದ್ವಾನ್ ಶ್ರೀ ಸುರೇಶ್ ಅತ್ತಾವರ ಇವರ ನೇತೃತ್ವದಲ್ಲಿ ಶ್ರೀ ಚಕ್ರಪಾಣಿ ನೃತ್ಯ ಕಲಾಕೇಂದ್ರ ಇವರಿಂದ ಮಣಿಕಂಠ ಜನನ (ನೃತ್ಯರೂಪಕ) ನಡೆಯಲಿದೆ .
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









