ಬಂಟ್ವಾಳ : ಸುಮಾರು 400 ವರ್ಷಗಳ ಇತಿಹಾಸವಿರುವ ಕಾರಣಿಕ ಕ್ಷೇತ್ರವಾದ ಮುತ್ತೂರು ನಟ್ಟಿಲ ಪಂಜುರ್ಲಿ ಮತ್ತು ಪರಿವಾರ ದೈವಗಳ ಜೀರ್ಣೋದ್ಧಾರ ಕಾರ್ಯ ಸುಮಾರು 75 ಲಕ್ಷ ವೆಚ್ಚದಲ್ಲಿ ಪೂರ್ಣಗೊಂಡು, ಪ್ರತಿಷ್ಠಾ ಕಲಶಾಭಿಷೇಕ ಮತ್ತು ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಉಳಿಪ್ಪಾಡಿಗುತ್ತುವಿಗೆ ಸಂಬಂಧ ಪಟ್ಟ ಮುತ್ತೂರಿನ ಮನೆಯವರು ಹಾಗೂ ಮುತ್ತೂರು ಗ್ರಾಮಸ್ಥರು ಆರಾಧಿಸಿಕೊಂಡು ಬಂದಿರುವ ಕ್ಷೇತ್ರವಾಗಿದ್ದು, ರಾಜನ್ ದೈವಗಳಿಗೆ ನೇಮ ಕಟ್ಟುವ ಪಂಬದ ಸಮಾಜಕ್ಕೂ ಈ ಕ್ಷೇತ್ರಕ್ಕೂ ಸಂಬಂಧವಿದೆ.
ಪಕೃತಿಯ ರಮಣೀಯ ಸೌಂದರ್ಯದ ಮತ್ತು ಪಲ್ಗುಣಿ ನದಿ ತಟದಲ್ಲಿ ಕ್ಷೇತ್ರ ಜೀರ್ಣೋದ್ಧಾರಗೊಂಡು ದೈವಗಳ ಆರಾಧನಾ ಕ್ಷೇತ್ರವಾಗಿ ಮೂಡಿ ಬಂದಿದೆ. ಪಂಜುರ್ಲಿ ದೈವದ ಮುಗ ವು ಸುಮಾರು 400 ವರ್ಷಗಳ ಹಳೆಯದ್ದಾಗಿದೆ ಎಂದು ಹಿರಿಯರು ನೆನೆಪಿಸಿಕೊಂಡಿದ್ದಾರೆ.
ದೈವಜ್ಞ ಶಶಿಪಂಡಿತ್ ಅವರ ನೇತ್ರತ್ವದಲ್ಲಿ ಪ್ರಶ್ವಾಚಿಂತನೆ ನಡೆದು ಉಳಿಪ್ಪಾಡಿಗುತ್ತುವಿನ ಸುಬ್ಬಯ್ಯ ಮಾರ್ಲ, ಕೃಷ್ಣರಾಜ್ ಮಾರ್ಲ ಮತ್ತು ರಿತೇಶ್ ಮಾರ್ಲ ಅವರ ನೇತ್ರತ್ವದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯಿತು. ವಾಸ್ತು ತಜ್ಞರಾದ ಕುಡುಪು ಶ್ರೀ ಕೃಷ್ಣರಾಜ ತಂತ್ರಿ ಇವರ ಮಾರ್ಗದರ್ಶನದಲ್ಲಿ ನಟ್ಟಿಲ ಪಂಜುರ್ಲಿ ದೇವಸ್ಥಾನ,ಒಡ್ಯನೇಶ್ವರಿ ದೈವಸ್ಥಾನ ಮತ್ತು ಕಲ್ಲುರ್ಟಿ ತೂಕತ್ತೆರಿ ದೇವಸ್ಥಾನ ಸುಂದರವಾಗಿ ನಿರ್ಮಾಣಗೊಂಡಿದ್ದು, ಭಕ್ತ ಸಮೂಹವನ್ನು ಆಕರ್ಷಿಸಿದೆ.
ಪ್ರತಿಷ್ಠಾ ಕಲಶಾಭಿಷೇಕ ಮತ್ತು ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮವು ಕಾವೂರು ವಿನಾಯಕ ಕಾರಂತ ಅವರ ನೇತ್ರತ್ವದಲ್ಲಿ ನಡೆಯಿತು. ರಾತ್ರಿ ದೈವಗಳಿಗೆ ನೇಮೋತ್ಸವ ನಡೆಯಿತು.ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಆಗಮಿಸಿ ದೈವದ ಅನ್ನಸಂತರ್ಪಣೆ ಸ್ವೀಕರಿಸಿದರು.
ಸತೀಶ್ ಶೆಟ್ಟಿ ಪಟ್ಲ ಅವರ ಯಕ್ಷದ್ರುವ ತಂಡದ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ವೈಭವ ಕಾರ್ಯಕ್ರಮ ನಡೆಯಿತು. ದೇವಸ್ಥಾನಕ್ಕೆ ಮುತ್ತೂರು ಮಟ್ಟು ಫ್ರೆಂಡ್ಸ್ ಕೊಡುಗೆಯಾಗಿ ನೀಡಿದ ಸ್ವಾಗತ ದ್ವಾರವನ್ನು ಉದ್ಘಾಟಿಸಲಾಯಿತು.
ಈ ಸಂಧರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಶಾಸಕರುಗಳಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ವೈ ಭರತ್ ಶೆಟ್ಟಿ, ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವರುಗಳಾದ ಬಿ. ನಾಗರಾಜ ಶೆಟ್ಟಿ, ಬಿ.ರಮಾನಾಥ ರೈ, ಪನುವೆಲು ಮಹಾನಗರ ಪಾಲಿಕೆ ನಗರ ಸೇವಕ ಸಂತೋಷ್ ಶೆಟ್ಟಿ ದಳಂದಿಲ, ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿಗಳಾದ ಮಿಥುನ್ ರೈ, ಇನಾಯತ್ ಆಲಿ,ಇರುವೈಲು ಪಾನಿಲ ಸತೀಶ್ ಸಾಲಿಯಾನ್, ಉಳಿಪ್ಪಾಡಿಗುತ್ತು ಪ್ರಸನ್ನಕುಮಾರ್ ಶೆಟ್ಟಿ, ಸುಭಾಷ್ ಚಂದ್ರ ನಾಯಕ್, ಪೊಳಲಿ ದೇವಸ್ಥಾನದ ಆಡಳಿತ ಮೋಕ್ತೇಸರಾದ ಡಾ.ಮಂಜಯ್ಯ ಶೆಟ್ಟಿ,ಉದಯ ಕುಮಾರ್ ರಾವ್ ಬಂಟ್ವಾಳ, ಗೋವಿಂದ ಪ್ರಭು, ಬಂಟ್ವಾಳ ಬಿಲ್ಲವ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಕೆ.ಎಂ.ಎಫ್.ನಿರ್ದೇಶಕ ನಂದರಾಮ ರೈ ಬೆಳ್ಳುರು ಪರಾರಿ, ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯ ಹರಿಯಪ್ಪ ಮುತ್ತೂರು, ಮುತ್ತೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರವೀಣ್ ಆಳ್ವ, ಬಜ್ಪೆ ಪೋಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಬಾಲಕೃಷ್ಣ , ಶ್ರೀಕಾಂತ್ ಶೆಟ್ಟಿ ಸಜೀಪ, ಮಾಜಿ ತಾ.ಪಂ.ಸದಸ್ಯ ಸಚಿನ್ ಅಡಪ, ಕರಿಯಂಗಳ ಗ್ರಾ.ಪಂ.ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಮಾಜಿ ಜಿ.ಪಂ.ಸದಸ್ಯ ವಿನೋದ್ ಮಾಡ,ಆರ್ ಕೆ.ಪ್ರಥ್ವಿರಾಜ್ , ಪ್ರಮುಖರಾದ ಪುರುಷೋತ್ತಮ ಸಾಲಿಯಾನ್ ನರಿಕೊಂಬು, ಸುದರ್ಶನ ಬಜ,ರಾಮಕೃಷ್ಣ ಕ್ರೆಡಿಟ್ ಕೋ.ಆಪರೇಟವ್ ಬ್ಯಾಂಕ್ ಅಧ್ಯಕ್ಷ ಜಯರಾಜ್ ರೈ
ಮತ್ತಿತರ ಗಣ್ಯರು ಕ್ಷೇತ್ರಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಪ್ರತಿಷ್ಢಾ ಕಲಶಾಭಿಷೇಕ ಸಮಿತಿ ಇದರ ಅಧ್ಯಕ್ಷರಾದ ಶಿವಾನಂದ ಕುಲಾಲ್, ಗೌರವ ಅಧ್ಯಕ್ಷರುಗಳಾದ ಚಂದ್ರಹಾಸ ಶೆಟ್ಟಿ, ನಾಗೇಶ್ ಶೆಟ್ಟಿ, ಪ್ರಥ್ವಿ ಅಳ್ವ, ಚಂದ್ರಹಾಸ ಶೆಟ್ಟಿ ನಾರ್ಲ, ವಿದ್ಯಾಚರಣ್ ಭಂಡಾರಿ ಮೊಗರುಗುತ್ತು, ಕುಮಾರ್ ಆಳ್ವ, ತಾರಾನಾಥ ಕುಲಾಲ್, ಜಗದೀಶ್ ಪಾಕಾಜೆ,ಸೂರಜ್ ಕುಲಾಲ್ ,ರವಿಕುಲಾಲ್,ಶೇಖರ್ ಕುಲಾಲ್ ಕಾರ್ಯದರ್ಶಿಗಳಾದ ಪವನ್ ಕುಮಾರ್ ಶೆಟ್ಟಿ, ಶಂಕರ್ ಶೆಟ್ಟಿ, ನಿತ್ಯಾನಂದ ಕೊಳವೂರು, ಯೋಗೀಶ್ ಕುಲಾಲ್, ಕುಸುಮಾಕರ ಶೆಟ್ಟಿ, ದೀಪಕ್ ಪೂಜಾರಿ,ದಿಪ್ತೇಶ್ ಪೂಜಾರಿ, ಲಕ್ಷ್ಮಣ್ ಕುಲಾಲ್ ಅವರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ದೈವಾರಾಧನೆ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









