ಮಂಗಳೂರು : ಕನ್ನಡ ಚಿತ್ರರಂಗದ ಜನಪ್ರಿಯ ನಟಿ, “ಡಿಂಪಲ್ ಕ್ವೀನ್” ಎಂದೇ ಖ್ಯಾತರಾಗಿರುವ ರಚಿತಾ ರಾಮ್ ಅವರು ತುಳುನಾಡಿನ ಪರಮ ಪೂಜನೀಯ ಶಕ್ತಿ ಹಾಗೂ ಆರಾಧ್ಯ ದೈವವಾದ ಕೊರಗಜ್ಜನಿಗೆ ಹರಕೆ ಕೋಲವನ್ನು ಸಮರ್ಪಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿರುವ ಕೊರಗಜ್ಜ ಸನ್ನಿಧಿಯಲ್ಲಿ ಈ ವಿಶೇಷ ಧಾರ್ಮಿಕ ಸೇವೆ ನೆರವೇರಿದೆ. ತಾವು ಅಂದುಕೊಂಡಿದ್ದ ಕಾರ್ಯಗಳು ಹಾಗೂ ಮನದ ಹರಕೆಗಳು ಈಡೇರಿದ ಹಿನ್ನೆಲೆಯಲ್ಲಿ, ದೈವಕ್ಕೆ ಕೋಲ ಸೇವೆ ನೀಡುವುದಾಗಿ ಮಾಡಿಕೊಂಡಿದ್ದ ಪ್ರಾರ್ಥನೆಯನ್ನು ನಟಿ ಈಗ ಭಕ್ತಿಯಿಂದ ಪೂರ್ಣಗೊಳಿಸಿದ್ದಾರೆ.
ಸ್ಯಾಂಡಲ್ವುಡ್ನ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಯಶಸ್ವಿ ನಾಯಕಿಯಾಗಿ ಗುರುತಿಸಿಕೊಂಡಿರುವ ರಚಿತಾ ರಾಮ್, ಪ್ರಸ್ತುತ ಸಿನಿಮಾ ರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸದ್ಯ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ‘ಕ್ರಿಮಿನಲ್’ ಹಾಗೂ ನೀನಾಸಂ ಸತೀಶ್ ಜೋಡಿಯಾಗಿ ‘ಅಯೋಗ್ಯ 2’ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಕಾಲಿವುಡ್ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯೊಂದರ ಜೊತೆ ಮಾತುಕತೆ ಪ್ರಗತಿಯಲ್ಲಿದ್ದು, ಟಾಲಿವುಡ್ನಲ್ಲೂ ಎರಡು ಹೊಸ ಸಿನಿಮಾಗಳ ಅಧಿಕೃತ ಘೋಷಣೆ ಇದೇ ತಿಂಗಳು ಹೊರಬೀಳಲಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









