ಮಂಗಳೂರು : ವಿದೇಶಕ್ಕೆ ತೆರಳಿ ಕೆಲಸ ಮಾಡಿ ಹಣ ಸಂಪಾದಿಸುವ ಆಸೆಯಲ್ಲಿ ಮಂಗಳೂರಿನ ಹಲವು ನಿವಾಸಿಗಳು ನಕಲಿ ಏಜೆಂಟ್ಗಳನ್ನು ನಂಬಿ ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡು ಮೋಸ ಹೋಗುತ್ತಿರುವ ಪ್ರಕರಣಗಳು ಹೆಚ್ಛಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಿದೇಶಿ ಉದ್ಯೋಗಾಕಾಂಕ್ಷಿಗಳು ಅತ್ಯಂತ ಜಾಗರೂಕರಾಗಿರಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ವಿದೇಶಗಳಲ್ಲಿ ಕೆಲಸ ಕೊಡಿಸುವ ಪ್ರತಿಯೊಬ್ಬ ಏಜೆಂಟ್ ಅಥವಾ ಸಂಸ್ಥೆಯು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಅಡಿಯಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಂಡಿರಬೇಕು. ಮಂಗಳೂರು ನಗರದಲ್ಲೂ ಸುಮಾರು 25 ರಿಂದ 30 ಅಧಿಕೃತ ಮತ್ತು ನೋಂದಾಯಿತ ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಸಾರ್ವಜನಿಕರು ಈ ನೋಂದಾಯಿತ ಏಜೆನ್ಸಿಗಳನ್ನು ಬಿಟ್ಟು ಅನಧಿಕೃತ ಹಾಗೂ ನಕಲಿ ಏಜೆಂಟ್ಗಳ ಬಳಿ ಹೋಗಿ ಹಣ ಕೊಟ್ಟು ವಂಚನೆಗೆ ಒಳಗಾಗುತ್ತಿದ್ದಾರೆ.
ಹಣ ಕಳೆದುಕೊಂಡು ಮೋಸ ಹೋದ ನಂತರ ಪೊಲೀಸರಿಗೆ ದೂರು ನೀಡಲು ವಿಳಂಬ ಮಾಡುವುದರಿಂದ, ಆರೋಪಿಗಳನ್ನು ಬಂಧಿಸಿದರೂ ವಂಚನೆಗೊಳಗಾದ ಹಣವನ್ನು ಹಿಂಪಡೆಯುವುದು (Recovery) ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಜಾಗೃತರಾಗಿರಬೇಕು ಹಾಗೂ ವಿದೇಶಕ್ಕೆ ಹೋಗುವ ಮುನ್ನ ಅಧಿಕೃತ ವೆಬ್ಸೈಟ್ ಆದ https://emigrate.gov.in ಗೆ ಭೇಟಿ ನೀಡಿ ನೋಂದಾಯಿತ ಏಜೆಂಟರ ಪಟ್ಟಿಯನ್ನು ಪರಿಶೀಲಿಸಿ, ಅವರ ಮೂಲಕವೇ ಅರ್ಜಿ ಸಲ್ಲಿಸಬೇಕೆಂದು ಪೊಲೀಸ್ ಆಯುಕ್ತರು ವಿನಂತಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









