ಮಂಗಳೂರು : ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗುತ್ತಿರುವ ಕುಡಾಳ್ ದೇಶ್ಕರ್ ಸಮಾಜದ ಮೂರು ದಿನಗಳ ವಿದ್ಯಾರ್ಥಿಗಳ ಸನಿವಾಸ ವ್ಯಕ್ತಿತ್ವ ವಿಕಸನ ಹಾಗೂ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರದಲ್ಲಿ ದಿ.18-07-2025 ಸಂಜೆ ವಿಶೇಷವಾಗಿ ಆಹ್ವಾನಿತರಾದ ಮಂಗಳೂರು ಅಸಿಸ್ಟೆಂಟ್ ಕಮಿಷನರ್ ಪೊಲೀಸ್ ಶ್ರೀಮತಿ ಗೀತಾ ಕುಲಕರ್ಣಿ ಅವರಿಂದ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಸೈಬರ್ ಅಪರಾಧಗಳು ಹಾಗೂ ಆನ್ಲೈನ್ ಮುಖಾಂತರ ನಡೆಯುತ್ತಿರುವ ವಂಚನೆ ಮೋಸಗಳ ಮಾಹಿತಿಯನ್ನು ನೀಡುತ್ತಾ, ಅದನ್ನು ತಡೆಗಟ್ಟುವ ಹಾಗೂ ಕಾನೂನಿನ ಅರಿವನ್ನು ಮೂಡಿಸುವ ಬಗ್ಗೆ ವಿಶೇಷ ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಶಿಬಿರಾರ್ಥಿಗಳು ತಮ್ಮಲ್ಲಿರುವ ಸಂಶಯಗಳನ್ನು ಪ್ರಶ್ನೆಗಳ ಮೂಲಕ ತಿಳಿದುಕೊಂಡರು. ಮಾತ್ರವಲ್ಲದೆ ಸಂವಾದ ನಡೆಸಿ, ಮಾಹಿತಿಯನ್ನು ಪಡೆದುಕೊಂಡರು. ಕೆಲವರು ತಮ್ಮ ತಮ್ಮ ಬದುಕಿನಲ್ಲಿ ನಡೆದಿರುವ ಸೈಬರ್ ಅಪರಾಧ ಅಥವಾ ವಂಚನೆಗಳ ಬಗ್ಗೆ ಅನುಭವವನ್ನು ಹಂಚಿಕೊಂಡು ಪರಿಹಾರದ ಬಗ್ಗೆ ತಿಳಿದುಕೊಂಡರು. ಈ ಸಂದರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಕಾರ್ಯನಿರ್ವಹಣಾ ಅಧಿಕಾರಿಯಾದ ಡಾ.ಬಿ. ದೇವದಾಸ್ ಪೈ ಹಾಗೂ ಕೇಂದ್ರದ ಉಪಾಧ್ಯಕ್ಷರಾದ ಡಿ ರಮೇಶ ನಾಯಕ್ ಮೈರಾ, ಹಾಗೂ ದ.ಕ.ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಮತ್ತು ಪ್ರತಿಷ್ಠಾನದ ಅಧ್ಯಕ್ಷರಾದ ಮುರಳೀಧರ ಪ್ರಭು ವಗ್ಗ, ಕಾರ್ಯದರ್ಶಿಗಳಾದ ರವೀಂದ್ರ ನಾಯಕ್ ಕುಂಟಲ್ಪಾಡಿ, ಉಪೇಂದ್ರ ನಾಯಕ್ ಗುರುನಗರ, ಅನಂತ ನಾಯಕ್ ಮೇರೀಹಿಲ್, ಮೋಹನ್ ನಾಯಕ್ ಒಡ್ಡೂರು, ನಿಕಟಪೂರ್ವ ಅಧ್ಯಕ್ಷರಾದ ವಿಜಯ ಶೆಣೈ ಕೊಡಂಗೆ, ಸುಚಿತ್ರ ರಮೇಶ ನಾಯಕ್, ದಿವಾಕರ್ ಶೆಣೈ ಮರೋಳಿ, ನಾಗೇಶ್ ನಾಯಕ್ ಕುಂಟಲ್ಪಾಡಿ, ಮುಂತಾದವರು ಉಪಸ್ಥಿತರಿದ್ದರು. ಮನೋಜ್ ಕುಮಾರ್ ಹಾಗೂ ಆಕಾಶ್ ಇವರು ಸಹಕರಿಸಿದರು. ಡಾ. ವಿಜಯಲಕ್ಷ್ಮಿ ನಾಯಕ್, ಇವರು ಪ್ರಾಸ್ತಾವಿಕ ನುಡಿದು, ಕಾರ್ಯಕ್ರಮವನ್ನು ನಿರೂಪಿಸಿದರು. ಸ್ವಾತಿ ನಾಯಕ್ ಒಡ್ಡೂರು ಧನ್ಯವಾದವಿತ್ತರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









