ಧರ್ಮಸ್ಥಳ : ಧರ್ಮಸ್ಥಳದಲ್ಲಿ ಎಸ್ ಐಟಿ ತಂಡ ನಡೆಸುತ್ತಿರುವ ಶೋಧ ಕಾರ್ಯದಲ್ಲಿ ಸೋಮವಾರ ದೂರುದಾರ ಹೇಳಿದ ಹೊಸ ಜಾಗದಲ್ಲಿ ಉತ್ಘನನ ಮಾಡಿದಾಗ ಮೃತದೇಹದ ಅವಶೇಷಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ.
11ನೇ ಸ್ಥಳ ಉತ್ಘನನ ವೇಳೆ ದೂರುದಾರ ನೇತ್ರಾವತಿ ಸ್ನಾನಘಟ್ಟದ ಸಮೀಪವಿರುವ ಹೆದ್ದಾರಿ ಬದಿಯ ಕಾಡಿಗೆ ಕರೆದೊಯ್ದಿದ್ದಾನೆ.
ಹೊಸ ಜಾಗದಲ್ಲಿ ನಾಲ್ಕು ಗಂಟೆಗಳಿಂದ ಕಾರ್ಯಾಚರಣೆ ನಡೆದಿದ್ದು ಮನುಷ್ಯನ ಮೃತದೇಹದ ಅವಶೇಷಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಎಸ್ಐಟಿ ಅಧಿಕಾರಿಗಳು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಾಡಿನೊಳಗೆ ಪ್ರವೇಶಿಸಿರುವ ಎಸ್ಐಟಿ ತಂಡವು ಕಾರ್ಯಾಚರಣೆ ನಡೆಸಿ ವಾಪಸಾಗಿದೆ. ಇಲ್ಲಿಗೆ ಎರಡು ಚೀಲ ಉಪ್ಪನ್ನು ಕೊಂಡೊಯ್ಯಲಾಗಿರುವುದು ಭಾರೀ ಕುತೂಹಲ ಮೂಡಿಸಿದೆ. ಸುಮಾರು 20 ಕಾರ್ಮಿಕರನ್ನು ಬಳಸಿಕೊಂಡು ಶೋಧ ಕಾರ್ಯ ನಡೆದಿದ್ದು, ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಮತ್ತು ಎಸ್ಐಟಿ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಸ್ಥಳದಲ್ಲಿದ್ದರು. ನಾಲ್ವರು ಶಸ್ತ್ರಸಜ್ಜಿತ ಪೊಲೀಸರೂ ಅವರೊಂದಿಗೆ ಇದ್ದರು..
ದೂರುದಾರನ ಪರ ವಕೀಲರು ಮತ್ತಷ್ಟು ಪಾಯಿಂಟ್ ಗುರುತಿಸಲು ಅವಕಾಶ ಕೊಡಿ ಎಂದು ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ಗೆ ಒತ್ತಾಯ ಮಾಡಿದ್ದಾರೆ. ಆದರೆ, ವಕೀಲರ ಮನವಿಯನ್ನು ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ತಿರಸ್ಕರಿಸಿದ್ದಾರೆ. ಸದ್ಯಕ್ಕೆ 13 ಸ್ಥಳಗಳಲ್ಲಿ ಮಾತ್ರ ಶೋಧಿಸುತ್ತೇವೆ. ಎಸ್ಐಟಿ ಸೂಚಿಸಿದಲ್ಲಿ ಮಾತ್ರ ನಾವು ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, Uncategorized, ಟಾಪ್ ಸುದ್ದಿ, ಸುದ್ದಿಗಳು









