ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ವಿವಿದೆಡೆ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ ಪ್ರಕರಣದ ತನಿಖೆಯಲ್ಲಿ ಅತ್ಯಂತ ಮಹತ್ವದ ಬೆಳವಣಿಗೆ ನಡೆದಿದ್ದು, ಜಿ.ಪಿ.ಆರ್ ಯಂತ್ರವನ್ನು ಉಪಯೋಗಿಸಿ ಎಸ್ಐಟಿ ತನಿಖೆ ಆರಂಭಿಸಿದೆ.
ಇಂದು ಎಸ್.ಐ.ಟಿ ತಂಡ ಹಾಗೂ ಜಿ.ಪಿ.ಆರ್ ತಜ್ಞರ ತಂಡ ಸಾಕ್ಷಿ ದೂರುದಾರ ಗುರುತಿಸಿದ 13ನೆಯ ಸ್ಥಳದಲ್ಲಿ ಜಿ.ಪಿ. ಆರ್ ನಿಂದ ಪರಿಶೀಲನೆಗೆ ಸಿದ್ದತೆಗಳು ನಡೆದಿದ್ದು, ಜಿ.ಪಿ.ಆರ್ ಯಂತ್ರವನ್ನು ನೇತ್ರಾವತಿ ಸ್ನಾನಘಟ್ಟದ ಸಮೀಪ ಗುರುತಿಸಿದ 13ನೆಯ ಸ್ಥಳಕ್ಕೆ ತರಲಾಗಿದ್ದು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
13 ನೇ ಜಾಗದ ಶೋಧ ಕಗ್ಗಂಟಾಗಿದೆ, ಈ ಸ್ಥಳದ ವಿಸ್ತೀರ್ಣವೂ ದೊಡ್ಡದಾಗೊದೆ. ಪಕ್ಕದಲ್ಲೇ ಕಿಂಡಿ ಅಣೆಕಟ್ಟು ಇದೆ. ಮೆಸ್ಕಾಂನ ಟ್ರಾನ್ಸ್ಫಾರ್ಮರ್ ಕಂಬಗಳು ಕೂಡಾ ಇವೆ. ಹೀಗಾಗಿ ಅಗೆಯುವ ಬದಲು ರೇಡಾರ್ ಮೂಲಕ ಭೂಮಿ ಒಳಗಡೆ ಏನಿದೆ ಎಂಬುದನ್ನು ಪತ್ತೆ ಹಚ್ಚಲು ಜಿ.ಪಿ.ಆರ್ ಯಂತ್ರ ಬಳಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









