ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ಸಂಘದ ಶತಮಾನೋತ್ಸವದ ಸಂಭ್ರಮಾಚರಣೆಯ ಅಂಗವಾಗಿ 2025ರ ಸಾಂಸ್ಕೃತಿಕ ದಿನವನ್ನು ಯಶಸ್ವಿಯಾಗಿ ಆಚರಿಸಲಾಯಿತು. ಊರ್ವ ಸ್ಟೋರ್ನಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನವು ಈ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಪಾಲಿಕೆಯ ಸಿಬ್ಬಂದಿ ವರ್ಗದವರು ಅತ್ಯುತ್ಸಾಹದಿಂದ ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮವನ್ನು ಪಾಲಿಕೆಯ ಆಯುಕ್ತರಾದ ರವಿಚಂದ್ರ ನಾಯಕ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಪ ಆಯುಕ್ತರಾದ ನರೇಶ್ ಶಣೈ, ಉಪ ಆಯುಕ್ತರಾದ ಅಕ್ಷತಾ ಮತ್ತು ವಾಣಿ ಆಳ್ವ, ಹಾಗೂ ವಲಯ ಆಯುಕ್ತೆ ರೇಖಾ ಜೆ. ಶೆಟ್ಟಿ ಸೇರಿದಂತೆ ಪಾಲಿಕೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಶತಮಾನೋತ್ಸವ ಸಮಿತಿ ಮತ್ತು ನೌಕರರ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ್ದರು. ಸಮಿತಿಯ ಗೌರವಾಧ್ಯಕ್ಷರಾದ ಬಾಲಕೃಷ್ಣ ಗೌಡ, ಗೌರವ ಸಂಚಾಲಕರಾದ ಪುಷ್ಪರಾಜ್ ಎಚ್., ಮತ್ತು ಸಮಿತಿಯ ಅಧ್ಯಕ್ಷರಾದ ಸುಶಾಂತ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು. ನೌಕರರ ಸಂಘ (ಎಸ್ ಕೆ ಮುನ್ಸಿಪಲ್ ಯೂನಿಯನ್) ಅಧ್ಯಕ್ಷರಾದ ಬಾಲು, ಉಪಾಧ್ಯಕ್ಷರಾದ ಪ್ರೇಮಾನಂದ, ಹಾಗೂ ಕಾರ್ಯದರ್ಶಿ ವಾಸುದೇವ ಶೆಟ್ಟಿ ಅವರು ಉಪಸ್ಥಿತರಿದ್ದು ಸಂಘಟನೆಯ ಜವಾಬ್ದಾರಿಗಳನ್ನು ನಿರ್ವಹಿಸಿದರು.
ಸಾಂಸ್ಕೃತಿಕ ಸಮಿತಿಯ ಉಸ್ತುವಾರಿಯಾದ ಶಿವಲಿಂಗಪ್ಪ ಎಂ ಎನ್., ಶ್ವೇತಾ ಸುಧಾಕರ್, ಸುಮಿತ್ರ ರಮೇಶ್ ಮತ್ತು ನಿರ್ದೇಶಕರುಗಳಾದ ದಯಾನಂದ, ಲಕ್ಷ್ಮಿಕಾಂತ್, ಇಂದಿರಾ, ಶ್ವೇತಾ, ಶರಣ್ ಕುಮಾರ್, ಮೋಹನ್ ಕುಮಾರ್, ಜಗದೀಶ್, ಮುಕೇಶ್, ಹಾಗೂ ರಾಜು ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಲಕ್ಷ್ಮೀಶ ಮತ್ತು ಮಂಜುಳಾ ಅವರು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









