ಮಂಗಳೂರು : ಚೇತನಾ ವಿಶೇಷ ಶಾಲೆಯ ವೃತ್ತಿ ಶಿಕ್ಷಣ ತರಬೇತಿ ವಿಭಾಗದಲ್ಲಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿ ವಿವಿಧ ರೀತಿಯ ಕರಕುಶಲ ವಸ್ತುಗಳನ್ನು ತಯಾರಿಸಿ ಜನ ಮೆಚ್ಚುಗೆ ಗಳಿಸಿರುತ್ತಾರೆ. ವಿದ್ಯಾರ್ಥಿಗಳಿಂದ ತಯಾರುಗೊಂಡ ಸಿದ್ಧ ವಸ್ತುಗಳನ್ನು ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ತಮ್ಮ ಸಭೆ ಸಮಾರಂಭಗಳಲ್ಲಿ ಸ್ಮರಣಿಕೆ ರೂಪದಲ್ಲಿ ಅತಿಥಿ ಗಣ್ಯರಿಗೆ ನೀಡಲು ಅದನ್ನು ಖರೀದಿಸುತ್ತಿದ್ದಾರೆ.
ಇದೀಗ ಸೇವಾ ಕ್ಷೇತ್ರದ ಮುಂದುವರಿದ ಅಂಗವಾಗಿ ವಿದ್ಯಾರ್ಥಿಗಳು ಸ್ವಾವಲಂಬಿಯಾಗಿ ಬದುಕಲು ನಡೆಸುವ ಪ್ರಯತ್ನದಲ್ಲಿ ಅವರಿಗೆ ಪರಿಸರ ಸ್ನೇಹಿ ಮರು ಬಳಕೆಯ ಕೈ ಚೀಲಗಳನ್ನು ಸಿದ್ಧಗೊಳಿಸುವ ತರಬೇತಿ ನೀಡಿ ಅವರು ಸಿದ್ಧಗೊಳಿಸಿದ ಕೈ ಚೀಲಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಕಾರ್ಯಕ್ರಮವು ದಿನಾಂಕ 23.12.2025ನೇ ಮಂಗಳವಾರ ಪೂರ್ವಾಹ್ನ ಘಂಟೆ 10.30ಕ್ಕೆ ನಡೆಯಲಿದ್ದು ತಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಈ ಪರಿಶ್ರಮಕ್ಕೆ ಪ್ರೋತ್ಸಾಹಿಸಬೇಕಾಗಿ ತಮ್ಮಲ್ಲಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9480531469, 7619255170
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









