ಮಂಗಳೂರು: ಹೊಸ ವರ್ಷದ ಮೊದಲ ದಿನದ ಅಂಗವಾಗಿ ಮಂಗಳೂರಿನ ಐತಿಹಾಸಿಕ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅತ್ಯಂತ ಭಕ್ತಿ ಮತ್ತು ಸಡಗರದಿಂದ ಬೆಳ್ಳಿ ರಥೋತ್ಸವ ಜರುಗಿತು. 2026ರ ಮೊದಲ ದಿನವನ್ನು ದೈವದರ್ಶನದೊಂದಿಗೆ ಆರಂಭಿಸಲು ಸಾವಿರಾರು ಭಕ್ತರು ಮುಂಜಾನೆಯೇ ದೇವಸ್ಥಾನದತ್ತ ಧಾವಿಸಿದ್ದರು.
ಕ್ಷೇತ್ರದಲ್ಲಿ ಬೆಳಿಗ್ಗೆ ವಿಶೇಷವಾಗಿ ನಡೆದ ಧನುಪೂಜೆಯ ನಂತರ ಶ್ರೀ ಗೋಕರ್ಣನಾಥ ದೇವರ ಬೆಳ್ಳಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥಾರೂಢರಾದ ಗೋಕರ್ಣನಾಥ ಸ್ವಾಮಿಯ ಮಂಗಲ ದರ್ಶನವನ್ನು ಪಡೆದ ಭಕ್ತರು, ಹರ್ಷೋದ್ಗಾರಗಳೊಂದಿಗೆ ಬೆಳ್ಳಿ ರಥವನ್ನು ಎಳೆದು ಪುನೀತರಾದರು.
ವರ್ಷದ ಮೊದಲ ದಿನದಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ರಥೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಭಕ್ತರು ಮಂಗಲಕರ ಆರಂಭವನ್ನು ಮಾಡಿದರು. ಕುದ್ರೋಳಿ ಕ್ಷೇತ್ರದ ಪರಿಸರವು ಭಕ್ತಾದಿಗಳ ಜೈಕಾರ ಮತ್ತು ದೈವಿಕ ಸಂಭ್ರಮದಿಂದ ಕಳೆಗಟ್ಟಿತ್ತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಹೊಸ ಸುದ್ದಿಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









