ಮಂಗಳೂರು: ಪರಿಸರದ ನೈರ್ಮಲ್ಯದ ಹೊಣೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಬೇಕು.ಎಲ್ಲರ ಜವಾಬ್ದಾರಿಯುತ ಭಾಗೀದಾರಿಕೆಯಿಂದ ಇದು ಸಾಕಾರವಾಗಬೇಕು. ಈ ನಿಟ್ಟಿನಲ್ಲಿ ವಿಶ್ವಕರ್ಮ ಬ್ಯಾಂಕ್ ಹಮ್ಮಿಕೊಂಡಿರುವ ಸ್ವಚ್ಛತಾ ಶ್ರಮದಾನ ಕಾರ್ಯ ನಮ್ಮೆಲ್ಲರಿಗೆ ಪ್ರೇರಣೆ ಎಂದು ಶ್ರೀರಾಮ ಮಂದಿರದ ಅಧ್ಯಕ್ಷರಾದ ಚೆನ್ನಪ್ಪ. ಆರ್. ಕೋಟ್ಯಾನ್ ಅವರು ಹೇಳಿದರು. ಅವರು ವಿಶ್ವಕರ್ಮ ಸಹಕಾರ ಬ್ಯಾಂಕಿನ ಮೆಲ್ಕಾರ್ ಶಾಖೆಯ ವತಿಯಿಂದ “ಸ್ವಚ್ಛತಾ ಹೀ ಸೇವಾ” ಧ್ಯೇಯದೊಂದಿಗೆ ನಡೆದ ಹದಿನೈದನೇ ಸ್ವಚ್ಛ ಭಾರತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಶ್ರಮದಾನದಲ್ಲಿ ಭಾಗವಹಿಸಿ ಮಾತನಾಡಿದ ಯುವ ಸಂಗಮ (ರಿ.) ಮೆಲ್ಕಾರ್ ಇದರ ಗೌರವಾಧ್ಯಕ್ಷರಾದ ಎಂ. ಏನ್. ಕುಮಾರ್ ರವರು ವಿಶ್ವಕರ್ಮ ಬ್ಯಾಂಕ್ ಒಂದು ಆರ್ಥಿಕ ಸಂಸ್ಥೆಯಾಗಿ ಸಾಮಾಜಿಕ ಕಾರ್ಯವನ್ನು ನಿರಂತರ ಸಂಘಟಿಸುತ್ತಿರುವುದು ಶ್ಲಾಘನೀಯ ಹಾಗೂ ಇವರೊಂದಿಗೆ ಹೆಚ್ಚಿನ ಸಂಘ ಸಂಸ್ಥೆಗಳು ಕೈಜೋಡಿಸಿ ಸ್ವಚ್ಛತೆಯ ಅರಿವು ಹಾಗೂ ಜಾಗೃತಿಯನ್ನು ಮೂಡಿಸುವತ್ತ ಕಾರ್ಯಪ್ರವೃತ್ತರಾಗಬೇಕೆಂದು ಎಂದು ಹೇಳಿದರು. ಹಾಗೆಯೇ ಬಿಲ್ಲವ ಸಮಾಜ ಸೇವಾ ಸಂಘ, ಕಲ್ಲಡ್ಕ ಇದರ ಅಧ್ಯಕ್ಷ ಶೇಖರ್ ಸಾಲಿಯನ್ ಇವರೊಂದಿಗೆ ಜೊತೆಗೂಡಿ ಹಸಿರು ನಿಶಾನೆ ತೋರಿಸುವ ಮೂಲಕ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಲ್ಲಡ್ಕ ಪರಿಸರದ ಮೇಲಿನಪೇಟೆ, ಕೆಳಗಿನಪೇಟೆ, ಶ್ರೀ ರಾಮ ವಿದ್ಯಾ ಕೇಂದ್ರ ರಸ್ತೆಯ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನವು ನಡೆಯಿತು.
ವಿಶ್ವಕರ್ಮ ಬ್ಯಾಂಕಿನ ನಿರ್ದೇಶಕರಾದ ಶ್ರೀ ಬಿಜು ಜಯ ಆಚಾರ್ಯ, ಶ್ರೀ ಜಯಪ್ರಕಾಶ್ ಭಂಡಾರಿಬೆಟ್ಟು, ಶ್ರೀ ಭರತ್ ನಿಡ್ಪಳ್ಳಿ, ಗೋಲ್ತಮಜಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಪ್ರೇಮ, ಶ್ರೀರಾಮ ಮಂದಿರ, ಕಲ್ಲಡ್ಕ ಇದರ ಸದಸ್ಯರು, ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ ಇದರ ವಿದ್ಯಾರ್ಥಿಗಳು, ಶ್ರೀ ಶಾರದ ಸೇವಾ ಪ್ರತಿಷ್ಠಾನ (ರಿ.)ಕಲ್ಲಡ್ಕ ಇದರ ಅಧ್ಯಕ್ಷ ಯತಿನ್ ಕುಮಾರ್ ಹಾಗೂ ಸದಸ್ಯರು, ಬಿಲ್ಲವ ಸಮಾಜ ಸೇವ ಸಂಘ,ಕಲ್ಲಡ್ಕ ಇದರ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣ ತಂಡ ಗೋಲ್ತಮಜಲು ವಲಯ ಇದರ ಅಧ್ಯಕ್ಷ ಮಾಧವ ಸಾಲಿಯಾನ್ ಹಾಗೂ ಸದಸ್ಯರು, ಯುವ ಸಂಗಮ ಮೆಲ್ಕಾರ್ ಇದರ ಸದಸ್ಯರು, ನಾಗಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ಇದರ ಅಧ್ಯಕ್ಷ ನಾಗರಾಜ್ ಮತ್ತು ಸದಸ್ಯರು, ಶ್ರೀರಾಮ ಫ್ರೆಂಡ್ಸ್ ಕಲ್ಲಡ್ಕ ಇದರ ಸದಸ್ಯರು, ಕುರ್ಮನ್ ಫ್ರೆಂಡ್ಸ್ ಇದರ ಸದಸ್ಯರು, ಮೆಲ್ಕಾರ್ ಶಾಖಾ ವ್ಯವಸ್ಥಾಪಕರಾದ ಶ್ರೀಮತಿ ಉಷಾ ಕೆ ಹಾಗೂ ಸಿಬ್ಬಂದಿಗಳು ಸೇರಿದಂತೆ ಬೇರೆ ಬೇರೆ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಪದಾಧಿಕಾರಿಗಳು, ಬ್ಯಾಂಕಿನ ಸದಸ್ಯರು , ಗ್ರಾಹಕರು ಸ್ವಯಂ ಸೇವಕರಾಗಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಸಹಕರಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









