ಮಂಗಳೂರು: ಕದ್ರಿ ಶಿವಭಾಗ್ ಬಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ಕೇರಳದ ಕುಂಬಳೆ ಮೂಲದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾಸರಗೋಡು ಜಿಲ್ಲೆಯ ಪೆರುವಾಡ್ ನಿವಾಸಿ ರೋಶನ್ (22) ಎಂಬಾತನೇ ಸಾವಿಗೆ ಶರಣಾದ ದುರ್ದೈವಿ. ಈತ ಕಳೆದ ನಾಲ್ಕು ತಿಂಗಳಿನಿಂದ ಕದ್ರಿ ಪಾರ್ಕ್ ಬಳಿಯ ಐಸ್ಕ್ರೀಂ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸ್ನೇಹಿತರೊಂದಿಗೆ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದ. ಬುಧವಾರ ಬೆಳಿಗ್ಗೆ ರೋಶನ್ ಕೊಠಡಿಯಿಂದ ಹೊರಬಾರದಿದ್ದಾಗ ಆತಂಕಗೊಂಡ ಸಹಪಾಠಿಗಳು ಬಾಗಿಲು ತೆರೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಘಟನಾ ಸ್ಥಳದಲ್ಲಿ ಮನಕಲಕುವ ದೃಶ್ಯಗಳು ಕಂಡುಬಂದಿದ್ದು, ರೋಶನ್ ಮೊದಲು ತನ್ನ ಕೈಯನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಕೊಠಡಿಯ ತುಂಬೆಲ್ಲಾ ರಕ್ತದ ಕಲೆಗಳಿದ್ದು, ತನ್ನ ರಕ್ತದಲ್ಲೇ ಯುವತಿಯೊಬ್ಬಳ ಹೆಸರನ್ನು ಬರೆದಿಟ್ಟಿದ್ದಾನೆ ಎನ್ನಲಾಗಿದೆ. ಅಲ್ಲದೆ, ಆತ್ಮಹತ್ಯೆಗೂ ಮುನ್ನ ವಾಟ್ಸಾಪ್ ಸ್ಟೇಟಸ್ನಲ್ಲಿ “ಇದು ನನ್ನ ಕೊನೆಯ ಸ್ಟೇಟಸ್” ಎಂದು ಬರೆದುಕೊಂಡಿದ್ದ. ಕೊಠಡಿಯಲ್ಲಿ ಮದ್ಯದ ಬಾಟಲಿಗಳು ಸಹ ಪತ್ತೆಯಾಗಿವೆ. ಮೃತ ಯುವಕ ಪ್ರೇಮ ವೈಫಲ್ಯದಿಂದ ಮನನೊಂದು ಈ ನಿರ್ಧಾರ ತಳೆದಿರಬಹುದು ಎಂದು ಶಂಕಿಸಲಾಗಿದೆ.
ರೋಶನ್ ಏಳು ತಿಂಗಳ ಹಿಂದೆಯೂ ತನ್ನ ಸ್ವಗ್ರಾಮದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಕುಟುಂಬದ ಮೂಲಗಳು ಪೊಲೀಸರಿಗೆ ತಿಳಿಸಿವೆ. ಕದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಯುವಕನ ಈ ಕೃತ್ಯ ಆತನ ಗೆಳೆಯರು ಮತ್ತು ಕುಟುಂಬಸ್ಥರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ದುಖಾಂತ ಸುದ್ದಿಗಳು, ಸುದ್ದಿಗಳು









